ಅಧ್ಯಕ್ಷ ಸ್ಥಾನಕ್ಕೆ ಏಳು ಜನರ ಸೆಣಸಾಟ
ಹುಬ್ಬಳ್ಳಿ: ಹುಬ್ಬಳ್ಳಿ ವಕೀಲರ ಸಂಘದ ಪದಾಧಿಕಾರಿಗಳು ಮತ್ತು ಆಡಳಿತ ಮಂಡಳಿ ಸದಸ್ಯರ ಆಯ್ಕೆಗೆ ದಿ.21ರಂದು ಚುನಾವಣೆ ನಡೆಯಲಿದ್ದು ಅಧ್ಯಕ್ಷ ಸ್ಥಾನಕ್ಕೆ ಏಳು ಜನ ಸ್ಪರ್ಧಿಸಿದ್ದು ಹಿಂದೆಂದಿಗಿಂತ ಹೆಚ್ಚಿನ ತುರುಸಿನ ಪೈಪೋಟಿ ನಡೆದಿದೆ.
2023-25 ನೇ ಸಾಲಿನ ಎರಡು ವರ್ಷಗಳ ಅವಧಿಗೆ ಈ ಚುನಾವಣೆ ನಡೆಯುತ್ತಿದ್ದು ಸುಮಾರು ೧೪೦೦ಕ್ಕೂ ಹೆಚ್ಚು ಅರ್ಹ ಮತದಾರರು ಮತ ಚಲಾಯಿಸಲಿದ್ದಾರೆ.
ಅಧ್ಯಕ್ಷ ಸ್ಥಾನಕ್ಕೆ ಹಾಲಿ ಅಧ್ಯಕ್ಷರಾಗಿರುವ ಸಿ.ಆರ್.ಪಾಟೀಲ, ಮಾಜಿ ಅಧ್ಯಕ್ಷ ಡಿ.ಎಂ.ನರಗುಂದ, ಎಂ.ಎಸ್.ಬಾಣದ, ಸಿ.ಬಿ.ಪಾಟೀಲ, ಎಸ್.ಜೆ.ನಿರ್ಮಾಣಿಕ, ಎಸ್.ಕೆ.ಕಾಯಕಮಠ, ಎಚ್.ಎಲ್.ನದಾಫ್ ಸ್ಪರ್ಧೆಗಿಳಿದಿದ್ದಾರೆ. ಸಾಮಾನ್ಯವಾಗಿ ಅಧ್ಯಕ್ಷ ಸ್ಥಾನಕ್ಕೆ ನೇರ ಪೈಪೋಟಿಯಿರುತ್ತಿತ್ತು.ಈ ಬಾರಿ ಏಳು ಜನ ಕಣಕ್ಕಿಳಿದಿದ್ದು ತೀವ್ರ ಜಿದ್ದಾಜಿದ್ದಿಯ ಪೈಪೋಟಿ ನಡೆದಿದೆ.
ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಹನಮಂತ ಶಿಗ್ಗಾಂವ ಮತ್ತು ಪಿ.ಎಚ್.ತೋಟದ ಮಧ್ಯೆ ಸೆಣಸಾಟವಿದ್ದು ಕಳೆದ ಬಾರಿ ಅಲ್ಪ ಅಂತರದಲ್ಲಿ ಶಿಗ್ಗಾಂವ ಪರಾಭವ ಹೊಂದಿದ್ದರು.
ಒಂದೇ ಉಪಾಧ್ಯಕ್ಷ ಸ್ಥಾನಕ್ಕೆ ಲಕ್ಷ್ಮಣ ಬೀಳಗಿ, ಎ.ಕೆ.ಅಕ್ಕಿ, ಎಸ್.ಎಂ.ಪಾಟೀಲ ಹಾಗೂ ಝಡ್.ಕೆ.ತಟಗಾರ ಕಣದಲ್ಲಿದ್ದಾರೆ. ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ಎಂ.ಎಚ್.ಜಕಾತಿ, ಜಿ.ಡಿ.ಜಂತ್ಲಿ, ಎಸ್.ಎಂ.ಕಲಬುರ್ಗಿ, ಎಸ್.ಕೆ.ಕೊಂಡೋಜಿ, ಆರ್.ಎನ್. ಮುಳಗುಂದಮಠ ಸ್ಪರ್ಧಿಸಿದ್ದಾರೆ.ಖಜಾಂಚಿ ಸ್ಥಾನಕ್ಕೆ ಎಸ್.ಜಿ.ದೊಡ್ಡಮನಿ ಮತ್ತು ಗುಳೇದ ಎಸ್.ವಿ.ಮಧ್ಯೆ ಪೈಪೋಟಿಯಿದೆ.
ಆಡಳಿತ ಮಂಡಳಿಯ( ಹಿರಿಯರು) 3 ಸ್ಥಾನಗಳಿಗೆ ಎಸ್.ವೈ ಬೆನಕಣ್ಣವರ, ಆರ್.ಎಸ್.ಗುಂಜಾಳ, ಐ.ಬಿ.ಹೊಳಗಣ್ಣವರ, ಜೆ.ಪಿ.ಕೋಕರೆ, ಎಸ್.ಎಚ್.ಕೂಡಲ, ಎಂ.ಎಲ್.ಲಾಡಖಾನ, ಎಸ್.ಕೆ.ಮುಲ್ಲಾ, ಆರ್.ಎಸ್.ಪಾಗದ, ಎಲ್.ಎಸ್.ಪಾಟೀಲ, ಎಸ್.ಕೆ.ಪಾಟೀಲ, ಸವಿತಾ ಪಾಟೀಲ, ಎಂ.ಬಿ.ರೋಣದ, ಶಿವಕುಮಾರ ಕೆ.ಬಿ.ಹೀಗೆ ೧೩ಜನ ಆಕಾಂಕ್ಷಿಗಳಾಗಿದ್ದಾರೆ.
ಕಿರಿಯರ ವಿಭಾಗದ ಮೂರು ಸ್ಥಾನಗಳಿಗೆ ಎಸ್.ಎಂ.ದೊಡ್ಡಮನಿ, ವಿ.ಎಸ್. ಹಳೇಮನಿ, ಎಂ.ಎನ್.ಇಬ್ರಾಹಿಂಪುರ, ರಾಮಕೃಷ್ಣ ಕಠಾರೆ, ಮಧು ಕೋಳಂಬೆ, ವಿವೇಕಾನಂದ ಕೂಬಿಹಾಳ, ಎಚ್.ಎಸ್.ಪಟ್ಟಣಶೆಟ್ಟರ್, ಎ.ವೈ.ರೋಣದ, ಎಂ.ಬಿ.ವಗ್ಗರ ಹೀಗೆ ೯ ಜನ ಕಣದಲ್ಲಿದ್ದಾರೆ.
ಮಹಿಳೆಯರ ಹಿರಿಯರ ವಿಭಾಗದಲ್ಲಿ ಕೆ.ಟಿ.ಹಣಗಿ, ಉಮಾ ಹಂಡಿ, ಕಿರಿಯರ ವಿಭಾಗದಲ್ಲಿ ಗೀತಾ ಕಟಗಿಮಠ, ಶಿಲ್ಪಶ್ರೀ ಎಂ.ಸಿ. ಸ್ಪರ್ಧಿಸಿದ್ದಾರೆ. ಎಸ್.ಜಿ.ಅರಗಂಜಿ ಚುನಾವಣಾಧಿಕಾರಿಗಳಾಗಿದ್ದಾರೆ.