ಸಂತ್ರಸ್ತರಿಗೆ ಧನಸಹಾಯ
ಬೆಂಗಳೂರು: ರಾಜ್ಯದ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಒಡಿಶಾದಲ್ಲಿ ನಡೆದ ಭೀಕರ ರೈಲು ದುರಂತದಲ್ಲಿ ರಾಜ್ಯದ ಪ್ರತಿನಿಧಿಯಾಗಿ ಹೋಗಿ ಕನ್ನಡಿಗರ ರಕ್ಷಣೆಗೆ ನಿಂತಿದ್ದು, ಒಡಿಶಾದ ಕಟಕ್ ನಗರದ ಎಸ್‌ಬಿಸಿ ಮೆಡಿಕಲ್ ಕಾಲೇಜಿಗೆ ರೈಲು ದುರಂತದಲ್ಲಿನ ಸಂತ್ರಸ್ತರನ್ನು ಭೇಟಿ ಮಾಡುವ ಸಮಯದಲ್ಲಿ ಸಂತೋಷ್ ಲಾಡ್ ಜನರ ನೋವಿಗೆ ಮಿಡಿದಿದ್ದಾರೆ.
ಆಸ್ಪತ್ರೆಯಲ್ಲಿ ದಾಖಲಾಗಿದ್ದ ಒಡಿಶಾದ ವ್ಯಕ್ತಿಯು ತನ್ನ ಸಂಪೂರ್ಣ ಬಲಗಾಲನ್ನು ಕಳೆದುಕೊಂಡಿದ್ದಾನೆ. ಅಲ್ಲದೆ ಆತನನ್ನ ಕಂಡ ಸಂತೋಷ್ ಲಾಡ್ ತಮ್ಮ ನೋವನ್ನು ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ ಆಸ್ಪತ್ರೆಗೆ ದಾಖಲಾದ ರೈಲ್ವೆ ದುರಂತದ ಹಲವಾರು ಬಡ ಕುಟುಂಬದ ಗಾಯಾಳು ಗಳಿಗೆ ತಮ್ಮ ಕೈಲಾದಷ್ಟು ಧನಸಹಾಯ ಮಾಡಿದ್ದಾರೆ. ಆಸ್ಪತ್ರೆಯಲ್ಲಿನ ಗಾಯಾಳುಗಳು ಲಾಡ್ ಅವರ ಸಹಾಯವನ್ನು ನೆನೆಯುತ್ತಿದ್ದಾರೆ.
ಲಾಡ್ ಅವರು ಈ ಮೊದಲು ಕೂಡ 2013ರಲ್ಲಿ ನಡೆದ ಉತ್ತರಾಖಂಡ ಪರಿಸರ ವಿಕೋಪದಲ್ಲಿಯು ಕನ್ನಡಿಗರ ರಕ್ಷಣೆಗೆ ತಮ್ಮ ಜೀವದ ಹಂಗು ಬಿಟ್ಟು ಹೋರಾಡಿದ್ದರು ಎನ್ನುವುದನ್ನು ನಾವು ಇಲ್ಲಿ ಸ್ಮರಿಸಬಹುದು