ಹುಬ್ಬಳ್ಳಿ-ಧಾರವಾಡ ಸುದ್ದಿ
ಸಧ್ಯಕ್ಕೆ ಕೈ ಹಿಡಿವ, ಲೋಕಸಭೆ ಸ್ಪರ್ಧೆ ವಿಚಾರವಿಲ್ಲ

ಸಧ್ಯಕ್ಕೆ ಕೈ ಹಿಡಿವ, ಲೋಕಸಭೆ ಸ್ಪರ್ಧೆ ವಿಚಾರವಿಲ್ಲ

ಜೋಶಿಯವರ ಮೇಲೆ ದೊಡ್ಡ ಜವಾಬ್ದಾರಿಯಿದೆ

ನನ್ನ ಬೆಳವಣಿಗೆಗೆ ಬಿಎಸ್‌ವೈ, ಶೆಟ್ಟರ್ ಕಾರಣ

ಹುಬ್ಬಳ್ಳಿ: ಸದ್ಯಕ್ಕಂತೂ ಕಾಂಗ್ರೆಸ್ ಹೋಗಬೇಕು ಅನ್ನೋದು ಹಾಗೂ ಅಲ್ಲದೇ ಲೋಕಸಭೆಗೆ ಸ್ಪರ್ಧಿಸಬೇಕು ಅನ್ನುವುದು ನನ್ನ ಮನಸ್ಸಿನಲ್ಲಿ ಇಲ್ಲ ಎಂದು ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಸ್ಪಷ್ಟಪಡಿಸಿದರು.
ತೀವ್ರ ಕುತೂಹಲ ಕೆರಳಿಸಿದ್ದ ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು ಇಷ್ಟರಲ್ಲೇ ಕೈ ಹಿಡಿಯಲಿದ್ದಾರೆಂಬ ಗುಸು ಗುಸುಗಳಿಗೆ ಅಲ್ಪವಿರಾಮ ಹಾಕಿದರಲ್ಲದೇ, ಕಾಂಗ್ರೆಸ್‌ನವರು ನನ್ನ ಮೇಲೆ ಪ್ರೀತಿಸಿ ತೋರಿಸುತ್ತಿದ್ದಾರೆ.ಆದರೆ ಮಲ್ಲಿಕಾರ್ಜುನ ಖರ್ಗೆಯವರಾಗಲಿ, ಸಿಎಂ ಸಿದ್ದರಾಮಯ್ಯ ಆಗಲಿ, ಡಿಸಿಎಂ ಡಿಕೆ ಶಿವಕುಮಾರ್ ಆಗಲಿ, ಶೆಟ್ಟರ್ ಆಗಲಿ,ಯಾರೂ ಕಾಂಗ್ರೆಸ್ ಪಕ್ಷಕ್ಕೆ ಕರೆದಿಲ್ಲ ಎಂದು ಹೇಳಿದರು.


ತಾವು ಏನೇ ಮಾಡಿದರೂ ಕಾರ್ಯಕರ್ತರ ಜೊತೆ ಚರ್ಚೆ ಮಾಡಬೇಕು ಎಂದ ಅವರು,ನನ್ನನ್ನು ಬಿಜೆಪಿಗೆ ಕರೆದುಕೊಂಡು ಬಂದವರು ಮಾಜಿ ಶಾಸಕರಾದ ಚಿಕ್ಕನಗೌಡರ್, ನಿಂಬಣ್ಣವರ್, ಜಗದೀಶ್ ಶೆಟ್ಟರ್ ಎಂದು ಹೇಳಿದರಲ್ಲದೇ ಜಿಲ್ಲೆಯಲ್ಲಿ ಅನೇಕರು ಪಕ್ಷ ಬಿಟ್ಟು ಹೋಗಿದ್ದಾರೆ. ಈ ಸಮಯದಲ್ಲಿ ನಾವು ಅನಂತ ಕುಮಾರ ನೆನೆಸಿಕೊಳ್ಳಬೇಕು. ಅವರು ನಮ್ಮೊಂದಿಗೆ ಇಲ್ಲ. ಶೆಟ್ಟರ್ ಸಹ ಪಕ್ಷದಲ್ಲಿ ಇಲ್ಲ.ಇವತ್ತು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಮೇಲೆ ದೊಡ್ಡ ಜವಾಬ್ದಾರಿ ಇದ್ದು ಇಂದು ಮುಂಜಾನೆ ನಾನು ಅವರ ಜೊತೆ ಮಾತಾಡಿದ್ದೇನೆಎಲ್ಲರನ್ನೂ ಒಂದಾಗಿ ಕರೆದುಕೊಂಡು ಹೋಗಬೇಕಿದೆ ಎಂದರು.


ಬಿಜೆಪಿ ನನಗೆ ಎಲ್ಲವನ್ನೂ ಕೊಟ್ಟಿದೆ. ನಾನು ಪಕ್ಷ ಬಿಡುವುದಾಗಿ ಎಲ್ಲಿಯೂ ಹೇಳಿಲ್ಲ. ಆದರೆ ಹಿರಿಯರು ಪಕ್ಷ ಬಿಟ್ಟು ಹೋದ ಮೇಲೆ ಗೊಂದಲವಂತೂ ಇದೆ.
ಮನೆಗೊಬ್ಬರ ಹಿರಿಯರು ಬೇಕು ಎಂದು ಪುನರುಚ್ಚಿಸಿದರಲ್ಲದೇ,ಇತ್ತೀಚೆಗೆ ಗ್ರಾ.ಪಂ.ಅಧ್ಯಕ್ಷ, ಉಪಾಧ್ಯಕ್ಷರ ಸನ್ಮಾನಕ್ಕೆ ಕೆಲವರನ್ನೂ ಕರೆದೇ ಇಲ್ಲ ಎಂದು ಹೇಳಿದರು.
ಯಡಿಯೂರಪ್ಪ ಹಾಗೂ ಜಗದೀಶ್ ಶೆಟ್ಟರ್ ನಮ್ಮ ಬೆಳವಣಿಗೆಗೆ ಕಾರಣ. ಅನಂತಕುಮಾರ್ ಇರದೆ ಇರೋದೇ ಬಿಜೆಪಿಯಲ್ಲಿ ಸಮಸ್ಯೆ ಆಗಿದೆ. ಅವರು ಇರಲಾರದಕ್ಕೆ ಅನೇಕ ನಾಯಕರು ಪಕ್ಷ ಬಿಟ್ಟು ಹೋಗಿದ್ದಾರೆ. ನಾನು ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡೋದಾದರೆ ಮುಂದಿನ ಜನವರಿಯಲ್ಲಿ ತಿಳಿಸುವೆ ಎನ್ನುವ ಮೂಲಕ ತಮ್ಮ ನಡೆಯನ್ನು ಮುನೇನಕೊಪ್ಪ ಮತ್ತಷ್ಟು ಕುತೂಹಲಗೊಳಿಸಿದ್ದಾರೆ.

 

administrator

Related Articles

Leave a Reply

Your email address will not be published. Required fields are marked *