ಮುಮ್ಮಿಗಟ್ಟಿಯಲ್ಲಿ ಮಹಿಳೆ ನೇಣಿಗೆ ಶರಣು
ಮಾದನಭಾವಿ ಗ್ರಾಮದಲ್ಲಿ ವಿಷಸೇವಿಸಿ ರೈತ ಆತ್ಮಹತ್ಯೆ
ಧಾರವಾಡ : ಜೀವನದಲ್ಲಿ ಜಿಗುಪ್ಸೆಗೊಂಡ ಮಹಿಳೆಯೊಬ್ಬಳು ನೇಣಿಗೆ ಶರಣಾದ ಪ್ರಕರಣ ತಾಲೂಕಿನ ಮುಮ್ಮಿಗಟ್ಟಿಯಲ್ಲಿ ಬುಧವಾರ ನಡೆದಿದೆ.
ಗ್ರಾಮದ ಶೃತಿ ಅಶೋಕ ಅಂಗಡಿ (25) ಆತ್ಮಹತ್ಯೆ ಮಾಡಿಕೊಂಡ ಮಹಿಳೆ.
ಪತಿಯಿಂದ ದೂರ ಇದ್ದ ಸೃತಿ, ಜೀವನದಲ್ಲಿ ಜಿಗುಪ್ಸೆ ಹೊಂದಿದ್ದಳು. ನಿನ್ನೆ ಮನೆಯಲ್ಲಿ ನೇಣಿಗೆ ಶರಣಾಗಿದ್ದಾಳೆ.
ಗರಗ ಠಾಣೆಯ ಪಿಎಸ್ಐ ಎಫ್.ಎಂ. ಮಂಟೂರ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಾದನಭಾವಿ ಗ್ರಾಮದಲ್ಲಿ ವಿಷಸೇವಿಸಿ ರೈತ ಆತ್ಮಹತ್ಯೆ
ಧಾರವಾಡ: ಕೃಷಿ ಸಾಲ ತೀರಿಸಲಾಗದ ರೈತನೋರ್ವ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ತಾಲೂಕಿನ ಮಾದನಭಾವಿ ಗ್ರಾಮದ ಯಲ್ಲಪ್ಪ ಮಹಾದೇವ ಆಡೀನ್ (67) ಎಂಬಾತನೇ ಆತ್ಮಹತ್ಯೆ ಮಾಡಿಕೊಂಡ ರೈತನಾಗಿದ್ದಾನೆ.
ಕೃಷಿ ಸಾಲ ಮತ್ತು ಟ್ರ್ಯಾಕ್ಟರ್ ಖರೀದಿಗೆ ಬ್ಯಾಂಕಿನಲ್ಲಿ ಸುಮಾರು ಏಳು ಲಕ್ಷ ರೂಪಾಯಿ ಸಾಲ ಮಾಡಿದ್ದನು. ಸಾಲ ತೀರಿಸಲಾರದ ಅಸಹಾಯಕತೆಯಿಂದ ಬೇಸತ್ತು ಕಳೆದ ದಿ.೧೧ ರಂದು ವಿಷ ಸೇವಿಸಿದ್ದನು. ತೀವ್ರ ಅಸ್ವಸ್ಥನಾಗಿದ್ದ ಯಲ್ಲಪ್ಪನನ್ನು ಕಿಮ್ಸ್ ಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ನಿನ್ನೆ ರಾತ್ರಿ ಕೊನೆಯುಸಿರೆಳೆದಿದ್ದಾನೆ. ಗರಗ ಠಾಣೆಯ ಪಿಎಸ್ ಐ ಎಫ್.ಎಂ. ಮಂಟೂರ ಪ್ರಕರಣ ದಾಖಲಿಸಿಕೊಂಡಿದ್ದಾರೆ.