ಹುಬ್ಬಳ್ಳಿ-ಧಾರವಾಡ ಸುದ್ದಿ

ಜೈನ್ ಮುನಿ ಹತ್ಯೆ ಖಂಡಿಸಿ ಅವಳಿನಗರದಲ್ಲಿ ಪ್ರತಿಭಟನೆ

ಹುಬ್ಬಳ್ಳಿ/ಧಾರವಾಡ: ಚಿಕ್ಕೋಡಿಯ ಹಿರೇಕೋಡಿ ನಂದಿ ಆಶ್ರಮದ ೧೦೮ ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಖಂಡಿಸಿ ಹುಬ್ಬಳ್ಳಿ-ಧಾರವಾಡ ಅವಳಿನಗರದಲ್ಲಿ ಇಂದು ಜೈನ್ ಸಮಾಜ ಬಾಂಧವರಿಂದ ಬೃಹತ್ ಮೌನ ಪ್ರತಿಭಟನೆ ನಡೆಸಲಾಯಿತು.


ಪೂಜ್ಯ ಕಾಮಕುಮಾರ ಮುನಿ ಮಹಾರಾಜರ ಬರ್ಬರ ಹತ್ಯೆ ನಡೆದದ್ದು ಖಂಡನೀಯ. ಮತ್ತು ಈ ಹೇಯ ಕೃತ್ಯ ಇಡೀ ಜೈನ್ ಸಮುದಾಯವನ್ನು ತಲ್ಲಣಗೊಳಿಸಿದೆ. ಜೈನ್ ಮುನಿಗಳು ಶಾಂತಿ, ಸಹಾನುಭೂತಿ ಮತ್ತು ಅಧ್ಯಾತ್ಮಿಕ ಮಾರ್ಗದರ್ಶನದ ಸಂಕೇತಗಳಾಗಿದ್ದಾರೆ. ಅವರ ಮೇಲಿನ ದಾಳಿಯು ಅಹಿಂಸೆ ಮತ್ತು ಧಾರ್ಮಿಕ ಸಾಮರಸ್ಯದ ಆದರ್ಶಗಳ ಮೇಲಿನ ಅಕ್ರಮವಾಗಿದೆ. ಕಾರಣ ಸರಕಾರ ತುರ್ತು ಗಮನಹರಿಸಿ ಅಗತ್ಯ ಕ್ರಮ ಕೈಕೊಳ್ಳಬೇಕು. ಪ್ರಕರಣದ ಗಂಭೀರತೆ ಅರಿತು ಜೈನ್ ಬಸದಿಗಳಿಗೆ ಮತ್ತು ಮುನಿಗಳಿಗೆ ಸೂಕ್ತ ರಕ್ಷಣೆ ಕೊಡಬೇಕು. ಈ ಮೂಲಕ ಜೈನ್ ಮುನಿಗಳು ಭಯಮುಕ್ತ ವಾವಾರಣದಲ್ಲಿ ಕಾರ್ಯನಿರ್ವಹಿಸುವ ವ್ಯವಸ್ಥೆ ಮಾಡಬೇಕು ಎಂದು ಆಗ್ತಹಿಸಿ ಜಿಲ್ಲಾಧಿಕಾರಿ ಮುಖಾಂತರ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಮನವಿ ಸಲ್ಲಿಸಿದರು.


ಶಿವಲೀಲಾ ಕುಲಕರ್ಣಿ, ಡಾ. ಅಜಿತಪ್ರಸಾದ, ದತ್ತಾ ಡೋರ್ಲೆ, ನಾಗಪ್ಪ ಕುರಕುರಿ, ನಾಗಪ್ಪ ಚಿಕಣಿ, ಮಲ್ಲಪ್ಪ ಅಷ್ಡಗಿ, ಅರವಿಂದ ಏಗನಗೌಡರ, ಪಾರ್ಶ್ವನಾಥ ಶೆಟ್ಟಿ, ಅಶೋಕ ಬಾಗಿ, ಅನುಪಮಾ ರೋಖಡೆ, ಸುಜಾತಾ ಹಡಗಲಿ, ಅಶೋಕ ಬಾಳಿಕಾಯಿ, ದೇವರಾಜ ಕಲಗೌಡರ, ಕುರಕುರಿ, ಶ್ರೀಕಾಂತ ಕ್ಯಾತಪ್ಪನವರ, ಪ್ರೀತಿ ಬ್ಯಾಡಗಿ, ಸೋನಾಲಿ ಗೂಗಿ, ಮಾಲಿನಿ ಶೆಟ್ಡಿ, ನಮ್ರತಾ ಡೋರ್ಲೆ, ರೋಹಿಣಿ ಪತ್ರಾವಳಿ, ಧರಣೇಂದ್ರ ಕುರಕುರಿ, ಮೋಹನ ಅಷ್ಟಗಿ, ನಾಗಪ್ಪ ಕುರಕುರಿ, ರುದ್ರಪ್ಪ ಕೊಂಪಣ್ಣವರ, ಸಾವಂತ ಮುರಕಟ್ಡಿ, ದ್ಯಾಮಣ್ಣ ಜಕ್ಕಣ್ಣವರ, ಮಹಾವೀರ ಜೈನ್, ಮಹಾವೀರ ಉಪಾದ್ಯೆ, ಜಿನ್ನಪ್ಪ ಕುಂದಗೋಳ ಮತ್ತು ಹಲವು ಗ್ರಾಮಗಳ ಭಕ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.


ಹುಬ್ಬಳ್ಳಿ ವರದಿ: ಹುಬ್ಬಳ್ಳಿ ಮಿನಿ ವಿಧಾನ ಸೌಧದ ಬಳಿ ಪ್ರತಿಭಟನೆ ನಡೆಸಿದ ಜೈನ್ ಮುಖಂಡರು ತಹಶೀಲ್ದಾರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಅಮೃತ ಇಜಾರಿ, ರಾಮಚಂದ್ರ ದಿನಕರ, ವಿನಾಯಕ ಶೆಟ್ಟಿ, ಮಂಜುನಾಥ ರಾಜಮಾನೆ, ಸುಪಾರ್ಶ್ವ ಪಂಡಿತ, ಶೀತಲ ಮಲಗಾಂವಿ, ನಿತಿನ ಬೀಳಗಿ, ಅಭಿನಂದನ ವನಕುದರಿ, ಪುಷ್ಪದಂತ ಪಂಡಿತ, ಮಹಾವೀರ ರಾಜಮಾನೆ, ನಿಖಿಲ ಏವರ, ಅಭಿನಂದನ ರೋಖಡೆ, ಸುಪ್ರೀತ ದಿನಕರ, ಬಸವರಾಜ ದೇವರಮನಿ, ಜಿನೇಶ ಮೆಣಸಿನಕಾಯಿ ಇನ್ನಿತರರಿದ್ದರು.

administrator

Related Articles

Leave a Reply

Your email address will not be published. Required fields are marked *