ಹುಬ್ಬಳ್ಳಿ-ಧಾರವಾಡ ಸುದ್ದಿ

ಅಪಾರ ಬೆಂಬಲಿಗರೊಂದಿಗೆ ಮನೋಹರ ಮೋರೆ ನಾಮಪತ್ರ ಸಲ್ಲಿಕೆ

ವಿದ್ಯಾ ಪ್ರಸಾರಕ ಮಂಡಳ ಚುನಾವಣೆ

ಧಾರವಾಡ: ನಗರದ ಪ್ರತಿಷ್ಠಿತ ಶೈಕ್ಷಣಿಕ ಸಂಸ್ಥೆಗಳಲ್ಲಿ ಒಂದಾದ ಮರಾಠಾ ವಿದ್ಯಾ ಪ್ರಸಾರಕ್ಕೆ ಮಂಡಳದ ಪದಾಧಿಕಾರಿಗಳ ಆಯ್ಕೆಗೆ ಚುನಾವಣೆ ಘೋಷಣೆಯಾಗಿದ್ದು ನಾಪಪತ್ರ ಸಲ್ಲಿಸುವ ಭರಾಟೆ ಬಲು ಜೋರಾಗಿದೆ.


ಎಮ್.ಎನ್.ಮೋರೆ ಅವರ ಗುಂಪಿನಿಂದ ಅಪಾರ ಬೆಂಬಲದೊಂದಿಗೆ ಸಮಾಜದ ಗುರು–ಹಿರಿಯರು, ಯುವಕರ ಸಮ್ಮಖದಲ್ಲಿ ಚುನಾವಣೆಗೆ ಅಧ್ಯಕ್ಷ ಸ್ಥಾನಕ್ಕೆ ಮನೋಹರ.ಎನ್.ಮೋರೆ ನಾಮಪತ್ರ ಸಲ್ಲಿಸಿದರು.


ಉಪಾಧ್ಯಕ್ಷ ಸ್ಥಾನಕ್ಕೆ ಯಲ್ಲಪ್ಪಾ ಚವ್ವಾಣ, 13 ಜನ ನಿರ್ದೇಶಕ ಸ್ಥಾನಕ್ಕೆ ಕ್ರಮವಾಗಿ ಶುಭಾಶಯಗಳು ಶಿಂಧೆ, ರಾಜು ಬಿರ್ಜನ್ನವರ, ಈಶ್ವರ ಪಾಟೀಲ, ಸುಭಾಸ ಪವಾರ, ರಾಜು ಸೂರ್ಯವಂಶಿ, ಮಲ್ಲೇಶ್ ಶಿಂಧೆ, ಅನಿಲ ಭೋಸಲೆ, ದತ್ತಾ ಮೊಟೆ, ರಾಜು ಕಾಳೆ, ಮಹೇಶ ಶಿಂಧೆ, ಪುರುಷೊತ್ತಮ ಜಾಧವ, ಸುನೀಲ ಮೋರೆ, ಪ್ರಸಾದ ಹಂಗಳಕಿ ಅವರುಗಳು ತಮ್ಮ ಬೆಂಬಲರೊಂದಿಗೆ ನಾಮಪತ್ರವನ್ನು ಪತ್ರವನ್ನು ಚುನಾವಣಾ ಅಧಿಕಾರಿಗಳಿಗೆ ಸಲ್ಲಿಸಿದರು.


ನಾಮಪತ್ರ ಸಲ್ಲಿಸುವ ಪೂರ್ವದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸಿದರು.

administrator

Related Articles

Leave a Reply

Your email address will not be published. Required fields are marked *