ಹುಬ್ಬಳ್ಳಿ-ಧಾರವಾಡ ಸುದ್ದಿ

ಮೂವರು ಖಡಕ್ ಖಾಕಿಗಳ ಸೇವಾ ನಿವೃತ್ತಿ ಇಂದು

ಹುಬ್ಬಳ್ಳಿ : ಹುಬ್ಬಳ್ಳಿಯಲ್ಲಿ ಸೇವೆ ಸಲ್ಲಿಸಿದ್ದಲ್ಲದೇ ತಮ್ಮ ಕಾರ್ಯದ ಮೂಲಕ ಹೆಸರು ಮಾಡಿದ್ದ ಮೂವರು ಖಡಕ್ ಪೊಲೀಸ್ ಅಧಿಕಾರಿಗಳು( 1994ನೇ ಬ್ಯಾಚ್) ಇಂದು ಸೇವಾ ನಿವೃತ್ತಿ ಹೊಂದುತ್ತಿದ್ದಾರೆ.
ಧಾರವಾಡ ಜಿಲ್ಲಾ ಲೋಕಾಯುಕ್ತ ಡಿವಾಯ್ ಎಸ್ ಪಿ ಹುಸೇನ ಖಾನ ಪಠಾಣ, ರಾಜ್ಯ ಗುಪ್ತವಾರ್ತೆಯ ಡಿವಾಯ್‌ಎಸ್‌ಪಿ ಎನ್ .ಬಿ.ಸಕ್ರಿ, ಬೆಂಗಳೂರು ಐಜಿಪಿ ಕೇಂದ್ರವಲಯದ ಡಿವಾಯ್‌ಎಸ್‌ಪಿ ಡಾ.ಎಸ್.ಪ್ರಕಾಶ ಅವರೇ ಸರ್ಕಾರಿ ಸೇವೆಯಿಂದ ನಿವೃತ್ತರಾಗುತ್ತಿರುವ ಅಧಿಕಾರಿಗಳಾಗಿದ್ದಾರೆ.


ಹುಬ್ಬಳ್ಳಿ ಮೂಲದ ಎಚ್.ಕೆ.ಪಠಾಣ ಚಂದಪ್ಪ ಹರಿಜನನ ಎನ್‌ಕೌಂಟರ್, ಬಾಗಪ್ಪ ಹರಿಜನನ ಅರೆಸ್ಟ ,ಕಸಬಾಪೇಟ, ಸಹಿತ ನಗರದ ವಿವಿಧ ಠಾಣೆಗಳಲ್ಲಿ ಕಾರ್ಯ ನಿರ್ವಹಿಸಿ, ಉತ್ತರ ಎಸಿಪಿಯಾಗಿ ಛಾಪು ಮೂಡಿಸಿದವರಾಗಿದ್ದು, ಕುಮಾರೇಶ್ವರ ಪಿಳ್ಳೆ ಕೊಲೆ ಪ್ರಕರಣ,ಸೈಂಟಿಸ್ಟ ಮಂಜ್ಯಾ ಕೊಲೆ ಪ್ರಕರಣ,ಇಂಡಿ ಪಂಪ ಮಾಲಿಕರ ಅಪರಹಣ, ಅಟೋ ರಿಕ್ಷಾದಲ್ಲಿ ಬಾಲಕನ ಅಪರಹಣ ಮುಂತಾದ ಕ್ಲಿಷ್ಟ ಕೇಸ್‌ಗಳನ್ನು ಪತ್ತೆ ಹಚ್ಚಿದ್ದು ಯಾವುದೇ ಒತ್ತಡವಿದ್ದರೂ ಡೋಂಟ್ ಕೇರ್ ಎಂಬಂತೆ ಕಾರ್ಯನಿರ್ವಹಿಸಿ ಜನಾನುರಾಗಿಯಾಗಿದ್ದರು.


ನರಗುಂದ ಮೂಲದ ಎನ್.ಬಿ.ಸಕ್ರಿಯವರು ಹಳೆಹುಬ್ಬಳ್ಳಿ ಠಾಣೆ ಸಹಿತ ವಿವಿಧೆಡೆ,ದಕ್ಷಿಣ ಎಸಿಪಿಯಾಗಿ ಕಾರ್ಯ ನಿರ್ವಹಿಸಿದ್ದು ರಾಜಧಾನಿಯ ಮಹತ್ವದ ಠಾಣೆಗಳಲ್ಲಿ ಅತ್ಯಂತ ಕ್ಲಿಷ್ಟಕರ ಪ್ರಕರಣಗಳನ್ನುಕೂಲಂಕುಷವಾಗಿ ಪರಿಶೀಲಿಸಿ ಬೇಧಿಸಿ ತನಿಖೆಗೆ ಸಕ್ರಿಯಂತವರು ಇರಬೇಕು ಎಂಬಷ್ಟರ ಮಟ್ಟಿಗೆ ಇಲಾಖೆಯಲ್ಲಿ ಹೆಸರು ಮಾಡಿದವರಾಗಿದ್ದಾರೆ. ಅಲ್ಲದೇ ಹಿಡಿದ ಕೆಲಸ ಪೂರ್ಣಗೊಳಿಸದೇ ಬಿಡುವ ಜಾಯಮಾನ ಇವರದಲ್ಲ. ಗೌರಿ ಲಂಕೇಶ ಹತ್ಯೆ ತನಿಖೆಯಲ್ಲೂ ಇವರು ಪ್ರಮುಖ ಪಾತ್ರ ವಹಿಸಿದ್ದರು.


ಚಿತ್ರದುರ್ಗ ಜಿಲ್ಲೆಯವರಾದ ಡಾ.ಎಸ್. ಪ್ರಕಾಶ ಹಳೇಹುಬ್ಬಳ್ಳಿ ಇನ್ಸಪೆಕ್ಟರ್ ಆಗಿ ಇಲ್ಲಿಯೇ ಡಾಕ್ಟರೇಟ ಪಡೆದವರು. ಯಲ್ಲಾಪುರ, ಬೆಂಗಳೂರಿನ ಹಲವು ಠಾಣೆಗಳಲ್ಲಿ ಖಡಕ್ ಅಧಿಕಾರಿ ಹಿರಿಮೆಗೆ ಪಾತ್ರರಾಗಿದ್ದ ಅವರು ಕಳೆದ ಐದು ವರ್ಷಗಳಿಂದ ಕೇಂದ್ರ ವಲಯದ ಡಿಎಸ್‌ಪಿ ಆಗಿದ್ದರು. ಯಲ್ಲಾಪುರದಲ್ಲಿ ದೇವಸ್ಥಾನ , ಹಳೇಹುಬ್ಬಳ್ಳಿ ಠಾಣೆಯಲ್ಲಿದ್ದಾಗ ಬೋರವೆಲ್, ವಿಶ್ರಾಂತಿ ಕೊಠಡಿ ನಿರ್ಮಿಸಿ ಸಿಬ್ಬಂದಿಗಳ ಸ್ನೇಹಿ ಅಲ್ಲದೇ ಜನ ಸ್ನೇಹಿಯಾಗಿದ್ದರು.

administrator

Related Articles

Leave a Reply

Your email address will not be published. Required fields are marked *