ಹುಬ್ಬಳ್ಳಿ-ಧಾರವಾಡ ಸುದ್ದಿ
ಆರ್‌ಎಫ್‌ಒ ಕಚೇರಿಯಲ್ಲಿ ಗಂಧದ ಕಟ್ಟಿಗೆ ಕಳುವಿನ ಗುಸು ಗುಸು!

ಆರ್‌ಎಫ್‌ಒ ಕಚೇರಿಯಲ್ಲಿ ಗಂಧದ ಕಟ್ಟಿಗೆ ಕಳುವಿನ ಗುಸು ಗುಸು!

ಯಾವುದೇ ಕಳ್ಳತನವಾಗಿಲ್ಲ : ಅಧಿಕಾರಿಗಳ ಸ್ಪಷ್ಟನೆ

ಹುಬ್ಬಳ್ಳಿ : ನಗರದ ನೃಪತುಂಗ ಬೆಟ್ದದ ಬಳಿಯಿರುವ ಪ್ರಾದೇಶಿಕ ವಲಯ ಅರಣ್ಯಾಧಿಕಾರಿಗಳ ಕಚೇರಿಯಲ್ಲಿ ವಶಪಡಿಸಿಕೊಂಡ ಗಂಧದ ಕಟ್ಟಿಗೆಗಳು ಕಳುವಾಗಿದೆ ಎಂಬ ಸುದ್ದಿ ಬೆಳಗಿನಿಂದಲೂ ಹರಿದಾಡುತ್ತಿತ್ತು. ಆದರೆ ಸ್ವತಃ ವಲಯ ಅರಣ್ಯಾಧಿಕಾರಿ ಶ್ರೀಧರ ತೆಗ್ಗಿಮನಿ ಅವರು ಇದನ್ನು ನಿರಾಕರಿಸಿದ್ದು ಕಳುವು ಮಾಡುವ ಯತ್ನ ನಡೆದಿದ್ದು ಆದರೆ ಕಾವಲುಗಾರನ ಮನೆ ಅಲ್ಲೇ ಇರುವುದರಿಂದ ಯಾವುದೇ ಕಳ್ಳತನ ಆಗಿಲ್ಲ ಎಂದು ಹೇಳಿದ್ದಾರೆ.


ನೃಪತುಂಗ ಬೆಟ್ಟದ ಬಳಿಯ ಸಾಮಾಜಿಕ ವಲಯ ಅರಣ್ಯ ಅಧಿಕಾರಿಗಳ ಕಚೇರಿ ಅಲ್ಲದೇ ಪ್ರಾದೇಶಿಕ ಅರಣ್ಯ ವಲಯ ಕಚೇರಿ ಎದುರಿನ ಎರಡು ಗಂಧದ ಮರಗಳು ಇದ್ದು ಅದರ ಕಡಿಯುವ ಯತ್ನ ನಡೆದಿದ್ದು, ಆದರೆ ಕಾವಲುಗಾರನ ಎಚ್ಚರಗೊಂಡ ಪರಿಣಾಮ ಯಾವುದೇ ಕಳ್ಳತನವಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆಂದು ಸಂಬಂಧಪಟ್ಟ ಅಶೋಕ ನಗರ ಠಾಣೆಯ ಇನ್ಸಪೆಕ್ಟರ್ ಸುದರ್ಶನ ಹೇಳಿದ್ದಾರೆ.
ಅರಣ್ಯ ಅಧಿಕಾರಿಗಳು ಅಶೋಕನಗರ ಠಾಣೆ ಮೆಟ್ಟಿಲು ಹತ್ತಿದರೂ ಯಾವುದೇ ದೂರು ನೀಡಿಲ್ಲವಾಗಿದ್ದು ಅವರು ದೂರು ನೀಡಿದಲ್ಲಿ ನಾವು ದಾಖಲಿಸಿಕೊಳ್ಳುವುದಾಗಿ ಅಶೋಕನಗರ ಇನ್ಸಪೆಕ್ಟರ್ ಹೇಳಿದ್ದಾರೆ.

ಅರಣ್ಯಾಧಿಕಾರಿಗಳು ಗಂಧದ ಕಟ್ಟಿಗೆಯನ್ನು ಲಾಕರ್‌ನಲ್ಲಿ ಇಡುತ್ತೇವೆ ಯಾವುದೆ ಕಳುವಾಗಿಲ್ಲ ಎನ್ನುತ್ತಾರೆ.ಆದರೆ ಬೆಳಗಿನಿಂದ ಹಬ್ಬಿರುವಗುಸು ಗುಸು ಪ್ರಕಾರ ಕಿಟಕಿ ಬಾಗಿಲು ಮುರಿದು ವಿವಿಧೆಡೆ ವಶಪಡಿಸಿಕೊಂದು ಸಂಗ್ರಹಿಸಿಟ್ಟಿದ್ದ ಐವತ್ತು ಕೆ.ಜಿ. ಗಂದದ ಕಟ್ಟಿಗೆಗಳನ್ನು ಕಳುವು ಮಾಡಲಾಗಿದ್ದು, ಟಾಟಾ ಏಸ್ ವಾಹನದಲ್ಲಿ ಸಾಗಿಸಲಾಗಿದೆ ಎಂಬ ಮಾತು ಕೇಳಿ ಬರುತ್ತಿದೆ. ಕಚೇರಿಗೆ ಯಾವುದೇ ಸಿ.ಸಿ.ಟಿ.ವಿ ಸಂಪರ್ಕ ಇಲ್ಲವಾಗಿದೆ.

administrator

Related Articles

Leave a Reply

Your email address will not be published. Required fields are marked *