ಹುಬ್ಬಳ್ಳಿ-ಧಾರವಾಡ ಸುದ್ದಿ

ಸಚಿವ ಲಾಡ್ ರನ್ನಿಂಗ್: ಜಾಲತಾಣಗಳಲ್ಲಿ ವೈರಲ್

https://youtu.be/fYAviri78pw

ದಿನವೂ ದೇಹ ದಂಡಿಸುವ ಫಿಟ್ಟೆಸ್ಟ್ ಮಿನಿಸ್ಟರ್

ಹುಬ್ಬಳ್ಳಿ: ಇಂದಿನ ಜಗತ್ತಿನಲ್ಲಿ ಸದೃಢ ದೇಹ ಹಾಗೂ ಆರೋಗ್ಯಕರ ಮನಸ್ಥಿತಿ ಹೊಂದುವುದು ಬಹಳ ಮುಖ್ಯ. ತಮ್ಮ 47ನೇ ವಯಸ್ಸಿನಲ್ಲಿ ಕೂಡ ಯುವಕರನ್ನ ನಾಚಿಸುವ ಹಾಗೆ ತನ್ನ ದೇಹವನ್ನು ದಂಡಿಸುವ ಹಾಗೂ ಸದೃಢ ಆರೋಗ್ಯ ಕಾಪಾಡಿಕೊಂಡಿರುವ ಫಿಟ್ಟೆಸ್ಟ್ ಮಿನಿಸ್ಟರ್ ಎಂಬ ಹೆಗ್ಗಳಿಕೆ ಇರುವ ಕಾರ್ಮಿಕ ಖಾತೆ ಸಚಿವ ಸಂತೋಷ ಲಾಡ್ ಅವರು, ಇಂದು ಬೆಳಿಗ್ಗೆ ಪೇಡೆನಗರಿಯ ಬೀದಿಗಳಲ್ಲಿ ರನ್ನಿಂಗ್ ಮಾಡುತ್ತಿರುವ ದೃಶ್ಯ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.


ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಇವರು, ಧಾರವಾಡಕ್ಕೆ ವಿವಿಧ ಕಾರ್ಯಕ್ರಮ ಗಳಲ್ಲಿ ಭಾಗಿಯಾಗಲು ಬೆಳಿಗ್ಗೆ ಆಗಮಿಸಿದ್ದು, ಧಾರವಾಡದ ಬೀದಿಗಳಲ್ಲಿ ರನ್ನಿಂಗ್ ಮಾಡಿದ್ದಾರಲ್ಲದೇ ಸ್ಥಳೀಯ ಸಮಸ್ಯೆಗಳನ್ನು ಕಣ್ಣಾರೆಯಾಗಿ ನೋಡಿದ್ದಾರೆ.


ತಮ್ಮ ಬಿಡುವಿಲ್ಲದ ಕೆಲಸದ ಸಮಯದಲ್ಲಿಯೂ ಕೂಡಾ ಲಾಡ್ ಅವರು ದಿನವೂ ಕೂಡ ವಾಕಿಂಗ್ ಹಾಗೂ ರನ್ನಿಂಗ್ ಅಷ್ಟೇ ಅಲ್ಲದೇ ಜಿಮ್ ನಲ್ಲಿ ಸಮಯವನ್ನ ಕಳೆಯುತ್ತಾರೆ.

https://youtube.com/shorts/BrvbEO7IFZE?feature=share

administrator

Related Articles

Leave a Reply

Your email address will not be published. Required fields are marked *