ಹುಬ್ಬಳ್ಳಿ-ಧಾರವಾಡ ಸುದ್ದಿ
ಬಿಜೆಪಿ ಟಿಕೆಟ್ ಕೈ ತಪ್ಪಲು ಸಂತೋಷ ಕಾರಣ

ಬಿಜೆಪಿ ಟಿಕೆಟ್ ಕೈ ತಪ್ಪಲು ಸಂತೋಷ ಕಾರಣ

ಗಟ್ಟಿ ಧ್ವನಿ ಎತ್ತದ ಜೋಶಿ, ಬೊಮ್ಮಾಯಿ: ಮಾಜಿ ಸಿಎಂ ಶೆಟ್ಟರ್ ಗಂಭೀರ ಆರೋಪ

ಹುಬ್ಬಳ್ಳಿ: ನನಗೆ ಬಿಜೆಪಿ ಟಿಕೆಟ್ ಕೈತಪ್ಪಲು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಕಾರಣ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಗಂಭೀರ ಆರೋಪ ಮಾಡಿದ್ಧಾರೆ.


ಇಂದು ತಮ್ಮ ನಿವಾಸದಲ್ಲಿ ತುರ್ತು ಸುದ್ದಿಗೋಷ್ಠಿ ನಡೆಸಿದ ಅವರು, ಹಲವಾರು ದಿನಗಳಿಂದ ನಾನು ನೋವನ್ನು ಅನುಭವಿಸಿದ್ದೇನೆ. ಇದಕ್ಕೆ ಕೇವಲ ಟಿಕೆಟ್ ವಿಚಾರವಷ್ಟೇ ಕಾರಣವಲ್ಲ. ಟಿಕೆಟ್ ಕೈತಪ್ಪೋಕೆ ಕಾರಣ ಅದವರ ಹೆಸರು ಹೇಳೋ ಸಮಯ ಈಗ ಬಂದಿದೆ. ಸಂತೋಷ್ ಅವರ ಷಡ್ಯಂತ್ರದಿಂದ ಪಕ್ಷಕ್ಕೆ ಹಾನಿಯಾಗಿದೆ. ಸಂತೋಷ್ ಜೊತೆಗೆ ಇನ್ನಷ್ಟು ಜನರ ಕೈವಾಡದಿಂದ ಟಿಕೆಟ್ ಕೈತಪ್ಪಿದೆ” ಎಂದು ಆರೋಪಿಸಿದರು.


ತಮ್ಮ ಆಪ್ತ ಮಹೇಶ ಟೆಂಗಿನಕಾಯಿ ಅವರಿಗೆ ಟಿಕೆಟ್ ಕೊಡಿಸಲು ಬಿ.ಎಲ್. ಸಂತೋಷ ಆಟವಾಡಿದ್ದಾರೆ. ಅವರು ಬಿಜೆಪಿ ನಾಶ ಮಾಡುತ್ತಿದ್ದಾರೆ. ಬಿಜೆಪಿಯಲ್ಲಿ ವ್ಯಕ್ತಿ ನಿಷ್ಠೆ ಇಲ್ಲ, ಪಕ್ಷ ನಿಷ್ಠೆ ಅಂತಾರೆ ಆದರೆ ಈಗ ಬಿ.ಎಲ್. ಸಂತೋಷ ಅವರ ಅಭಿಪ್ರಾಯದಿಂದ ಮುಂಚೂಣಿಯಲ್ಲಿದ್ದ ನನ್ನ ಹೆಸರು ಬಿಟ್ಟು ಸಣ್ಣ ಹುಡುಗರ ತರ ಟಿಕೆಟ್ ಇಲ್ಲ ಎಂದು ಹೊರ ಹಾಕಿದರು ಎಂದರು.
ಇದಕ್ಕಾಗಿ ಕಳೆದ ಆರು ತಿಂಗಳಿಂದ ಕ್ಷೇತ್ರದಲ್ಲಿ ಶೆಟ್ಟರ್ ಅವರಿಗೆ ಟಿಕೆಟ್ ಇಲ್ಲ ಎಂದು ಸುದ್ದಿ ಹಬ್ಬಿಸಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ನನ್ನ ಪರವಾಗಿ ಪ್ರಯತ್ನ ಮಾಡಿದ್ದೇವೆ ಎಂದು ಹೇಳುತ್ತಾರೆ ಆದರೆ ಗಟ್ಟಿ ಧ್ವನಿ ಯಾಕೆ ಎತ್ತಲಿಲ್ಲ ಎಂದರು.


ಜೋಶಿ ಅವರು ಸ್ವಲ್ಪ ಹಳೆಯದನ್ನ ನೆನಪು ಮಾಡಿಕೊಳ್ಳಲಿ ಅವರ ಲೋಕಸಭಾ ಚುನಾವಣೆಯಲ್ಲಿ ಅವರ ಗೆಲುವಿಗಾಗಿ ವ್ಯಾಪಕವಾಗಿ ಕೆಲಸ ಮಾಡಿದ್ದೇವೆ ಎಂದರಲ್ಲದೇ ಪಕ್ಷ ಕೆಲವೇ ಕೆಲವರ ಕಪಿಮುಷ್ಠಿಯಲ್ಲಿದೆ. ಕಳೆದ ಎರಡ್ಮೂರು ವರ್ಷದಲ್ಲಿ ಪಕ್ಷದಲ್ಲಿ ನನ್ನನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲ. ರಾಜ್ಯ ಕಾರ್ಯಕಾರಣಿಯಲ್ಲಿ ಐದು ನಿಮಿಷ ಮಾತನಾಡಲು ಅವಕಾಶ ನೀಡಲಿಲ್ಲ. ಒಂದೇ ಒಂದು ಚುನಾವಣೆ ಗೆಲ್ಲದ ವ್ಯಕ್ತಿ ಅಣ್ಣಾಮಲೈ ಅವರನ್ನು ರಾಜ್ಯ ಚುನಾವಣೆ ಉಪ ಉಸ್ತುವಾರಿ ಮಾಡಿದ್ದಾರೆ. ಅವರ ಹಿಂದೆ ನಾವು ಕೈ ಕಟ್ಟಿ ಕೂರಬೇಕು. ಶೆಟ್ಟರ್ ಅವರಿಗೆ ಯಾವುದೇ ಕಾರಣ ಇಲ್ಲದೆ ಟಿಕೆಟ್ ತಪ್ಪಿಸಿದ್ದು ನೋವು ತಂದಿದೆ. ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳೀನ ಕುಮಾರ್ ಕಟೀಲ್ ಅವರ ಆಡಿಯೋ ವೈರಲ್ ಆದಂತೆ ಶೆಟ್ಟರ್, ಈಶ್ವರಪ್ಪ, ಬಿಎಸ್‌ವೈ ಮೂಲೆಗುಂಪು ಇಂದು ನಿಜವಾಗಿದೆ ಎಂದರು.

ರಾಜ್ಯದಲ್ಲಿ ಎಲ್ಲ ಕಡೆ ಬಿ.ಎಲ್. ಸಂತೋಷ ತಮ್ಮ ಆಪ್ತರಿಗೆ ಟಿಕೆಟ್ ಕೊಡಿಸದ್ದಾರೆ. ಗೆಲ್ಲುವಂತಹ ಅಭ್ಯರ್ಥಿ ರಾಮದಾಸ್ ಅವರಿಗೆ ಟಿಕೆಟ್ ಕೊಟ್ಟಿಲ್ಲ. ಬಿಜೆಪಿಯಲ್ಲಿ ಹಿರಿಯರಿಗೆ ಗೌರವ ಹಾಗೂ ಅನುಭವಕ್ಕೆ ಬೆಲೆ ಇಲ್ಲದಾಗಿದೆ. ಯಾವುದೇ ಷರತ್ ಇಲ್ಲದೆ ಆತ್ಮಗೌರವಕ್ಕೆ ಕಾಂಗ್ರೆಸ್ ಸೇರಿದ್ದೇನೆ .ಕಾಂಗ್ರೆಸ್ ಅಧಿಕಾರಕ್ಕೆ ತರುವಲ್ಲಿ ಪಕ್ಷ ಹೇಳಿದಂತೆ ಕಾರ್ಯ ಮಾಡಲಿದ್ದೇನೆ ಎಂದರು.
ಶೆಟ್ಟರ್ ಲಿಂಗಾಯತ ನಾಯಕರು ಹೌದೋ ಅಲ್ಲವೇ ಎಂಬುದನ್ನ ಜನ ತೀರ್ಮಾನ ಮಾಡುತ್ತಾರೆ. ಈ ಬಗ್ಗೆ ತಮ್ಮ ಕ್ಷೇತ್ರ ಬಿಟ್ಟು ಬೇರೆ ಕಡೆ ಹೋಗದವರು ನನ್ನ ಸಾಮರ್ಥ್ಯದ ಬಗ್ಗೆ ಮಾತನಾಡಿದ್ದಾರೆ. ಅವರೆ ಪ್ರಶ್ನೆ ಮಾಡಿಕೊಳ್ಳಲಿ ಎಂದರು.

 

 

administrator

Related Articles

Leave a Reply

Your email address will not be published. Required fields are marked *