ಧಾರವಾಡ: ಇಲ್ಲಿನ ಲೈನ್ ಬಜಾರ್‌ನಲ್ಲಿರುವ ಮಾರುತಿ ದೇವಸ್ಥಾನದಲ್ಲಿ ಏ. 6 ರಂದು ಹನುಮ ಜಯಂತಿ ಹಾಗೂ ಮಹಾರಥೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ದೇವಸ್ಥಾನ ವಿಶ್ವಸ್ಥ ಮಂಡಳಿ ನಿರ್ಧರಿಸಿದೆ.
6ರಂದು ಬೆಳಿಗ್ಗೆ 6.15ಕ್ಕೆ ಹನುಮ ದೇವರ ತೊಟ್ಟಿಲೋತ್ಸವ, ನಂತರ 12ರಿಂದ ಅನ್ನ ಸಂತರ್ಪಣೆ ಹಾಗೂ ಸಂಜೆ 4 ಗಂಟೆಗೆ 54ನೇ ವರ್ಷದ ಮಹಾ ರಥೋತ್ಸವ ಜರುಗಲಿದೆ.ರಥೋತ್ಸವಕ್ಕೆ ಶಹರ ಇನ್ಸಪೆಕ್ಟರ್ ಪ್ರಭು ಗಂಗೇನಹಳ್ಳಿ, ಸಂಚಾರ ಇನ್ಸಪೆಕ್ಟರ್ ಮಲ್ಲನಗೌಡ ನಾಯ್ಕರ ಚಾಲನೆ ನೀಡಲಿದ್ದಾರೆ.
ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಎಲ್ಲ ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಂಡು ಮಾರುತಿ ದೇವರ ಕೃಪೆಗೆ ಪಾತ್ರರಾಗಬೇಕೆಂದು ದೇವಸ್ಥಾನ ವಿಶ್ವಸ್ಥ ಮಂಡಳಿ ಚೇರಮನ್ ಎಸ್ .ಟಿ.ಮಲ್ಲಣ್ಣವರ, ಕಾರ್ಯದರ್ಶಿ ಪ್ರವೀಣ ಲಾಂಡೆ ಹಾಗೂ ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸರ್ವರಿಗೂ ಸದಸ್ಯರಾದ ಮಂಜುನಾಥ ಅಣ್ಣಿಗೇರಿ, ವಿಜಯ ಶಿಂಧೆ, ಅನೀಲ ಅಬೋಲೆ, ಗಿತೇಶ ರೇಗೆ, ಮಂಜು ಶೆಟ್ಟಿ, ಆಮಂತ್ರಿತರಾದ ಮುಕೇಶ ಢವಳೆ, ಮಂಜುನಾಥ ಲೋಲಿ, ರಾಕೇಶ ನಾಝರೆ, ಓಂಕಾರ ರಾಯಚೂರ, ತುಳಜಾಪ್ರಸಾದ ಪಾಂಡೆ, ಮಹಾಂತೇಶ ಉಳ್ಳಾಗಡ್ಡಿ ಆದರದ ಸ್ವಾಗತಿಸಿದ್ದಾರೆ.
ಭಕ್ತರು ಹನುಮ ಜಯಂತಿ ಅಂಗವಾಗಿ ಅನ್ನಸಂತರ್ಪಣೆಗೆ ದವಸ ಧಾನ್ಯ ನೀಡಿ ಮತ್ತು ಮಹಾ ರತೋತ್ಸವ ಕಾರ್ಯಕ್ರದಲ್ಲಿ ತನು, ಮನದಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾಗಬೇಕು ಎಂದು ವಿನಂತಿ.
ಪ್ರವೀಣ ಲಾಂಡೆ, ಕಾರ್ಯದರ್ಶಿ