ಹುಬ್ಬಳ್ಳಿ: ಪೂರ್ವ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಕ್ರಾಂತಿಕಿರಣರವರು ಇಂದು ಪೂರ್ವ ವಿಧಾನಸಭೆ ಕ್ಷೇತ್ರದ ಪ್ರಣಾಳಿಕೆಯ ಬಿಡುಗಡೆಗೊಳಿಸಿ ಕ್ಷೇತ್ರದಲ್ಲಿನ ಸಮಸ್ಯೆಗಳ ಶಾಶ್ವತ ಪರಿಹಾರಕ್ಕೆ ಒತ್ತು ನೀಡಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಅವರು,ಪ್ರಣಾಳಿಕೆಯಲ್ಲಿ ದಿನದ ಇಪ್ಪತ್ತನಾಲ್ಕು ತಾಸು ನೀರಿನ ವ್ಯವಸ್ಥೆ, ಒಳ ಚರಂಡಿ ನಾಲೆಗಳ ವ್ಯವಸ್ಥೆ, ಎರಡು ಬೂತಗಳ ನಡುವೆ ಒಂದು ಸುಲಭ ಶೌಚಾಲಯ, ಸಿಟಿ ಬಸ್ ಗಳ ವ್ಯವಸ್ಥೆ, ಬಡವರಿಗಾಗಿ ಒಂದು ಸಾವಿರ ಮನೆಗಳ ನಿರ್ಮಾಣ ಮಾಡುವ ಉದ್ದೇಶ ಹೊಂದಲಾಗಿದೆ ಎಂದರು.
ಈ ಕ್ಷೇತ್ರದ ಮಹಿಳಾ ಮತದಾರರ ಸಂಖ್ಯೆ ಹೆಚಾಗಿದ್ದು, ಅವರ ಸುರಕ್ಷತೆಗಾಗಿ ಒಂದು ಪೋಲಿಸ್ ಠಾಣೆ ಸ್ಥಾಪನೆ ಮಾಡುವುದು ಹಾಗೂ ಸಿ.ಸಿ ಟಿವಿಗಳ ಅಳವಡಿಕೆ, ಕಸ ಮುಕ್ತ ಪ್ರದೇಶ ಮಾಡಲು ಕಸ ವಿಲೇವಾರಿ ವಾಹನಗಳ ಸಂಖ್ಯೆ ಹೆಚ್ಚಿಸುವುದು, ಗಾರ್ಡನ್ ಹಾಗೂ ಮಕ್ಕಳಿಗಾಗಿ ಆಟದ ಮೈದಾನ ನಿರ್ಮಿಸುವುದು, ಉತ್ತಮ ಆರೋಗ್ಯಕ್ಕಾಗಿ ಆರೋಗ್ಯ ಕೇಂದ್ರ, ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ, ಟ್ರೊಮಾ ಕೇಂದ್ರ, ಎರಡು ಪ್ರಸೂತಿ ಕೇಂದ್ರಗಳ ಸ್ಥಾಪನೆ, ಇನ್ ಫರ್ಟಿಲಿಟಿ ಕೇಂದ್ರ, ಈಗಿರುವ ಆಸ್ಪತ್ರೆಗಳನ್ನು ಅಭಿವೃಧ್ದಿ ಪಡಿಸಿ ನಂತರ ಆಧುನಿಕರಣಗೊಳಿಸು ವುದು, ಮೋಬೈಲ್ ಕ್ಲಿನಿಕಿನ ಸಿಬ್ಬಂದಿಗಳನ್ನು ಹೆಚ್ಚಿಸುವುದು, ಮಾನಸಿಕ ಆರೋಗ್ಯ ಸುಧಾರಣೆಗೆ ಜನಾಭಿವೃದ್ಧಿ ಕೇಂದ್ರಗಳ ಸ್ಥಾಪನೆ. ಶೈಕ್ಷಣಿಕ ಕ್ಷೇತ್ರದಲ್ಲಿ ಹೊಸ ಕ್ರಾಂತಿ ಮಾಡುವುದು, ಪಿ.ಯು.ಸಿ ಸರ್ಕಾರಿ ಕಾಲೇಜಿನ ಸ್ಥಾಪನೆ, ಐ.ಟಿ.ಐ ತರಬೇತಿ ಕೇಂದ್ರ ಸ್ಥಾಪನೆ, ಡಿಗ್ರಿ ಮಾಹಾವಿದ್ಯಾಲಯದ ಸ್ಥಾಪನೆ, ಈಗಿರುವ ಸರ್ಕಾರಿ ಶಾಲೆಗಳನ್ನು ಸುಧಾರಿಸುವುದು, ಬಡ ವಿದ್ಯಾರ್ಥಿಗಳಿಗಾಗಿ ಸಿ.ಇ.ಟಿ, ನೀಟ್ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಕಡಿಮೆ ದರದಲ್ಲಿ ಕೋಚಿಂಗ ಕೇಂದ್ರ ಸ್ಥಾಪನೆ ಮಾಡುವುದು, ಕೌಶಲ್ಯ ಅಭಿವೃದ್ಧಿ ಕೇಂದ್ರ ಸ್ಥಾಪನೆ ಮಾಡುವುದು.
ಔದ್ಯೋಗಿಕವಾಗಿ ಮುನ್ನುಗ್ಗಲು ಹಲವಾರು ಯೋಜನೆಗಳನ್ನು ತೆಗೆದುಕೋಳ್ಳುವುದು. ಅದಕ್ಕಾಗಿ ಕಬ್ಬು ಬೆಳೆಗಾರರಿಗಾಗಿ ಸಕ್ಕರೆ ಕಾರ್ಖಾನೆ, ಹೂವು ಬೆಳೆಗಳನ್ನು ಹೆಚ್ಚಿಸುವುದು ಹಾಗೂ ರಫ್ತಿಗೆ ಅನುವು ಮಾಡಿಕೋಡುವುದು, ಸಾವಯವ ಕೃಷಿಗೆ ಒತ್ತು ನೀಡುವುದು ಹಾಗೂ ಸಿರಿಧಾನ್ಯ ಬೆಳೆಯಲು ಉತ್ತೇಜಿಸುವುದು. ಸೋಲಾರ ಪಾರ್ಕ, ಜವಳಿ ಪಾರ್ಕ ನಿರ್ಮಿಸಿ ಯುವಕರಿಗೆ ಉದ್ಯೋಗ ಅವಕಾಶ ಹೆಚ್ಚಿಸುವುದು. ಹೋಂ ಫುಡ್ ಇಂಡಸ್ಟ್ರಿಗೆ, ಆಟೋ ಮೋಬೈಲ್ ಇಂಡಸ್ಟ್ರಿ ಅಭಿವೃಧಿ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಪ್ರಭು ನವಲಗುಂದಮಠ, ರಂಗಾ ಬದ್ದಿ, ಅಶೋಕ ಕಾಟವೆ, ಶಿವು ಮೆಣಸಿಕಾಯಿ, ಯಮನೂರಪ್ಪ ಜಾದವ, ಬಸವರಾಜ ಅಮ್ಮಿನಬಾವಿ, ಸತೀಶ ಶೇರವಾಡಕರ, ಲಕ್ಷ್ಮೀಕಾಂತ ಘೋಡಕೆ, ಗುರು ಪಾಟಿಲ, ಮಂಜುನಾಥ ನಾಗನಗೌಡ್ರ ಇನ್ನಿತರರಿದ್ದರು.