ಆ.13ರಂದು ಮರಾಠಾ ವಿದ್ಯಾ ಪ್ರಸಾರಕ ಮಂಡಳದ ತ್ರೈವಾರ್ಷಿಕ ಚುನಾವಣೆ
ಧಾರವಾಡ: ಇಲ್ಲಿನ ಮರಾಠಾ ಸಮಾಜದ ಪ್ರತಿಷ್ಠಿತ ಮರಾಠಾ ವಿದ್ಯಾ ಪ್ರಸಾರಕ ಮಂಡಳದ ಸನ್ 2023-26ರ ಸಾಲಿನ ನೂತನ ಆಡಳಿತ ಮಂಡಳಿಗೆ ತ್ರೈವಾರ್ಷಿಕ ಚುನಾವಣೆ ಇದೇ ದಿ.13 ರಂದು ಜರುಗಲಿದ್ದು, ಮಂಡಳದ ಅಧಿಕಾರದ ಚುಕ್ಕಾಣಿ ಹಿಡಿಯಲು ತೀವ್ರ ಪೈಪೋಟಿ ಏರ್ಪಟ್ಟಿದೆ.
ಮನೋಹರ ಮೋರೆ ನೇತೃತ್ವದ ಹಾಲಿ ಆಡಳಿತ ಮಂಡಳಿಯ ಬಣ ಈ ಬಾರಿಯೂ ಕಣಕ್ಕಿಳಿದಿದೆ. ಕಳೆದ ಚುನಾವಣೆಯಲ್ಲಿ ಮನೋಹರ ಮೋರೆ, ಪ್ರತಾಪ ಚವ್ಹಾಣ, ಉದಯ ಲಾಡ್, ಮಂಜು ಕದಂ ಸೇರಿದಂತೆ ಒಟ್ಟು ನಾಲ್ಕು ಬಣಗಳು ಸ್ಪರ್ಧಿಸಿದ್ದವು. ಆದರೆ, ಮನೋಹರ ಮೋರೆ ಗುಂಪಿಗೆ ಸಮಾಕದ ಜನರ ಮನ್ನಣೆ ದೊರೆತಿತ್ತು.
ಮರಾಠಾ ಸಮಾಜದ ಜನರಿಗೆ ಒಂದು ಪ್ರಾತಿನಿಧಿಕ ಸಂಸ್ಥೆ ಇರಬೇಕು. ಅಲ್ಲದೇ ಮರಾಠಾ ಮಾತ್ರವಲ್ಲದೇ ಇತರ ಸಮಾಜ ಬಾಂಧವರಿಗೂ ಉತ್ತಮ ಶಿಕ್ಷಣ ಸಿಗಬೇಕು ಎಂಬ ಉದ್ದೇಶದಿಂದ ಸಮಾಜದ ಹಿರಿಯರು 1893ರಲ್ಲಿ ಮರಾಠಾ ವಿದ್ಯಾ ಪ್ರಸಾರಕ ಮಂಡಳಿಯನ್ನು ಸ್ಥಾಪಿಸಿದರು. ಮಂಡಳಿಗೆ ನಗರದ ಹೃದಯ ಭಾಗದಲ್ಲಿ ಅಪಾರ ಪ್ರಮಾಣದ ಆಸ್ತಿ ಇದೆ. ವಾಣಿಜ್ಯ ಸಂಕೀರ್ಣಗಳು ಹಾಗೂ ಮಂಡಳಿಯ ಅಧೀನದಲ್ಲಿ ಹಲವಾರು ಶಾಲಾ-ಕಾಲೇಜುಗಳು ಸಹ ಇವೆ. ಹೀಗಾಗಿ ಮಂಡಳಿಯ ಗದ್ದುಗೆ ಹಿಡಿಯುವುದು ಪ್ರತಿಷ್ಠಿತ ವಿಷಯವಾಗಿ ಪರಿಣಮಿಸಿದೆ.
ಮನೋಹರ ಮೋರೆ ಗುಂಪಿನಿಂದ ಸಮಾಜದ ಸಾಧಕರಿಗೆ ಪ್ರೋತ್ಸಾಹ, ಪ್ರತಿಭಾವಂತ ಮಕ್ಕಳಿಗೆ ಪ್ರೋತ್ಸಾಹ, ಶಾಲಾ-ಕಾಲೇಜುಗಳ ಸಿಬ್ಬಂದಿಗೆ ಸಕಲ ಸೌಲಭ್ಯ, ಮಹಾವಿದ್ಯಾಲಯಕ್ಕೆ ಸುಸಜ್ಜಿತ ಕಟ್ಟಡ, ಅಡಳಿತ ಭವನ ನಿರ್ಮಾಣ, ತುಳಜಾಭವಾನಿ ದೇವಸ್ಥಾನ ಜೀರ್ಣೋದ್ಧಾರ, ಹಳೆಯ ಕಟ್ಟಡಗಳ ಸುಧಾರಣೆ ಹಲವರು ಅಬಿವೃದ್ಧಿ ಕಾರ್ಯಗಳು ನಡೆದಿದೆ. ಮುಂಬರುವ ದಿನಗಳಲ್ಲಿಯೂ ಅನೇಕ ಅಭಿವೃದ್ಧಿ ಮತ್ತು ಸಮಾಜಮುಖಿ ಕಾರ್ಯ-ಯೋಜನೆಗಳನ್ನು ಅನುಷ್ಠಾನಗೊಳಿಸಲು ಮನೋಹರ ಮೋರೆಯವರ ಗುಂಪು ತೀರ್ಮಾನಿಸಿದ್ದು, ಈ ಬಾರಿಯೂ ಮಂಡಳಿಯ ಅಧಿಕಾರ ಸಿಗಲಿದೆ ಎಂಬ ವಿಶ್ವಾಸದಲ್ಲಿದ್ದಾರೆ. ಇತ್ತ ಸಮಾಜದವರು ಕೂಡ ಮೋರೆ ಗುಂಪಿನ ಬೆಂಬಲಕ್ಕೆ ನಿಲ್ಲುವ ಸಾಧ್ಯತೆ ಹೆಚ್ಚಿದೆ.
ಮನೋಹರ ಬಣ
ಉಪಾಧ್ಯಕ್ಷ ಸ್ಥಾನಕ್ಕೆ ಯಲ್ಲಪ್ಪ ಚವ್ಹಾಣ, ಮತ್ತು ನಿರ್ದೇಶಕ ಸ್ಥಾನಗಳಿಗೆ ಈಶ್ವರ ಬಾಬು ಪಾಟೀಲ, ಶಿವಾಜಿ ಸೂರ್ಯವಂಶಿ, ಸುಭಾಸ ಪವಾರ, ರಾಜು ಬಿರ್ಜೆನವರ, ಸುಭಾಸ ಶಿಂಧೆ, ದತ್ತಾತ್ರೇಯ ಮೋಟೆ, ಅನಿಲ ಭೋಸಲೆ, ಮಹೇಶ ಶಿಂಧೆ, ಪುರುಷೋತ್ತಮ ಜಾಧವ, ರಾಜು ಉರ್ಫ ಮಹದೇವ ಕಾಳೆ, ಸುನೀಲ ಮೋರೆ ಮತ್ತು ಪ್ರಸಾದ ಹಂಗಳಕಿ ಇದ್ದಾರೆ.