ಹುಬ್ಬಳ್ಳಿ-ಧಾರವಾಡ ಸುದ್ದಿ

ಬಂಟ್ಸ್ ಬ್ಯಾಡ್ಮಿಂಟನ್: ಡಿಯರ್ ಕಾನ್ ಚಾಂಪಿಯನ್

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಬಂಟರ ಸಂಘದ ವತಿಯಿಂದ ನಡೆದ ಎಚ್‌ಡಿ ಬಂಟ್ಸ್ ಬ್ಯಾಡ್‌ಮಿಂಟನ್ ಲೀಗ್ ಪಂದ್ಯಾವಳಿಯು 1 ಮತ್ತು 2ನೇ ಜುಲೈ 2023 ರಂದು ಕರ್ನಾಟಕ ಜಿಮ್‌ಖಾನ್ ಅಸೋಷಿಯಷನ್‌ನಲ್ಲಿ ನಡೆಯಿತು.


ಸುಭಾಶ್ಚಂದ್ರ ಶೆಟ್ಟಿಯವರ ಜೀವನ ಸಮೃದ್ಧಿ, ಸುಗ್ಗಿ ಸುಧಾಕರ ಶೆಟ್ಟಿಯವರ ಸುಗ್ಗಿ ಏಸಸ್, ಕುಡ್ಲ ಸತೀಶ ಶೆಟ್ಟಿಯವರ ಬಂಟ್ ಪ್ರೆಂಡ್ಸ್, ಪ್ರದೀಪ ಪಕ್ಕಳರ ಮಂದಾರ ಮಿರಕಲ್ಸ್, ರವಿಕಾಂತ್ ಶೆಟ್ಟಿಯವರ ಪಂಜುರ್ಲಿ, ರವೀಂದ್ರ ಶೆಟ್ಟಿಯವರ ಡಿಯರ್ ಕಾನ್ ಮತ್ತು ಸುಧೀರ ಜೆ, ಶೆಟ್ಟಿಯವರ ಮೆಟ್‌ಕಟ್ ಸೇರಿದಂತೆ 7 ತಂಡಗಳು ಭಾಗವಹಿಸಿದ್ದು ಲೀಗ್ ಮಾದರಿ ಟೂರ್ನಿ 2 ದಿನದಲ್ಲಿ ಸುಮಾರು 148 ಪಂದ್ಯಗಳು ನಡೆದವು.


ಫೈನಲ್‌ನಲ್ಲಿ ಡಿಯರ್‌ಕಾನ್ ತಂಡವು 4-1ರ ಅಂತರದಿಂದ ಮೆಟ್‌ಕಟ್ ತಂಡವನ್ನು ಸೋಲಿಸಿ ಪ್ರಶಸ್ತಿಗೆ ಮುತ್ತಿಕ್ಕಿತು. ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿ ಯಾಗಿ ಶೀತಲ್ ಗೋಟಡಕಿ ಇಂತಹ ಪಂದ್ಯಾಟಗಳು ಸಮಾಜದ ಎಲ್ಲಾ ಭಾಂದವ ರನ್ನು ಒಗ್ಗೂಡಿಸುವಲ್ಲಿ ಸಹಕಾರಿಯಾಗುತ್ತದೆ. ಎಂದರು.


ಸಂಘದ ಅಧ್ಯಕ್ಷ ಸುಗ್ಗಿ ಸುಧಾಕರ ಶೆಟ್ಟಿ ಮಾತನಾಡಿ ಇಂತಹ ಕ್ರೀಡೆಗಳು ನೆಮ್ಮದಿ ಮತ್ತು ಸಮಾಜದ ಜೊತೆಗಿನ ಸಂಬಂಧಗಳನ್ನು ಬೆಳೆಸುವಲ್ಲಿ ಉಪಯುಕ್ತ ಎಂದರು. ಸಂಘದ ಉಪಾಧ್ಯಕ್ಷ ಶಾಂತಾರಾಮ ಶೆಟ್ಟಿ, ಕಾರ್ಯದರ್ಶಿ ಸತೀಶ ಡಿ ಶೆಟ್ಟಿ, ಸಹ ಕಾರ್ಯದರ್ಶಿ ರಾಜೇಂದ್ರ ವಿ ಶೆಟ್ಟಿ ಉಪಸ್ಥಿತರಿದ್ದರು. ನಿರ್ಣಾಯಕರಾಗಿ ಕು. ನವ್ಯಾ ಕಡೆಕರ ಮತ್ತು ರಾಮಚೇತು ಸಹಕರಿಸಿದರು. ಕ್ರೀಡಾ ಸಂಚಾಲಕ ಪುರಂದರ ರೈಯವರು ವಂದಿಸಿದರು.

administrator

Related Articles

Leave a Reply

Your email address will not be published. Required fields are marked *