ಹುಬ್ಬಳ್ಳಿ-ಧಾರವಾಡ ಸುದ್ದಿ

ಕೇಂದ್ರ ಸರ್ಕಾರದಿಂದ ದ್ವೇಷದ ರಾಜಕೀಯ: ಆರೋಪ

ಹುಬ್ಬಳ್ಳಿ-ಧಾರವಾಡ ಸೇರಿದಂತೆ ರಾಜ್ಯದಾದ್ಯಂತ ಕಾಂಗ್ರೆಸ್ ಮೌನ ಸತ್ಯಾಗ್ರಹ

ಹುಬ್ಬಳ್ಳಿ/ಧಾರವಾಡ: ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿಯವರನ್ನು ದೋಷಿ ಎಂದು ಸಾಬೀತುಪಡಿಸಲು ಹಾಗೂ ಅವರನ್ನು ಲೋಕಸಭೆಯ ಸದಸ್ಯ ಸ್ಥಾನದಿಂದ ಅನರ್ಹಗೊಳಿಸಲು ಕೇಂದ್ರದ ಬಿಜೆಪಿ ಸರ್ಕಾರ ಮಾಡುತ್ತಿರುವ ಹುನ್ನಾರ ಮತ್ತು ಅವರ ಸೇಡಿನ ರಾಜಕಾರಣದ ವಿರುದ್ಧ ಕಿಮ್ಸ್ ಮುಖ್ಯ ದ್ವಾರದಲ್ಲಿರುವ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಪ್ರತಿಮೆ ಎದುರಿಗೆ ಒಂದು ದಿನದ ಮೌನ ಸತ್ಯಾಗ್ರಹ ನಡೆಸಲಾಯಿತು.


ಉಣಕಲ್ ಹಾಗೂ ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಸಹಯೋಗದಲ್ಲಿ ನಡೆದ ಪ್ರತಿಭಟನೆಯಲ್ಲಿ ಉಭಯ ಜಿಲ್ಲಾ ಅಧ್ಯಕ್ಷರಾದ ಅಲ್ತಾಫಹುಸೇನ್ ಹಳ್ಳೂರ, ಅನಿಲಕುಮಾರ್ ಪಾಟೀಲ್, ಮಾಜಿ ಸಚಿವ ಎ.ಎಂ. ಹಿಂಡಸಗೇರಿ, ಮಾಜಿ ಸಂಸದ ಐ.ಜಿ.ಸನದಿ,ಕಾಂಗ್ರೆಸ್ ಮುಖಂಡರಾದ ಎಫ್.ಎಚ್.ಜಕ್ಕಪ್ಪನವರ, ಸದಾನಂದ ಡಂಗನವರ, ಪಾರಸಮಲ್ ಜೈನ್, ಸತೀಶ ಮಹೆರವಾಡೆ, ಶರಣಪ್ಪ ಕೊಟಗಿ, ಉಣಕಲ್ ಬ್ಲಾಕ್ ಅಧ್ಯಕ್ಷರಾದ ಶರೀಫ ಗರಗದ, ವಸಂತ ಲದ್ವಾ, ರಾಜಶೇಖರ ಮೆಣಸಿನಕಾಯಿ, ಬಂಗಾರೇಶ ಹಿರೇಮಠ, ಪಿ.ಎಚ್.ನಿರಲಕೇರಿ, ಶಾಕೀರ ಸನದಿ, ನವೀದ್ ಮುಲ್ಲಾ, ನಾಗೇಶ ಕಲಬುರ್ಗಿ, ಎಸ್.ಆರ್.ಪಾಟೀಲ, ಅರವಿಂದ ಏಗನಗೌಡರ, ಉಣಕಲ ಪ್ರಕಾಶ ಶೆಟ್ಟಿ,

ನರೇಶ ಮಲೆನಾಡು, ಪ್ರಕಾಶ ಕುರಟ್ಟಿ, ಇನಾಯತ್ ಪಠಾಣ, ದೊಡ್ಡರಾಮಪ್ಪ ದೊಡ್ಡಮನಿ, ಅಬ್ದುಲ್‌ಗನಿ ವಲಿಅಹ್ಮದ್, ಸಾಗರ ಹಿರೇಮನಿ, ವಿಶಾಲ ಮಾನೆ, ಈಶ್ವರ ಶಿರಸಂಗಿ, ಶಾರೂಖ ಮುಲ್ಲಾ, ಮೃತ್ಯುಂಜಯ ಕೊಟಗಿ, ಮಹೇಶ ದಾಬಡೆ, ರಫೀಕ ಚವ್ಹಾಣ, ಬಸವರಾಜ್ ಹೊಸಮನಿ, ಎಂ.ಎಚ್.ಚಳ್ಳಮರದ ಶೇಖ್, ಜ್ಯೋತಿ ವಾಲಿಕಾರ, ಕಾಂಚನಾ ಘಾಟಗೆ, ಸಿದ್ಧರೂಢ ಶಿಸನಳ್ಳಿ, ನಿರ್ಮಲಾ ಹೊಂಗಲ್, ಮಹೇಶ ಕಾರವಾರಕರ, ಅರವಿಂದ ಮಹೆರವಾಡೆ, ಬಿಷ್ಟೂ ಬೆಳಗಾವಿ, ವೀರಣ್ಣಾ ನೀರಲಗಿ, ವೀರಣ್ಣ ಹಿರೇಹಾಳ, ವಾದಿರಾಜ್ ಕುಲಕರ್ಣಿ, ಲತೀಫ ಶರಬತವಾಲಾ, ಶೇಖಪ್ಪ ರುದ್ರಾಕ್ಷಿ, ವಿ.ಜಿ.ಕೊಂಗವಾಡ, ಶ್ರೀಧರ ನಾಯ್ಕರ, ಪ್ರಶಾಂತ ಬಾವೂರ, ಹನಮಂತ ಅಂಬಿಗೇರ, ಶೇಖಣ್ಣ ಬೆಂಡಿಗೇರಿ, ಭೀಮಪ್ಪ ಬಡಿಗೇರ, ಜಗದೀಶ ಗಾಣದಾಳ ಸೇರಿದಂತೆ ನೂರಾರು ಜನ ಕಾಂಗ್ರೆಸ್ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.

ಧಾರವಾಡ: ಕಾಂಗ್ರೆಸ್ ಕಾರ್ಯಕರ್ತರ ಮೌನ ಪ್ರತಿಭಟನೆ

ಧಾರವಾಡ: ರಾಹುಲ್ ಗಾಂಧಿ ಅವರನ್ನು ಸಂಸದ ಸ್ಥಾನದಿಂದ ಅನರ್ಹ ಮಾಡುವ ಮೂಲಕ ಕೇಂದ್ರ ಸರ್ಕಾರ ದ್ವೇಷದ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಸದಸ್ಯರು ಧಾರವಾಡದಲ್ಲಿ ಮೌನ ಪ್ರತಿಭಟನೆ ನಡೆಸಿದರು.
ಧಾರವಾಡ ಜಿಲ್ಲಾಧಿಕಾರಿ ಕಚೇರಿ ಬಳಿಯಿರುವ ಗಾಂಧಿ ಪ್ರತಿಮೆ ಎದುರು ಮೌನ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.


ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ರಾಬರ್ಟ್ ದದ್ದಾಪುರಿ, ಕಾಂಗ್ರೆಸ್ ಮುಖಂಡ ರಾದ ದೀಪಕ ಚಿಂಚೋರೆ, ಬಸವರಾಜ ಕಿತ್ತೂರ, ನಾಗರಾಜ ಗುರಿಕಾರ, ಆನಂದ ಜಾಧವ, ವಸಂತ ಅರ್ಕಾಚಾರ, ಪ್ತಕಾಶ ಹಳ್ಯಾಳ, ಆನಂದ ಮುಶಣ್ಣವರ, ಸೇರಿದಂತೆ ಹಲವರು ಇದ್ದರು.

administrator

Related Articles

Leave a Reply

Your email address will not be published. Required fields are marked *