ಅಣ್ಣಿಗೇರಿ : ಪಟ್ಟಣದ ಕುರುಬಗೇರಿ ಓಣಿಯ ನಿವಾಸಿ ಸಾರಿಗೆ ಸಂಸ್ಥೆ ನಿರ್ವಾಹಕರೊಬ್ಬರ ಪುತ್ರ ಯುಪಿಎಸ್ಸಿಯಲ್ಲಿ ಹಿರಿದಾದ ಸಾಧನೆ ಮಾಡಿ ಆದಿಕವಿ ಪಂಪನ ನೆಲದ ಕೀರ್ತಿ ಪತಾಕೆ ಹಾರಿಸಿದ್ದಾನೆ.
ಹುಬ್ಬಳ್ಳಿಯ ಗ್ರಾಮಾಂತರ 2 ನೇ ಡಿಪೋದಲ್ಲಿ ನಿರ್ವಾಹಕರಾಗಿರುವ ಕರಿಸಿದ್ದಪ್ಪ ಪೂಜಾರಿಯವರ ಮಗ ಸಿದ್ದಲಿಂಗಪ್ಪನೇ ಈ ಅಪರೂಪದ ಸಾಧನೆ ಮಾಡಿದವನಾಗಿದ್ದಾನೆ.
ಬೆಂಗಳೂರಿನಲ್ಲಿ ಇಂಜಿನಿಯರ್ ಕಲಿಯುತ್ತಾ ಈಗ ಸದ್ಯ ಅಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಾ ಯುಪಿಎಸ್ಸಿ ಪರೀಕ್ಷೆ ಬರೆದಿದ್ದ ಈತ 589 ನೆ ಸ್ಥಾನ ಪಡೆದು ಉತ್ತೀರ್ಣನಾಗಿದ್ದು ಈ ಬಡ ಕುಟುಂಬದ ಮನೆಯ ಬಾಗಿಲನ್ನು ಮಂಗಳವಾರ ನೂರಾರು ಮಾಧ್ಯಮದ ಪ್ರತಿನಿಧಿಗಳು ತಟ್ಟಿದಾಗ ಕುಟುಂಬದವರಿಗೆ ತಮ್ಮ ಮಗನ ಸಾಧನೆ ಬಗ್ಗೆ ಹಿರಿಮೆ ಪಡುವಂತಾಯಿತು.
ತಂದೆ ಸಾರಿಗೆ ಸಂಸ್ಥೆಯಲ್ಲಿ ಕಂಡಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದು ತಾಯಿ ಮನೆ ಕೆಲಸಗಳನ್ನು ನೋಡಿಕೊಂಡು ಹೋಗುತ್ತಿದ್ದು, ಈತನಿಗೆ ಬಸವರಾಜ್ ಹಾಗೂ ಮಂಜಪ್ಪ ಎಂಬ ತಮ್ಮಂದಿರು.ಅಣ್ಣಿಗೇರಿಯಲ್ಲೆ ಪ್ರಾಥಮಿಕ ಹಂತವನ್ನು ಮುಗಿಸಿ, ಅದೇ ಗ್ರಾಮದ ಅಮೃತೇಶ್ವರ ಪ್ರೌಢ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ ಇವರಿಗೆ ವಿದ್ಯಾರ್ಜನೆ ಮಾಡಿ ಧಾರವಾಡದ ಜೆಎಸ್‌ಎಸ್ ಕಾಲೇಜಿನಲ್ಲಿ ಪಿಯು ಮುಗಿಸಿದ್ದಾರೆ.
ಯುಪಿಎಸ್ಸಿ ಪರೀಕ್ಷೆಯಲ್ಲಿ ಪಾಸಾದ ಸಿದ್ದಲಿಂಗೇಶ ದಂಪತಿ ಸಮೇತ ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಕಾರ್ಯನಿರ್ವಹಿಸುತ್ತಿದ್ದಾರೆ.
ದೂರವಾಣಿ ಮೂಲಕ ಮಾತನಾಡಿದ ಸಿದ್ದಲಿಂಗೇಶ್ ಪೂಜಾರ ನನಗೆ ಬಹಳಷ್ಟು ಸಂತೋಷವಾಗಿದೆ .ನನಗೆ ಈ ಪರೀಕ್ಷೆ ಪಾಸಾದಕ್ಕೆ ನನ್ನ ತಂದೆ ತಾಯಿಗಳ ಆಶೀರ್ವಾದವೇ ಕಾರಣ ಎಂದು ಹೇಳಿದರು.
ಯು.ಪಿ.ಎಸ್.ಸಿ ಪರೀಕ್ಷೆ ಪಾಸ್ ಮಾಡಿದ ವಾಕರಸಾ ಸಂಸ್ಥೆಯ ಬಸ್ ಕಂಡಕ್ಟರ್ ಮಗನ ಸಾಧನೆ ವಾಯುವ್ಯ ಸಾರಿಗೆ ಸಂಸ್ಥೆಗೂ ದೊಡ್ಡ ಹಿರಿಮೆಯಾಗಿದ್ದು, ವ್ಯವಸ್ಥಾಪಕ ನಿರ್ದೇಶಕ ಭರತ್.ಎಸ್ ಅಭಿನಂದಿಸಿದ್ದಾರೆ.
ರಾಜ್ಯದ 25 ಅಭ್ಯರ್ಥಿಗಳು ಟಾಪರ್ ಆಗಿದ್ದು ಅವರಲ್ಲಿ ಸಿದ್ದಲಿಂಗಪ್ಪ ರಾಜ್ಯದ 16 ನೇ ಟಾಪರ್ ಆಗಿದ್ದಾರೆ.
ಹುಬ್ಬಳ್ಳಿ: ಯುಪಿಎಸ್‌ಸಿ ಪರೀಕ್ಷೆ ಪಾಸ್ ಮಾಡಿದ ವಾಕರಸಾ ಸಂಸ್ಥೆಯ ಬಸ್ ಕಂಡಕ್ಟರ್ ಮಗನನ್ನು ವ್ಯವಸ್ಥಾಪಕ ನಿರ್ದೇಶಕ ಭರತ್.ಎಸ್ ಅಭಿನಂದಿಸಿದ್ದಾರೆ.
ಇತ್ತೀಚೆಗೆ ನಡೆದ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ. ರಾಜ್ಯದ ೨೫ ಅಬರ್ಥಿಗಳು ಟಾಪರ್ ಆಗಿರುತ್ತಾರೆ.ಅವರಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹುಬ್ಬಳ್ಳಿ ಗ್ರಾಮಾಂತರ 2 ನೇ ಡಿಪೋದಲ್ಲಿ ನಿರ್ವಾಹಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಕಾಡಪ್ಪ ಎಸ್.ಪೂಜಾರಿ ರವರ ಮಗ ಸಿದ್ದಲಿಂಗಪ್ಪ ಪೂಜಾರಿ 589 ನೇ ರಾಂಕ್ ಪಡೆದು ಉತ್ತೀರ್ಣರಾಗಿದ್ದಾರೆ. ರಾಜ್ಯದ 16ನೇ ಟಾಪರ್ ಆಗಿದ್ದಾರೆ.
ಸಂಸ್ಥೆಯ ಸಿಬ್ಬಂದಿಯ ಮಗ ದೇಶದ ಅತ್ಯುನ್ನತ ಪರೀಕ್ಷೆಯಲ್ಲಿ ತೇರ್ಗಡೆಯಾಗಿರು ವುದು ಶ್ಲಾಘನೀಯ.ಇದು ಸಂಸ್ಥೆಗೆ ಹೆಮ್ಮೆಯ ಸಂಗತಿಯಾಗಿದೆ. ಅವರ ಸಾಧನೆ ಇತರರಿಗೆ ಪ್ರೇರಣೆಯಾಗಲಿ ಮುಂದಿನ ದಿನಗಳಲ್ಲಿ ಇಂತವರ ಸಂಖ್ಯೆ ಹೆಚ್ಚಲಿ ಎಂದು ವಾಕರಸಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಭರತ್.ಎಸ್. ತಿಳಿಸಿದ್ದಾರೆ.