ಹುಬ್ಬಳ್ಳಿ-ಧಾರವಾಡ ಸುದ್ದಿ

ನಗರೇಶ್ವರ ದೇವಸ್ಥಾನದ ಸುವರ್ಣ ಮಹೋತ್ಸವ

ದೇವರುಗಳ ಪ್ರತಿಷ್ಠಾಪನೆ, 6 ದಿನ ವಿವಿಧ ಧಾರ್ಮಿಕ ಕಾರ್ಯಕ್ರಮ

ಧಾರವಾಡ: ಇಲ್ಲಿನ ಆರ್ಯ ವೈಶ್ಯ ಸಮಾಜದ ನಗರೇಶ್ವರ ದೇವಸ್ಥಾನದಲ್ಲಿಯ ಸಕಲ ದೇವರುಗಳ ಪ್ರತಿಷ್ಠಾಪನೆಯ ಸುವರ್ಣ ಮಹೋತ್ಸವ ಸಂಭ್ರಮ ಏ. 24ರಿಂದ 30ರವರೆಗೆ ನಡೆಯಲಿದೆ.
24ರಂದು ನವಗ್ರಹ ಸಹಿತ ಗಣಪತಿ ಹೋಮ, ಕರಿಕೆ, ಹೂಗಳಿಂದ ಅಷ್ಟೋತ್ತರ, ನಂತರ ಮನೆಯಲ್ಲಿ ಅಲಂಕರಿಸಕೊಂಡು ಬಂದ ಆರತಿ ತಟ್ಟೆಗಳ ಸ್ಪರ್ಧೆ, ಸಂಜೆ ಮಕ್ಕಳ ಪ್ರತಿಭಾ ಪ್ರದರ್ಶನ ನಡೆಯಿತು.


25ರಂದು ನಗರೇಶ್ವರಾದಿ ಪರಿವಾರ ದೇವತಾ ಪ್ರತಿಷ್ಟಾ ವರ್ಧಂತಿ ಕಲಾಹೋಮ, ಬೆಳಿಗ್ಗೆ ೮ಗಂಟೆಗೆ ಕಳಸಕ್ಕೆ ತಿಲಕ ಅಲಂಕಾರ, 8.15ಕ್ಕೆ ಪಲ್ಲಕ್ಕಿ ಮೆರವಣಿಗೆ, ಭಸ್ಮದಿಂದ ಅಷ್ಟೋತ್ತರ, ಸಂಜೆ ಮಹಿಳಾ ಮಂಡಳದಿಂದ ಕಾರ್ಯಕ್ರಮಗಳು ನಡೆಯಲಿವೆ.


26ರಂದು ನಾಗದೇವತಾ ಆಶ್ಲೇಷಾ ಬಲಿ, ಪವಮಾನ ಹೋಮ, ತುಳಸಿ ಅಷ್ಟೋತ್ತರ, ಮಧ್ಯಾಹ್ನ 12ರಿಂದ ಸಾರ್ವಜನಿಕರಿಗೆ ಅನ್ನಸಂತರ್ಪಣೆ, ಸಂಜೆ ಯುವಜನ ಸಂಘದವರಿಂದ ಕಾರ್ಯಕ್ರಮ. 27ರಂದು ರಾಮತಾರಕ ಹವನ, ಕುಂಕುಮಾರ್ಚನೆ, ಸೀತಾದೇವಿಗೆ ಮಡಲಕ್ಕಿ ಹಾಗೂ ಸಮಾಜದ ಸದಸ್ಯನಿಯರಿಗೆ ಮಡಲಕ್ಕಿ ತುಂಬಲಾಗುವುದು. 28ಕ್ಕೆ ಚಂಡಿ ಹೋಮ, ರಾತ್ರಿ 8ರಿಂದ ನವರಾತ್ರಿ ಯಲ್ಲಿ ಪೂಜೆ ಮಾಡಿಸಿದವರಿಗೆ ಮತ್ತು ಇತರ ಗಣ್ಯರಿಗೆ ಭೋಜನವಿದೆ. 29 ರಂದು ರುದ್ರ ಹೋಮ, ನಂತರ ಸನ್ಮಾನ ಕಾರ್ಯಕ್ರಮಗಳು ಜರುಗಲಿವೆ.


30ರಂದು ವಾಸವಿ ಜಯಂತಿ, ಸೂಕ್ತ ಹೋಮ, ಬೆಳಿಗ್ಗೆ 8.15ಕ್ಕೆ ಪಲ್ಲಕ್ಕಿ ಮೆರವಣಿಗೆ, ತೊಟ್ಟಿಲೋತ್ಸವ, 11ಕ್ಕೆ 5ರಿಂದ 8ವರ್ಷದೊಳಗಿನ ಕನ್ಯೆಯರ ಕನ್ನಿಕಾ ಪೂಜೆ, ಕನ್ನಿಕಮ್ಮನಿಗೆ ಮಡಿಲಕ್ಕಿ ನಂತರ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದು ಅಧ್ಯಕ್ಷರು ಹಾಗೂ ಕಾರ್ಯಕಾರಿ ಮಂಡಳಿ, ಆರ್ಯ ವೈಶ್ಯ ಸಮಾಜ ವಾಸವಿ ಯುವಜನ ಮಂಡಳ, ವಾಸವಿ ಯುವಜನ ಸಂಘ ಪ್ರಕಟಣೆಯಲ್ಲಿ ತಿಳಿಸಿದೆ.

administrator

Related Articles

Leave a Reply

Your email address will not be published. Required fields are marked *