ಹುಬ್ಬಳ್ಳಿ-ಧಾರವಾಡ ಸುದ್ದಿ

ಆರೋಗ್ಯದ ಬಗ್ಗೆ ಕಾಳಜಿ ವಹಿಸಿ: ಡಾ. ಮಂಜುನಾಥ ಪಂಡಿತ

ಎಸ್‌ಡಿಎಂ ನಾರಾಯಣ ಹಾರ್ಟ್ ಸೆಂಟರ್‌ನಿಂದ ಆರೋಗ್ಯ ತಪಾಸಣೆ

ಹುಬ್ಬಳ್ಳಿ: ಎಸ್.ಡಿ.ಎಂ ನಾರಾಯಣ ಹಾರ್ಟ್ ಸೆಂಟರ್ ಧಾರವಾಡ ಹಾಗೂ ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಉಚಿತ ಹೃದಯರೋಗ ತಪಾಸಣಾ ಶಿಬಿರವನ್ನು ನಗರದ ಸರ್. ಸಿದ್ದಪ್ಪ ಕಂಬಳಿ ರಸ್ತೆಯಲ್ಲಿರುವ ಪತ್ರಕರ್ತರ ಭವನದಲ್ಲಿ ಏರ್ಪಡಿಸಲಾಗಿತ್ತು.


ಶಿಬಿರದ ನೇತ್ರತ್ವ ವಹಿಸಿದ್ದ ಡಾ. ಮಂಜುನಾಥ ಪಂಡಿತ ಮಾತನಾಡಿ, ಒತ್ತಡದ ಜೀವನದಲ್ಲಿ ಯಾರು ಕೆಲಸ ಮಾಡುತ್ತಾರೋ ಅಲ್ಲದೇ ಸರಿಯಾದ ಸಮಯಕ್ಕೆ ಊಟ, ನಿದ್ದೆಯಿಂದ ವಂಚಿತರಾದರೇ ಹೃದಯ ಸಮಸ್ಯೆ ಖಾಯಿಲೆ ಕಾಣಿಸಿಕೊಳ್ಳುತ್ತಿವೆ. ಈ ನಿಟ್ಟಿನಲ್ಲಿ ಆರೋಗ್ಯವೇ ಭಾಗ್ಯ ಎಂಬಂತೆ ಒತ್ತಡದ ಬದುಕಿನಲ್ಲಿಯೂ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸಬೇಕು ಎಂದರು.
ಪತ್ರಕರ್ತರು ಬಿಡುವಿನ ಸಮಯದಲ್ಲಿಯೂ ಕೂಡಾ ತಪಾಸಣೆಯಲ್ಲಿ ಭಾಗಿಯಾಗಿರುವುದು ಖಷಿಯ ವಿಚಾರವೆಂದರು. ಇನ್ನೂ ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ ಆರೋಗ್ಯ ಹಾಗೂ ತಪಾಸಣಾ ಕಾರ್ಡ್‌ಗಳ ಸೌಲಭ್ಯವನ್ನು ಪತ್ರಕರ್ತರಿಗೆ ಕೊಡಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುವುದು ಎಂದರು.


ಪತ್ರಕರ್ತರ ಸಂಘದ ಅಧ್ಯಕ್ಷರಾದ ಲೋಚನೇಶ್ ಹೂಗಾರ ನಾರಾಯಣ ಹೃದಯಾಲಯದವರು ಶಿಬಿರ ಏರ್ಪಡಿಸಿ ಪತ್ರಕರ್ತರ ಆರೋಗ್ಯದ ಕಾಳಜಿಗೆ ಒತ್ತು ನೀಡಿದ್ದಾರೆಂದರು.
ಪ್ರಧಾನ ಕಾರ್ಯದರ್ಶಿ ಸುಶಿಲೇಂದ್ರ ಕುಂದರಗಿ ಮಾತನಾಡಿ, ಸ್ವಾಗತಿಸಿ ಶೇ೩೦ ರಷ್ಟು ರಿಯಾಯಿತಿಯಲ್ಲಿ ಆರೋಗ್ಯ ತಪಾಸಣಾ ಹಾಗೂ ಚಿಕಿತ್ಸೆ ನೀಡಬೇಕು ಎಂದು ವಿನಂತಿಸಿದರು.
ರಾಜ್ಯ ಸಮಿತಿ ಸದಸ್ಯ ಗಣಪತಿ ಗಂಗೊಳ್ಳಿ, ಡಾ. ಜಯಪ್ರಕಾಶ್, ಮಾರ್ಕೆಟಿಂಗ್ ಹಿರಿಯ ವ್ಯವಸ್ಥಾಪಕ ಅಜಯ್ ಹುಲಮನಿ, ನಾಗರಾಜ್ ಬಡಿಗೇರ, ವಿನಾಯಕ ಗಂಜಿ, ನರ್ಸಿಂಗ್ ಸಿಬ್ಬಂದಿಗಳಾದ ಅಶ್ವಿನಿ, ಆಶಾ ಮಯೂರ, ಶೃತಿ, ಗಂಗಮ್ಮ, ಕಾರ್ಯಕಾರಿಣಿಯ ಯಲ್ಲಪ್ಪ ಸೋಲಾರಗೊಪ್ಪ, ಪ್ರಸನ್ನಕುಮಾರ ಹಿರೇಮಠ, ಪ್ರಕಾಶ ಚಳಗೇರಿ ಸೇರಿದಂತೆ ಅನೇಕ ಪತ್ರಕರ್ತರು ಇದ್ದರು.

 

administrator

Related Articles

Leave a Reply

Your email address will not be published. Required fields are marked *