ಪಾನ್ ಇಂಡಿಯಾ ಬ್ರ್ಯಾಂಡ್‌ನತ್ತ ಹೆಜ್ಜೆ
ಬೆಂಗಳೂರು: ಹಲವಾರು ಸಾಧನೆಗಳನ್ನು ಮುಡಿಗೇರಿಸಿಕೊಂಡಿರುವ ವಿಜಯಾನಂದ ಟ್ರಾವೆಲ್ಸ್‌ಗೆ ಇನ್ನೊಂದು ಹೊಸ ದಾಖಲೆ ಸೇರ್ಪಡೆಯಾಗಿದೆ.500 ಕೋಟಿ ರೂ. ಮೊತ್ತದ, 550 ವೋಲ್ವೋ ಹಾಗೂ ಐಷರ್ ಇಂಟರ್‌ಸಿಟಿ ಲಕ್ಸುರಿ ಸ್ಲೀಪರ್ ಬಸ್‌ಗಳ ಖರೀದಿಗೆ ವಿಜಯಾನಂದ ಟ್ರಾವೆಲ್ಸ್ ಮುಂದಾಗಿದ್ದು, ಭಾರತದಲ್ಲಿ ಅಧಿಕ ಬಸ್ ಗಳನ್ನು ಖರೀದಿ ಮಾಡುತ್ತಿರುವ ಸಾರಿಗೆ ಸಂಸ್ಥೆ ಎಂಬ ಹೆಗ್ಗಳಿಕೆಯೊಂದಿಗೆ ಇತಿಹಾಸ ಸೃಷ್ಟಿಸಿದೆ.
ವಿಜಯಾನಂದ ಟ್ರಾವೆಲ್ಸ್ ಪ್ರವೇಟ್ ಲಿಮಿಟೆಡ್‌ನ ಎಂಡಿ ಶಿವ ಸಂಕೇಶ್ವರ, ಖರೀದಿ ಆದೇಶ ನೀಡುವ ಮೂಲಕ ಭಾರತದಲ್ಲಿ ವೋಲ್ವೋ ಮತ್ತು ಐಷರ್‌ಗಳಿಂದ 550ಇಂಟರ್‌ಸಿಟಿ ಬಸ್‌ಗಳನ್ನು ವಿಜಯಾನಂದ ಟ್ರಾವೆಲ್ಸ್‌ಗೆ ಸೇರ್ಪಡೆ ಮಾಡಿಕೊಂಡು ಮೈಲಿಗಲ್ಲು ನಿರ್ಮಾಣ ಮಾಡಿದ್ದಾರೆ. ಈ ವಹಿವಾಟು ಅಂದಾಜು 500 ಕೋಟಿ ರೂ. ಆಗಿದ್ದು, ಈ ಪೈಕಿ ಐಷರ್ ಇಂಟರ್‌ಸಿಟಿ 13.5ಎಂ ಎಸಿ ಮತ್ತು ಎಸಿಯೇತರ ಸ್ಲೀಪರ್ ಕೋಚ್‌ಗಳ 500 ಬಸ್ ಮತ್ತು ವೋಲ್ವೋ 9600ಲಕ್ಸುರಿ ಸ್ಲೀಪರ್ ಕೋಚ್‌ಗಳ 50 ಬಸ್‌ಗಳು ಸೇರಿವೆ.
ಅತ್ಯುತ್ತಮ ದರ್ಜೆಯ ಬಸ್ ಖರೀದಿಗೆ ವೋಲ್ವೋ ಮತ್ತು ಐಷರ್‌ನೊಂದಿಗೆ ವಿಜಯಾನಂದ ಟ್ರಾವೆಲ್ಸ್ ಉತ್ತಮ ಒಡನಾಟ ಹೊಂದಿದೆ. ಭಾರತದಲ್ಲಿ ಸುಖಕರ ಬಸ್ ಪ್ರಯಾಣದ ಅನುಭವವನ್ನು ಹೆಚ್ಚಿಸುವ ನಿಟ್ಟಿನಲ್ಲಿ ವಿಶ್ವದರ್ಜೆಯ ಗುಣಮಟ್ಟ, ಸುರಕ್ಷತೆ ಹಾಗೂ ಪ್ರಯಾಣಿಕರ ಆರಾಮಕ್ಕೆ ನೀಡಿರುವ ಪ್ರಾಮುಖ್ಯತೆಯನ್ನು ಇದು ತೋರಿಸುತ್ತದೆ. ಮೇಕ್ ಇನ್ ಇಂಡಿಯಾ ಉಪಕ್ರಮಕ್ಕೆ ಅನುಗುಣವಾಗಿ ಈ ಬಸ್‌ಗಳನ್ನು ಹೊಸಕೋಟೆ ಮತ್ತು ಪೀತಂಪುರದ ಅತ್ಯಾಧುನಿಕ ಕಾರ್ಖಾನೆಗಳಲ್ಲಿ ನಿರ್ವಿಸಲಾಗಿದೆ. ವಿಜಯಾನಂದ ಟ್ರಾವೆಲ್ಸ್‌ನ ಈ ಕ್ರಮವು ಮುಂಬರುವ ದಿನಗಳಲ್ಲಿ ಅಖಿಲ ಭಾರತ (ಪಾನ್-ಇಂಡಿಯಾ ಬ್ರಾಂಡ್ ಆಗುವತ್ತ ದೃಢ ಹೆಜ್ಜೆಯನ್ನು ಇರಿಸಿದಂತಾಗಿದೆ. ವಿಜಯಾನಂದ ಟ್ರಾವೆಲ್ಸ್ ಪ್ರಸ್ತುತ ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ಗುಜರಾತ್ ಹಾಗೂ ಗೋವಾ ರಾಜ್ಯಗಳಲ್ಲಿ ಸೇವೆ ಒದಗಿಸುತ್ತಿದೆ.