ಹುಬ್ಬಳ್ಳಿ-ಧಾರವಾಡ ಸುದ್ದಿ

ಮ್ಯಾನೇಜಮೇಂಟ್ ಡಿಪ್ಲೋಮಾಗೆ ಅರ್ಜಿ ಆಹ್ವಾನ

ಫ್ಯೂಯಲ್ ಬಿಜಿನೆಸ್ ಸ್ಕೂಲ್‌ನಿಂದ ವಿದ್ಯಾರ್ಥಿನಿಯರಿಗೆ ಸಂಪೂರ್ಣ ವಿದ್ಯಾರ್ಥಿ ವೇತನ

ಹುಬ್ಬಳ್ಳಿ: ಫ್ಯೂಯಲ್ ಬಿಸಿನೆಸ್ ಪುಣೆ ವತಿಯಿಂದ ಪೋಸ್ಟ್ ಗ್ಯಾಜ್ಯುಯೇಟ್ ಡಿಪ್ಲೋಮಾ ಇನ್ ಮ್ಯಾನೇಜಮೆಂಟ್ ಕೋರ್ಸ್‌ಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದೆ ಎಂದು ಸಂಸ್ಥೆಯ ಮುಖ್ಯ ಮಾರ್ಗದರ್ಶಕ ಸಂತೋಷ ಹುರಳಿಕೊಪ್ಪಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಪ್ರವೇಶ ಪಡೆದ 60 ವಿದ್ಯಾರ್ಥಿಗಳಿಗೆ ನೂರಕ್ಕೆ ನೂರರಷ್ಟು ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತದೆ ಎಂದರು.
ಪಿಜಿಡಿಎಂ ಕೋರ್ಸ್‌ನಲ್ಲಿ 120 ವಿದ್ಯಾರ್ಥಿಗಳು ಸೇರಿದ್ದಾರೆ, ಇದರಲ್ಲಿ 60 ಹುಡುಗಿಯರು ಒರಾಕಲ್ ಕಂಪನಿಯಿಂದ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್) ಕಾರ್ಯಕ್ರಮದಡಿಯಲ್ಲಿ ಶೇ 100 ವಿದ್ಯಾರ್ಥಿವೇತನವನ್ನು ಪಡೆಯುತ್ತಾರೆ ಎಂದು ಹೇಳಿದರು.


ಎರಡು ವರ್ಷದ ಕೋರ್ಸ್‌ಗೆ ಪ್ರತಿ ವಿದ್ಯಾರ್ಥಿಗೆ ಸುಮಾರು ಎಂಟು ಲಕ್ಷ ರೂ. ’ಸಿಎಸ್‌ಆರ್ ಇಂಪ್ಯಾಕ್ಟ್ ಸ್ಕಾಲರ್‌ಶಿಪ್’ ಅಡಿಯಲ್ಲಿ ಆಯ್ಕೆಯಾದವರಿಗೆ ಉಚಿತ ಕಾಲೇಜು, ವಸತಿ ಮತ್ತು ಪುಸ್ತಕಗಳು ಸಿಗುತ್ತವೆ. ಪದವಿ ಪೂರ್ಣಗೊಳಿಸಿರುವ ವಿದ್ಯಾರ್ಥಿಗಳು ಆಗಸ್ಟ್ 15ರೊಳಗೆ ಕೋರ್ಸ್‌ಗೆ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದ್ದಾರೆ.
ಸಂಸ್ಥೆಯು ಮೂರು ವರ್ಷಗಳ ಬಿಬಿಎ ಕೋರ್ಸ್ ಅನ್ನು ಸಹ ನೀಡುತ್ತದೆ ಮತ್ತು 160 ಸೀಟುಗಳು ಇರುತ್ತವೆ. ಅವರು ಕೆಲವು ಕಾರ್ಪೊರೇಟ್ ಕಂಪನಿಗಳೊಂದಿಗೆ ಸ್ಕಾಲರ್‌ಶಿಪ್ ನೀಡಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದರು.


2007ರಲ್ಲಿ ಜೆಬಿಎಸ್ ಆಪ್ ಕೇಬ್ರಿಡ್ಜ್ ಫೆಲೋ ಮತ್ತು ಅಶೋಕ ಫೆಲೋ ಕೇತನ್ ದೇಶಪಾಂಡೆ ಅವರು ಈ ಶಿಕ್ಷಣ ಸಂಸ್ಥೆಯನ್ನು ಸಂಸ್ಥಾಪಿಸಿದರು. ಫ್ಯೂಯಲ್ ಸಾಮಾಜಿಕ ಸಂಸ್ಥೆಗಳು ಭಾರತ ಮತ್ತು ಜಾಗತಿಕವಾಗಿ ವಿವಿಧ ಸಿಎಸ್‌ಆರ್ ಕಾರ್ಯಕ್ರಮಗಳಡಿಯಲ್ಲಿ ಶಿಕ್ಷಣ ಮತ್ತು ಕೌಶಲ ಅಭಿವೃದ್ಧಿ ಉಪಕ್ರಮಗಳ ಮೂಲಕ 1.2 ಮೀಲಿಯನ್ ಯುವ ವಿದ್ಯಾರ್ಥಿ-ವಿದ್ಯಾರ್ಥಿನಿಯರ ಭವಿಷ್ಯದ ಜೀವನವನ್ನು ಧನಾತ್ಮಗೊಳಿಸಿದೆ ಎಂದರು.


ಫ್ಯೂಯಲ್ ಬಿಜಿನೆಸ್ ಸ್ಕೂಲ್‌ನಲ್ಲಿ ಭವಿಷ್ಯದ ಮಹಿಳಾ ನಾಯಕರನ್ನು ಸಬಲಿಕರಣಗೊಳಿಸುವುದು ನಮ್ಮ ಪ್ರಮುಖ ಗುರಿಯಾಗಿದೆ. ಸಿಎಸ್‌ಆರ್ ವಿದ್ಯಾರ್ಥಿ ವೇತನಗಳ ಮೂಲಕ ಸಂಶಕ್ತ ಮತ್ತು ಸಮರ್ಥ ಮಹಿಳೆಯರ ಪೀಳೆಗೆಯನ್ನು ಬೆಳೆಸುತ್ತೇವೆ ಎಂದರು.
ಹುಬ್ಬಳ್ಳಿಯಲ್ಲೂ ಸಹ ನಮ್ಮ ಕೌಶಲಾಭಿವೃದ್ಧಿ ಕೇಂದ್ರವಿದ್ದು ಈಗಾಗಲೇ ಲಕ್ಷಾಂತರ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಕೌಶಲಾಭಿವೃದ್ಧಿ ತರಬೇತಿ ನೀಡಲಾಗಿದೆ. ಇದರ ಸದುಪಯೋಗ ಪಡೆದು ಸಾಕಷ್ಟು ಸಂಖ್ಯೆಯ ವಿದ್ಯಾರ್ಥಿ-ವಿದ್ಯಾರ್ಥಿನಿಯರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಅತ್ಯುತ್ತಮ ವೇತನದ ಉದ್ಯೋಗ ಪಡೆದು ಸಂತೃಪ್ತ ಜೀವನ ನಡೆಸುತ್ತಿದ್ದಾರೆ ಎಂದು ತಿಳಿಸಿದರು.

ಮಾಹಿತಿಗೆ www.fuelbschool.com, fuelcollege.org ದೂ.8600035498/99 ಸಂಪರ್ಕಿಸಬಹುದು ಎಂದು ತಿಳಿಸಿದರು.
ಸಂಸ್ಥೆಯ ಸಲಹೆಗಾರರಾದ ಪಲ್ಲವಿ ಹುರಳಿಕೊಪ್ಪಿ, ಕರ್ನಲ್ ವಿವೇಕ ಗೋಷ್ಠಿಯಲ್ಲಿದ್ದರು.

administrator

Related Articles

Leave a Reply

Your email address will not be published. Required fields are marked *