ಡಾ.ಎಸ್.ಆರ್.ರಾಮನಗೌಡರ ರಚಿಸಿದ ಗ್ರಂಥ ಹಾಗೂ ಸಾಕ್ಷ್ಯಚಿತ್ರ ಲೋಕಾರ್ಪಣೆ
ಧಾರವಾಡ: ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ ಹಾಗೂ ಸನ್ಯಾಸಗಳೆಂಬ ಜೀವನ ಕ್ರಮಗಳಲ್ಲಿ ಗೃಹಸ್ಥಾಶ್ರಮವು ಶ್ರೇಷ್ಠತಮವಾಗಿದೆ. ಗೃಹಸ್ಥಾಶ್ರಮದ ಸಾಫಲ್ಯದ ದೃಷ್ಟಿಯಿಂದ ಆದರ್ಶ ಅನುಕರಣೀಯ ಗೃಹಸ್ಥರ ಸಾಲಿನಲ್ಲಿ ಡಾ.ರಾಮನಗೌಡರ ಮೊದಲಿಗರಾಗಿ ನಿಲ್ಲುತ್ತಾರೆ ಎಂದು ಕಾಶೀ ಜ್ಞಾನಸಿಂಹಾಸನಾಧೀಶ್ವರ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ನುಡಿದರು.
ಅವರು ನಗರದಲ್ಲಿ ಡಾಎಸ್.ಆರ್ರಾಮನಗೌಡರ ಮಲ್ಟಿಸ್ಪೆಷಾಲಿಟಿ ಹಾಸ್ಪಿಟಲ್ ಹಾಗೂ ಡಾ.ಎಸ್.ಆರ್. ರಾಮನಗೌಡರ ಎಜ್ಯುಕೇಷನ್ ಹಾಗೂ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಆಶ್ರಯದಲ್ಲಿ ನಡೆದ ಡಾ.ಎಸ್.ಆರ್.ರಾಮನಗೌಡರ ರಚಿಸಿದ ಗ್ರಂಥಗಳ ಹಾಗೂ ಅವರ ಕುರಿತು ರಚಿಸಿದ ಗ್ರಂಥಗಳ ಮತ್ತು ಸಾಕ್ಷ್ಯಚಿತ್ರ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಕಳೆದ ನಾಲ್ಕು ದಶಕಗಳಿಂದ ಡಾ. ರಾಮನಗೌಡರ ಅವರು ವೈದ್ಯ ವೃತ್ತಿಯೊಂದಿಗೆ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಂಡ್ಡಿದ್ದಾರೆ. ತಮ ತಂದೆಯಿಂದ ಬಳುವಳಿ ಯಾಗಿ ಬಂದ ಧಾರ್ಮಿಕ ಸಂಸ್ಕಾರ ಪಾಲಿಸುತ್ತ ಗುರುಸೇವೆ, ಧರ್ಮ ಕಾರ್ಯ ಗಳನ್ನು ಅನುಚೂನವಾಗಿ ನಡೆಸಿಕೊಂಡು ಬಂದಿದ್ದಾರೆ. ಈ ಕಾರ್ಯಗಳಲ್ಲಿ ಅವರ ಧರ್ಮಪತ್ನಿ ಗಂಗಮ್ಮನವರು ಅವಿಭಕ್ತ ಕುಟುಂಬದ ಆದರ್ಶಗಳನ್ನು ಮುಂದುವರೆಸಿ ಕೊಂಡು ಬಂದಿರುವುದು ಪ್ರಶಂಸನಾರ್ಹ.ನಿವೃತ್ತಿ ನಂತರವೂ ಅವರ ಸಾಹಿತ್ಯ ಸೇವೆ ಶ್ಲ್ಯಾಘನೀಯ ಎಂದರು.
ಅಮ್ಮಿನಭಾವಿ ಪಂಚಗೃಹ ಹಿರೇಮಠದ ಶ್ರಿ ಅಭಿವನವ ಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳು, ಗಂದಿಗವಾಡ ಹಿರೇಮಠದ ಶ್ರಿ ಮೃತ್ಯುಂಜಯ ಸ್ವಾಮಿಗಳು, ಪ್ರೊ.ಕೆ.ಎಸ್. ಕೌಜಲಗಿ, ಡಾ.ಬಾಳಪ್ಪ ಚಿನಗುಡಿ, ಪ್ರೊ. ಬಸಯ್ಯ ಶಿರೋಳ ಅವರು ಬಿಡುಗಡೆಯಾದ ಗ್ರಂಥಗಳ ಹಾಗೂ ಸಾಕ್ಷ್ಯಚಿತ್ರದ ಪರಿಚಯವನ್ನು ನಿರ್ದೇಶಕ ಉಮೇಶ ಬಡಿಗೇರ ನಡೆಸಿಕೊಟ್ಟರು.
ಖ್ಯಾತ ಮನೋರೋಗ ತಜ್ಞ ಡಾ.ಆನಂದ ಪಾಂಡುರಂಗಿ ಡಾ.ರಾಮನಗೌಡರ ಜೊತೆಗಿನ ಒಡನಾಟವನ್ನು ಸ್ಮರಿಸಿಕೊಂಡರು. ಔಜಗಿರಿ ಆಶ್ರಮದ ಶ್ರೀ ಗಿರೀಶಾನಂದ ಅಧ್ಯಕ್ಷತೆ ವಹಿಸಿದ್ದರು. ಸಮಾಜ ಸೇವಕರಾದ ಸಂಗನಗೌಡ ರಾಮನಗೌಡರ, ಡಾ.ಬಾಳಪ್ಪ ಚಿನಗುಡಿ, ಪ್ರೊ.ಬಸಯ್ಯ ಶಿರೋಳ, ಗುರನಗೌಡ ರಾಮನಗೌಡರ, ಬಸವರಾಜ ಕೌಜಲಗಿ ಇದ್ದರು. ಕು.ಈಶಾನ್ವಿ ಹಾಗೂ ಡಾ ಸ್ಮೀತಾ ನಿರೂಪಿಸಿದರು. ಡಾ.ಶ್ರೀಕಂಠ ಸ್ವಾಗತಿಸಿದರು. ಡಾ.ಪ್ರಶಾಂತ ಪ್ರಕಾಶಕರ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಪ್ರಕಾಶ ಅವರು ಲೇಖಕರ ಪರಿಚಯ ಮಾಡಿಕೊಟ್ಟರು. ಡಾ.ಚಿದಾನಂದ ವಂದಿಸಿದರು.