ಹುಬ್ಬಳ್ಳಿ-ಧಾರವಾಡ ಸುದ್ದಿ

ಶಿವಾಜಿ ಮೂರ್ತಿ ತೆರವು: ಅವಳಿನಗರದಲ್ಲಿ ಪ್ರತಿಭಟನೆ

ಅದೇ ಸ್ಥಳದಲ್ಲಿ ಪ್ರತಿಷ್ಠಾಪನೆಗೆ ಪಟ್ಟು

ಹುಬ್ಬಳ್ಳಿ: ಮರಾಠಾ ಸಮಾಜದ ಮರಾಠಾ ಶ್ರೀ ಭಾರತಿ ಮಠ ಟ್ರಸ್ಟ ಸಮಿತಿಯ ಆಶ್ರಯದಲ್ಲಿ ಇತ್ತೀಚಿಗೆ ಬಾಗಲಕೋಟೆಯಲ್ಲಿ ನಡೆದ ಛತ್ರಪತಿ ಶ್ರೀಶಿವಾಜಿ ಮಹಾರಾಜರ ಪ್ರತಿಮೆ ತೆರವುಗೊಳಿಸಿದ್ದನ್ನು ಖಂಡಿಸಿ ಹುಬ್ಬಳ್ಳಿ ಮತ್ತು ಧಾರವಾಡದಲ್ಲಿಂದು ಮರಾಠಾ ಬಾಂಧವರು ಇಂದು ಪ್ರತಿಭಟನೆ ನಡೆಸಿದರು.
ಹುಬ್ಬಳ್ಳಿಯಲ್ಲಿ ಶಿವಾಜಿ ಮಹಾರಾಜರ ಉದ್ಯಾನವನದಿಂದ ಪ್ರಾರಂಭವಾಗಿ ಸರ್ ಸಿದ್ದಪ್ಪ ಕಂಬಳಿ ರಸ್ತೆ ಮುಖಾಂತರ ತಹಶೀಲ್ದಾರ್ ಕಾರ್ಯಾಲಯಕ್ಕೆ ತೆರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹಾಗೂ ಬಾಗಲಕೋಟೆ ಜಿಲ್ಲಾಧಿಕಾರಿಗೆ ಮನವಿ ರವಾನಿಸಲಾಯಿತು.


ಮರಾಠಾ ಸಮಾಜದ ಅಧ್ಯಕ್ಷರಾದ ಸುನಿಲ ದಳವಿ, ಪ್ರಧಾನ ಕಾರ್ಯದರ್ಶಿ ನಾರಾಯಣ ವೈದ್ಯ ,ಮಹೇಶ್ ಡಾಬಡೆ. ದಲಿತ ಮುಖಂಡರಾದ ಗುರುನಾಥ ಉಳ್ಳಿಕಾಶಿ ಮುಂತಾದವರು ಬಾಗಲಕೋಟೆಯಲ್ಲಿ ಇತ್ತಿಚೆಗೆ ಛತ್ರಪತಿ ಶ್ರೀ ಶಿವಾಜಿ ಮಹಾರಾಜರ ಪುತ್ಥಳಿಯನ್ನು ತೆರವುಗೊಳಿಸಿದ್ದನ್ನು ಸಮಾಜವು ಖಂಡಿಸುತ್ತದೆ. ಈಗಾಗಲೆ ೧೬ ಅಡಿ ಎತ್ತರದ ಛತ್ರಪತಿ ಶ್ರೀ ಶಿವಾಜಿ ಮಹಾರಾಜರ ಕಂಚಿನ ಪುತ್ಥಳಿಯು ತಯಾರಾಗಿದ್ದು ಈ ಪುತ್ಥಳಿಯನ್ನು ತೆರವುಗೊಳಿಸಿದ ಸ್ಥಳದಲ್ಲಿ ಮರು ಪ್ರತಿಸ್ಥಾಪಿಸಬೇಕೆಂದು ಆಗ್ರಹಿಸಿದರು.
ಸಮಾಜದ ಮುಖಂಡರಾದ ಅರುಣ್ ಶಿರ್ಕೆ, ದಯಾನಂದ್ ಚೌಹಾಣ್, ರಾಮ್ ಜಾಧವ್. . ಮಹೇಂದ್ರ ಚೌಹಾಣ, ಪರಶುರಾಮ ತಹಶೀಲ್ದಾರ, ಶಿವಾಜಿ ವೈದ್ಯ ,ಬಸವರಾಜ್ ಹುಬಳ್ಳಿ, ಶಶಿಕಾಂತ್ ಗಾಯಕ್ವಾಡ್,ಶೈಲೇಶ ಹೊನ್ನಳ್ಳಿ. ಮಂಜುನಾಥ್ ಮರಾಠೆ, ಶಾಮರಾವ್ ಸಿಂಧೆ, ಗುಡರಾಜ್ ಕಾಟೇನವರ, ರಾಮಚಂದ್ರ ಗಾಯಕ್ವಾಡ್, ಅರುಣ ಗುಳೆ., ಪದ್ಮಾವತಿ ಮರಾಠೆ, ಅಶೋಕ್ ನಿಕ್ಕ. ಮಂಜುನಾಥ್ ಚಾಂದ್ ಗುಡೆ. ಸುರೇಶ್ ನಲ್ವಡೆ. ದಶರಥ್ ಕುರಡೆ. ನಾಗರಾಜ್ ಮರಾಠೆ. ಪ್ರಕಾಶ್ ಪವಾರ್. ಕೃಷ್ಣ ಜಾದವ್. ಹಾಗೂ ಸದಸ್ಯರು ಅಭಿಮಾನಿಗಳು ಉಪಸ್ಥಿತರಿದ್ದರು.

ಧಾರವಾಡ ವರದಿ: ಮರಾಠಾ ವಿದ್ಯಾಪ್ರಗಾರಕ ಮಂಡಳ ಹಾಗೂ ಸಮಸ್ತ ಮರಾಠಾ ಸಮಾಜ ಬಾಂಧವರು ಧಾರವಾಡದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಅರ್ಪಿಸಿದರು. ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿಯನ್ನು ಸ್ಥಾಪಿಸಲು ಸರ್ವ ಸಮಾಜ ಬಾಂಧವರ ಸಮ್ಮತಿಯೊಂದಿಗೆ ನಿರ್ಧರಿಸಲಾಗಿದೆ. ರಾಜಕೀಯ ಪ್ರೇರಿತ ಕೆಲ ಪಟ್ಟಭದ್ರ ಹಿತಾಸಕ್ತಿ ವ್ಯಕ್ತಿಗಳು ಸಂಪೂರ್ಣ ಬಾಗಲಕೋಟೆ ಜಿಲ್ಲೆಯನ್ನು ಉದ್ರೇಕಗೊಳ್ಳಲು ಕಾರಣರಾಗಿದ್ದಾರೆ ಎಂದು ಸಮಾಜ ಬಾಂಧವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಸಮಾಜದ ಪ್ರಮುಖರಾದ ಟಿ.ಕೆ.ಪವಾರ, ಸಂಭಾಜಿ ಗೋಡಸೆ, ಸುಭಾಶ ಶಿಂಧೆ, ರಾಜು ಬಿರಜೇನವರ, ಯಲ್ಲಪ್ಪ ಚವ್ಹಾಣ, ಶಂಕರ ಶೆಳಕೆ, ಶಿವಾಜಿ ಘಾಟಗೆ, ದತ್ತಾ ಮೋರೆ, ಮಲ್ಲೇಶ ಶಿಂಧೆ, ಪುರಷೋತ್ತಮ ಜಾಧವ, ಕೇದಾರನಾಥ ಚವ್ಹಾಣ, ಮಹೇಶ ಶಿಂಧೆ, ವಿಠ್ಠಲ ಗೋಡಸೆ, ರಾಜು ಸೂರ್ಯವಂಶಿ ಇತರರಿದ್ದರು.

administrator

Related Articles

Leave a Reply

Your email address will not be published. Required fields are marked *