ಹುಬ್ಬಳ್ಳಿ: ದಕ್ಷಿಣ ಅಮೇರಿಕಾದ ಬ್ರೆಜಿಲ್ನಲ್ಲಿ ನಡೆದ ಡೆಕ್ಕಾ ಐರನ್ಮ್ಯಾನ್ ಸ್ಪರ್ಧೆಯಲ್ಲಿ ಭಾರತೀಯ ಮೂಲದ ವ್ಯಕ್ತಿಯೋರ್ವರು ಮೊದಲ ಸ್ಥಾನ ಪಡೆದು ಸಾಧನೆ ಮಾಡಿದ್ದಾರೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸಂಕ್ ಗ್ರಾಮದ (ಮಹಾರಾಷ್ಟ್ರ ಗಡಿ) ಪ್ರಶಾಂತ ಹಿಪ್ಪರಗಿ ಅವರೇ ಈ ಸಾಧನೆ ಮಾಡಿದ ಏಕೈಕ ಭಾರತೀಯರಾಗಿದ್ದಾರೆ. ಇವರ ಸಾಧನೆಯಿಂದ ಇಡೀ ಭಾರತೀಯ ಕ್ರೀಡಾ ಸಮುದಾಯವು ಹೆಮ್ಮೆಪಡುವಂತಾಗಿದೆ.
ಪ್ರಶಾಂತ 10ದಿನಗಳಲ್ಲಿ 10 ಐರನ್ಮ್ಯಾನ್ ಆಗಿದ್ದಾರೆ. ಇದರಲ್ಲಿ 38 ಕಿಮೀ ಈಜು, 1800 ಕಿಮೀ ಸೈಕ್ಲಿಂಗ್ ಮತ್ತು 422 ಕಿಮೀ ಓಡುವುದು ಕೇವಲ 10 ದಿನಗಳಲ್ಲಿ ಸಾಧನೆ ಮಾಡಿದ್ದಾರೆ. ಈ ಸ್ಪರ್ಧೆಗೆ ಪ್ರಪಂಚದಾದ್ಯಂತ ಕೇವಲ 9 ಸದಸ್ಯರು ಅರ್ಹತೆ ಪಡೆದಿದ್ದರು.ಇದಕ್ಕೂ ಮೊದಲು ಪ್ರಶಾಂತ ಕರ್ನಾಟಕದ ಹಾಕ್ಮ್ಯಾನ್ ದಾಂಡೇಲಿ (15 ಕಿಮೀ ಈಜು, 400 ಕಿಮೀ ಸೈಕ್ಲಿಂಗ್ ಮತ್ತು 3 ದಿನಗಳಲ್ಲಿ 100 ಕಿಮೀ ಓಟ) ಮತ್ತು ಕಾಶ್ಮೀರದಿಂದ ಕನ್ಯಾಕುಮಾರಿ ಸೈಕ್ಲಿಂಗ್ 3650 ಕಿಮೀ) ಮತ್ತು ಹರ್ಕ್ಯುಲಿಯನ್ ಐರನ್ಮ್ಯಾನ್, ಕೊನಾರ್ಕ್, ಒಡಿಶಾ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಇವರು ಮ್ಯಾರಥಾನ್ ಕೋಚ್ ಆಗಿದ್ದಾರಲ್ಲದೇ ಸದ್ಯ ಪುಣೆಯಲ್ಲಿ ಪ್ರೈವೇಟ್ ಕಂಪನಿಯಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ.