ಹುಬ್ಬಳ್ಳಿ-ಧಾರವಾಡ ಸುದ್ದಿ

ಅಮರನಾಥ ಯಾತ್ರೆ: ಧಾರವಾಡದ ಐವರು ಸಂಕಷ್ಟದಲ್ಲಿ

ಧಾರವಾಡ: ಅಮರನಾಥ ದರ್ಶನಕ್ಕೆ ತೆರಳಿದ್ದ ಐವರು ಕನ್ನಡಿಗರು ಪಂಚತರಣಿ ರಸ್ತೆ ಮಧ್ಯೆಯೇ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ.
ಜುಲೈ ಒಂದರಿಂದ ಯಾತ್ರೆ ಆರಂಭಗೊಂಡಿತ್ತು. ದೇಶದ ನಾನಾ ಭಾಗಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಪ್ರವಾಸಿಗರು ಅಮರನಾಥನ ದರ್ಶನಕ್ಕೆ ತೆರಳಿದ್ದರು. ಇದೀಗ ಅಲ್ಲಿ ಭಾರೀ ಮಳೆ, ಹಿಮಪಾತ ಹಾಗೂ ಗುಡ್ಡಕುಸಿತ, ರಸ್ತೆ ಸಂಪರ್ಕ ಕಡಿತ ಸರ್ವೆ ಸಾಮಾನ್ಯ ವಾಗಿರುವುದರಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ.


ಜು.3ರಂದು ಧಾರವಾಡದಿಂದ ಹೋಗಿದ್ದ ಐದು ಜನ ಜುಲೈ 6ರಂದು ಅಮರನಾಥ ದರ್ಶನ ಮುಗಿಸಿ ವಾಪಸ್ ಬರುತ್ತಿದ್ದ ಸಂದರ್ಭದಲ್ಲಿ ವಿಪರೀತ ಮಳೆ ಆರಂಭಗೊಂಡು ರಸ್ತೆ ಸಂಪರ್ಕ ಕಡಿತಗೊಂಡಿದೆ.
ತಕ್ಷಣ ಸೇನಾ ಪಡೆಯುವರು ನೆರವಿಗೆ ಬಂದಿದ್ದು, ಕಳೆದ ಐದು ದಿನಗಳಿಂದ ರಕ್ಷಣಾ ಶಿಬಿರದಲ್ಲಿ ತಂಗಲು ಹಾಗೂ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ. ಪಂಚತರಣಿ ಎಂಬಲ್ಲಿ ಟೆಂಟ್ ಹಾಕಲಾಗಿದೆ. ಅದರಲ್ಲಿ ಧಾರವಾಡದ ಬಿಜೆಪಿ ಮುಖಂಡ ರಾಕೇಶ ನಾಝರೆ, ವಿಠ್ಠಲ ಬಾಚಗುಂಡೆ, ನಾಗರಾಜ ಹಳಕಟ್ಟಿ, ಹರೀಶ ಸಾಳುಂಕೆ, ಮಡಿವಾಳಪ್ಪ ಕೊಟಬಾಗಿ ಇದ್ದಾರೆ. ಇವರ ಜೊತೆಗೆ ಬೆಂಗಳೂರು, ರಾಯಚೂರು, ಗದಗ ಸೇರಿದಂತೆ ರಾಜ್ಯದ ಅನೇಕ ಜಿಲ್ಲೆಯ ಜನ ಕೂಡ ಇದ್ದಾರೆ.


ಹೀಗಾಗಿ ನಮ್ಮನ್ನು ಸುರಕ್ಷಿತವಾಗಿ ಹೊರಗೆ ಕರೆದುಕೊಂಡು ಬಂದು ಕರುನಾಡಿಗೆ ತಲುಪಿಸಿ ಎಂದು ಈಗಾಗಲೇ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರಿಗೆ ಮನವಿ ಮಾಡಿದ್ದಾರೆ.
ಅಲ್ಲಿ ಊಟದ ವ್ಯವಸ್ಥೆ ಕೂಡ ಸರಿಯಾಗಿಲ್ಲ. ಒಬ್ಬೊಬ್ಬ ಟೆಂಟ್‌ನವರು ೬೦೦ ರೂಪಾಯಿ ಪಡೆದುಕೊಳ್ಳುತ್ತಿದ್ದು, ಊಟ ಮಾಡಿದರೆ ವಾಂತಿ, ಬೇಧಿ ಆಗುತ್ತಿದೆ. ವಿಪರೀತ ಮಳೆ ಸುರಿಯುತ್ತಿದ್ದು, ಟೆಂಟ್ ಬಿಟ್ಟು ಹೊರಗಡೆ ಬರಲಾರದ ಸ್ಥಿತಿ ಇದೆ. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಕೂಡಲೇ ಪ್ರವಾಸಿಗರನ್ನು ವಾಪಾಸ್ ಕರುನಾಡಿಗೆ ಕರೆತರಲು ವ್ಯವಸ್ಥೆ ಮಾಡಬೇಕು ಎಂಬ ಒತ್ತಾಯವನ್ನು ಸಿಲುಕಿಕೊಂಡಿರುವ ಕನ್ನಡಿಗರು ಮಾಡಿದ್ದಾರೆ.

administrator

Related Articles

Leave a Reply

Your email address will not be published. Required fields are marked *