ಯುವಕರಿಂದ ದೇಶ ಉನ್ನತಿಕರಣವಾಗಲಿ: ಡಾ.ಶರಣಪ್ಪ ಕೋಟಗಿ
ಧಾರವಾಡ: ಯುವಕರಿಂದ ದೇಶ ಉನ್ನತಿಕರಣವಾಗಲಿ ಎಂದು ಡಾ.ಶರಣಪ್ಪ ಎಂ ಕೋಟಗಿ ಹೇಳಿದರು.
ಅವರು ಶ್ರೀ ಬಸವೇಶ್ವರ್ ರೂರಲ್ ಎಜುಕೇಷನ್ ಆಂಡ್ ಡೆವಲಪ್ಮೆಂಟ್ ಟ್ರಸ್ಟ್ ನ ರೂರಲ್ ಬಿ. ಇಡಿ ಕಾಲೇಜು, ಶ್ರೀ ಸತ್ಯ ಸಾಯಿ ಕಾಲೇಜ್ ಆಫ್ ಹೋಮೋಪತಿಕ್ ಮೆಡಿಕಲ್ ಕಾಲೇಜ್ ಆಂಡ್ ಹಾಸ್ಪಿಟಲ್, ವಿ ಹೆಚ್ ಮರದ ಎಂ. ಇಡಿ ಕಾಲೇಜು, ಶ್ರೀ ಬಸವೇಶ್ವರ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯ ಸತ್ತೂರ್ ಧಾರವಾಡ ಹಾಗೂ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ ಮತ್ತು ಯಂಗ್ ಇಂಡಿಯನ್ ವತಿಯಿಂದ ಸತ್ತೂರಿನ ಕಾಲೇಜು ಸಭಾಂಗಣದಲ್ಲಿ ನಡೆದ ಭವಿಷ್ಯದ 3.0ಯುವ ಸಮಾವೇಶ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭಾರತ ದೇಶದಲ್ಲಿ ಪ್ರಪಂಚದಲ್ಲಿ ಇರುವ ದೇಶಗಳಿಗಿಂತ ಯುವಕರು ಬುಹುಸಂಖ್ಯಯಲ್ಲಿ ಇರುತ್ತಾರೆ. ಸ್ವಾಮಿ ವಿವೇಕಾನಂದರ ಆಚಾರ ವಿಚಾರ ಮತ್ತು ಅವರು ಬೆಳೆದು ಬಂದ ದಾರಿ ಅವರು ದೇಶಕ್ಕಾಗಿ ಮಾಡಿದ ಕೊಡುಗೆಯನ್ನು ನೆನಪಿಸಿ ಎಲ್ಲ ಯುವಕರ ಸ್ವಾಮಿ ವಿಕಾನಂದರಂತೆ ಆಗಿ ನಮ್ಮ ದೇಶವನ್ನು ಇಡೀ ಪ್ರಪಂಚದಲ್ಲಿನೆ ಮಾದರಿ ದೇಶ ಮಾಡಬೇಕಾದ ಜವಾಬ್ದಾರಿ ಯುವಕರ ಮೇಲಿದೆ ಎಂದರು.
ದೇಶವನ್ನು ಬೆಳೆಸುವಲ್ಲಿ ಯುವಕರು ಕೂಡ ಬಾಗಿ ಆಗಿ ಇದರ ಜೊತೆ ನಮ್ಮ ದೇಶದ ಆಚಾರ ವಿಚಾರ ಸಂಸ್ಕೃತಿಯನ್ನು ಉಳಿಸಿ ಬೆಳಸುವಲ್ಲಿ ನಿಮ್ಮ ಪಾತ್ರ ಅವಶ್ಯಕವಾಗಿದ್ದು ಎಂದು ಹೇಳಿದರು.
5 ವಿಷಯಗಳ ಮೇಲೆ ನುರಿತ ಮತ್ತು ಅನುಭವಿಕರು ಮತ್ತು ಉದ್ಯಮಿಗಳು ಬಂದು ಉಪನ್ಯಾಸವನ್ನು ನೀಡಿ ವಿದ್ಯಾರ್ಥಿಗಳಿಂದ ಅನಿಸಿಕೆಗಳನ್ನು ಪಡೆದುಕೊಂಡು ಎಲ್ಲ ವಿದ್ಯಾರ್ಥಿಗಳಿಗೂ ಪ್ರಶಸ್ತಿ ಪ್ರದಾನ ಮಾಡಿದರು.
ಯಂಗ್ ಇಂಡಿಯಾದ ಸದಸ್ಯರು ಅಗ್ರೆಟೆಕ್‌ನ ಭವಿಷ್ಯ ಕುರಿತು ಅಭಿಷೇಕ್ ಮಾಂಡೆ, ಉತ್ಪಾದನೆಯಲ್ಲಿ ತಂತ್ರಜ್ಞಾನದ ಭವಿಷ್ಯ ಕುರಿತು ಗುರುರಾಜ್ ವಾಸನ್, ಸುಸ್ಥಿರತೆಗಾಗಿ ಜೀವನಶೈಲಿಯ ಭವಿಷ್ಯ ಕುರಿತು ಸ್ಪೂರ್ತಿ ಕಬ್ಬೂರು, ಶಿಕ್ಷಣದ ಭವಿಷ್ಯ ಕುರಿತು ನಾಗರಾಜ್ ಕೊಟಗಿ ಮತ್ತು ಉಜ್ವಲ್ ಸಿಂಘಿ, ಡಿಜಿಟಲ್ ಆರ್ಥಿಕತೆಯ ಭವಿಷ್ಯ ಕುರಿತು ಚಿರಾಗ್ ಕಟಾರಿಯಾ ಉಪನ್ಯಾಸವನ್ನು ನೀಡಿದರು. ಮತ್ತು ಕಾರ್ಯಕ್ರಮದಲ್ಲಿ ಯಂಗ್ ಇಂಡಿಯಾದ ಸದಸ್ಯರಾದ ಮತ್ತು ಸಂಯೋಜಕರಾದ ಡಾ ನಾಗರಾಜ್ ನಾಯ್ಕ್ ಮತ್ತು ಮೊದಲದವರು ಭಾಗವಹಿಸಿದ್ದರು.
ಕಾಲೇಜಿನ ಪ್ರಾಚಾರ್ಯ ಡಾ.ಮಹಾಂತೇಶ್ ಹಿರೇಮಠ, ಡಾ.ಸರೋಜಿನಿ ದೇಸಾಯಿ, ಡಾ.ಕಿರಣ್ ಸಾನಿಕೋಪ, ನವೀನ ಕರೆರ್, ಡಾ.ವಾಸಿಮ್ ಅಕ್ರಮ್, ಹಲವಾರು ಉಪನ್ಯಾಸಕರು ಮತ್ತು ಎಲ್ಲ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಐಶ್ವರ್ಯ ಅತಿಥಿಗಳ ಪರಿಚಯ ಮಾಡಿದರು.