ಕಳೆದ ಬಾರಿಗಿಂತ ಹೆಚ್ಚು ಅಂತರದ ಗೆಲುವು: ಶೆಟ್ಟರ್
ಏಣಿ ಹತ್ತಿ ನಿಚ್ಚಣಿಕೆ ತೆಗೆದರು
ಮುನೇನಕೊಪ್ಪಗಾಗಿ ಲಾಬಿ ನಿಜ
ಹುಬ್ಬಳ್ಳಿ: ಬಿಜೆಪಿ ಕೆಲವರ ಹಿಡಿತದಲ್ಲಿದೆ, ಹೀಗಾಗಿ ಅವರಿಗೆ ಈ ಪರಿಸ್ಥಿತಿ ಬಂದಿದೆ. ಸ್ಪಷ್ಟ ಬಹುಮತದೊಂದಿಗೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೇಳಿದರು.
ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮುಕ್ತವಾಗಿ ಮಾತನಾಡಿದ ಅವರು, ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಸಂಘಟಿತ ಪ್ರಯತ್ನದಿಂದ ಸರ್ಕಾರದ ವೈಫಲ್ಯ ಜನರಿಗೆ ಹೇಳುವ ಕೆಲಸ ಮಾಡಿದರು. ಲಿಂಗಾಯತರಿಗೆ ಬಿಜೆಪಿ ಅನ್ಯಾಯವಾಗಿದೆ ಅನ್ನೋ ವಿಚಾರಅಲ್ಲದೇ ರಾಜ್ಯ ಸರ್ಕಾರದ ಭ್ರಷ್ಟಾಚಾರ, ಬೆಲೆ ಏರಿಕೆ ವಿರುದ್ಧ ಮಾತಾಡಿದರು.ಅಲ್ಲದೇ ಚುನಾವಣಾ ಸಮಯದಲ್ಲಿ ಮುಸ್ಲಿಂ ಮೀಸಲಾತಿ ತೆಗೆದು ಲಿಂಗಾಯತ ಮತ್ತು ಒಕ್ಕಲಿಗರಿಗೆ ಕೊಟ್ಟರು. ಈ ಎಲ್ಲ ಕಾರಣಗಳು ಅನುಕೂಲವಾಯಿತು ಎಂದರು.
ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರದಲ್ಲಿ ಎಲ್ಲಾ ವರ್ಗದ ಬೆಂಬಲ ನನಗೆ ಸಿಕ್ಕಿದೆ.ನಾನು ಕಳೆದ ಬಾರಿ ತೆಗೆದುಕೊಂಡು ಲೀಡ್‌ಗಿಂತ ಈ ಬಾರಿ ಹೆಚ್ಚು ಲೀಡ್ ನಿಂದ ಗೆಲವು ಸಾಧಿಸುವೆ.೨೫ ಸಾವಿರಕ್ಕೂ ಹೆಚ್ಚು ಮತಗಳ ಅಂತರದ ಗೆಲುವು ನಿಶ್ಚಿತ ಎಂದರು. ನಾನು ಯಾವುದೇ ಹಣ ,ಆಮಿಷಗಳನ್ನು ಮತದಾರರಿಗೆ ತೋರಿಸಿಲ್ಲ.ಆದರೆ ಮೊಟ್ಟ ಮೊದಲ ಬಾರಿಗೆ ಬಿಜೆಪಿಯಿಂದ ಹಣ ಹಂಚಿಕೆ ಮಾಡಲಾಗಿದೆ.ಬಿಜೆಪಿ ಅಭ್ಯರ್ಥಿ ಸೋಲುವ ಭಯದಿಂದ ಹತಾಶೆಯಿಂದ ಕೆಲವು ಸ್ಲಂ ಗಳಲ್ಲಿ ಐದನೂರು ಸಾವಿರ ಹಣ ಹಂಚಿಕೆ ಮಾಡಿದ್ದಾರೆ.ಆದರೆ ಹಣ ಪಡೆದವರು ಯಾರು ಬಿಜೆಪಿಗೆ ಮತ ಹಾಕಿಲ್ಲ.ಆದರೆ ಇದೇ ಮೊದಲ ಬಾರಿಗೆ ಬಿಜೆಪಿ ಹಣ ಹಂಚಿದ್ದು ಕೇಳಿ ಸ್ವಲ್ಪ ನೋವಾಗಿದೆ.ಈ ಬಾರಿ ಅತೀ ಹೆಚ್ಚು ಮತದಾನವಾಗಿದೆ..ಇದು ನಮ್ಮ ಪರವಾಗಿ ಅಲೆ ತೋರಿಸಿದೆ ಎಂದರು.
ಬಿಜೆಪಿಯವರಿಗೆ ಅಹಂಕಾರ ಬಂದಿದೆ. ಯಾವ ಮಾನದಂಡದ ಮೇಲೆ ಟಿಕೆಟ್ ನಿರಾಕರಿಸಿದರು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ,ಶೆಟ್ಟರ್ ಎಲ್ಲಾ ಹುದ್ದೆಗಳನ್ನೂ ಅನುಭವಿಸಿದ್ದಾರೆ ಅಂತಾರೆ. ಮೋದಿ ನಾಲ್ಕು ಬಾರಿ ಮುಖ್ಯಮಂತ್ರಿ, ಎರಡು ಬಾರಿ ಪ್ರದಾನಮಂತ್ರಿ, ವಯಸ್ಸು ಕೂಡಾ 71 ದಾಟಿದೆ ಅವರು ರಾಜಕಾರಣದಲ್ಲಿ ಇರಬಹುದಾ? ಎಂದು ಹೇಳಿದ ಅವರು, ಪ್ರಲ್ಹಾದ್ ಜೋಶಿ ಕೂಡ ನಾಲ್ಕು ನಾಲ್ಕು ಬಾರಿ ಸಂಸದರಾಗಿದ್ದಾರೆ ಅವರು ಯುವಕರಿಗೆ ಅವಕಾಶ ಮಾಡಿ ಕೊಡಲಿ ಎಂದರು. ವಿಶ್ವೇಶ್ವರ ಹೆಗಡೆ ಕಾಗೇರಿ, ಸುರೇಶ್ ಕುಮಾರ್ 6 ಬಾರಿ ಗೆದ್ದಿದ್ದಾರೆ ಅವರಗೆ ಕೊಡ್ತಾರೆ ನನಗ್ಯಾಕೆ ಕೊಡಲ್ಲ ರಾಜಕಾರಣದಲ್ಲಿ ಜನ ಸ್ವೀಕಾರ ಮಾಡ್ತಾರೆ ಅಂದ್ರೆ ರಾಜಕಾರಣದಲ್ಲಿ ಮುಂದುವರೆಯಬೇಕು. ವಯಸ್ಸು, ಹುದ್ದೆಗಳ ಲೆಕ್ಕಾಚಾರ ಅಲ್ಲ ಎಂದರು.
ಏಣಿ ಹತ್ತಿ ನಿಚ್ಚಣಿಕೆ ತೆಗೆದರು
ಹುಬ್ಬಳ್ಳಿ: ಪ್ರಲ್ಹಾದ್ ಜೋಶಿಯವರು ಯಡಿಯೂರಪ್ಪ ಸಂಪುಟದಲ್ಲಿ ಸಚಿವರಾಗಲು ನಿಮ್ಮನ್ನು ಸಚಿವರನ್ನಾಗಿ ಮಾಡಿದ್ರಂತೆ ಅನ್ನೋ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಶೆಟ್ಟರ್, ಏಣಿ ಹತ್ತಿ ನಿಚ್ಚಣಿಕೆ ತೆಗೆದು ಹಾಕಿದ್ರು ಅಂತಾರಲ್ಲಾ ಹಾಗೆ ಆಗಿದೆ.
ನನ್ನ ಸಿನಿಯಾರಿಟಿ ಮೇಲೆ ಮಂತ್ರಿ ಮಾಡಿದ್ರು. ನನ್ನನ್ನು ಪ್ರಲ್ಹಾದ್ ಜೋಶಿ ಮಂತ್ರಿ ಮಾಡಿದ್ರು ಅಂತಾ ನಾನೂ ಎಲ್ಲೂ ಹೇಳಿಲ್ಲ, ಅವರೂ ಹೇಳಿಲ್ಲ.ಈಗ ಚುನಾವಣೆಗಾಗಿ ಹೇಳ್ತಿದ್ದಾರೆ.ಪ್ರಲ್ಹಾದ್ ಜೋಶಿ ಸುಳ್ಳು ಹೇಳೋದು ಕಲ್ತಿದ್ದಾರೆ.
ನನಗೆ ಬಿಜೆಪಿ ಟಿಕೆಟ್ ಕೊಟ್ಟು ಶಾಸಕ ಮಾಡಿದ್ದರೆ ಎಲ್ಲಾ ಸರಿಯಿರುತ್ತಿತ್ತು.ನನಗೆ ಟಿಕೆಟ್ ತಪ್ಪಿದ್ದು ಹದಿನೈದು, ಇಪ್ಪತ್ತು ಕ್ಷೇತ್ರಗಳಲ್ಲಿ ಎಫೆಕ್ಟ್ ಆಗಿದೆ.
ಮುನೇನಕೊಪ್ಪಗಾಗಿ ಲಾಬಿ ನಿಜ
ಹುಬ್ಬಳ್ಳಿ: ಕಳೆದ ಸರ್ಕಾರದಲ್ಲಿ ಶಂಕರ್ ಪಾಟೀಲ್ ಮುನೇನಕೊಪ್ಪರನ್ನು ಸಚಿವರಾಗಿ ಮಾಡಲು ನಾನು ಲಾಬಿ ಮಾಡಿದ್ದು ನಿಜ ಎಂದು ಒಪ್ಪಿಕೊಂಡ ಶೆಟ್ಟರ್ ಪ್ರಲ್ಹಾದ್ ಜೋಶಿಯವರು ಅರವಿಂದ ಬೆಲ್ಲದ್ ಪರ ಲಾಬಿ ಮಾಡಿದ್ದರೆಂಬ ಗುಟ್ಟು ಹೊರ ಹಾಕಿದರು.
ನಾನು ಟೀಕಿಸಿದ್ದು ಬಿ.ಎಲ್. ಸಂತೋಷ್ ಮತ್ತು ಪ್ರಲ್ಹಾದ್ ಜೋಶಿ ಅವರುನ್ನು ಮಾತ. ಇಡೀ ಬ್ರಾಹ್ಮಣ ಸಮಾಜಕ್ಕೆ ಯಾವುದೇ ನಾನು ಟೀಕೆ ಮಾಡಿಲ್ಲ. ಬ್ರಾಹ್ಮಣರು ನನಗೆ ಅತೀ ಹೆಚ್ಚು ಮತ ಹಾಕಿದ್ದಾರೆ. ಈ ಒಳ ಹೊಡೆತದ ಬಗ್ಗೆ ಅರ್ಥವಾಗುತ್ತದೆ ಎಂದರು.