ಗಣೇಶೋತ್ಸವಕ್ಕೆ ಅನುಮತಿ ನೀಡಿ: ಸಿಎಂಗೆ ಬೆಲ್ಲದ ಪತ್ರ
ಮುನೇನಕೊಪ್ಪ-ಜೋಶಿಯವರದ್ದು ಹಳೆಯ ಬಾಂಧವ್ಯ
ಹುಬ್ಬಳ್ಳಿ: ಹುಬ್ಬಳ್ಳಿಯ ರಾಣಿ ಚೆನ್ನಮ್ಮ ಮೈದಾನದಲ್ಲಿ ಗಣೇಶ ಹಬ್ಬದ ಸಂದರ್ಭದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ನೀಡಬೇಕು ಎಂದು ಶಾಸಕ ಅರವಿಂದ ಬೆಲ್ಲದ ಅವರು ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದಾರೆ.
ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿ ಸಿಎಂಗೆ ಬರೆದ ಪತ್ರ ಬಿಡುಗಡೆ ಮಾಡಿದರಲ್ಲದೇ ಕಳೆದ ವರ್ಷ ಗಣೇಶ ಚತುರ್ಥಿ ನಿಮಿತ್ತ ಮೂರ್ತಿ ಪ್ರತಿಷ್ಠಾಪನೆ ಮಾಡಲು ಸರ್ಕಾರವು ಅನುಮತಿ ನೀಡಿತ್ತು. ಅದೇ ಮಾದರಿಯಲ್ಲಿ ಈ ವರ್ಷವೂ ಸಹ ಅನುಮತಿ ನೀಡಬೇಕು. ಈ ಮಧ್ಯೆ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತ ಕೆಲಸವನ್ನು ಸರ್ಕಾರ ಮಾಡುತ್ತಿರುವುದು ಖಂಡನೀಯ ಎಂದರು.
ಈ ಬಾರಿ ಮೂರ್ತಿ ಪ್ರತಿಷ್ಠಾಪನೆ ಮಾಡಿ ವಿಜೃಂಭಣೆಯಿಂದ ಆಚರಿಸಲು ಸಿದ್ದತೆ ಮಾಡಿಕೊಂಡಿದ್ದು ಪಾಲಿಕೆಗೆ ಮನವಿ ಕೂಡ ಮಾಡಲಾಗಿದೆ
ಸಿದ್ದರಾಮಯ್ಯ ಅವರ ಸರ್ಕಾರ ಅಲ್ಪಸಂಖ್ಯಾತ ತುಷ್ಟಿಕರಣ ಮಾಡುವುದಕ್ಕೆ ಅನುಮತಿ ಕೊಡ್ತಿಲ್ಲ ಎಂದು ಆರೋಪಿಸಿದರು.
ಈಗಾಗಲೇ ಸರ್ವೋಚ್ಛ ನ್ಯಾಯಾಲಯವು ಈ ಮೈದಾನವು ಮಹಾನಗರ ಪಾಲಿಕೆಗೆ ಸೇರಿದ್ದು. ಮೈದಾನವನ್ನುಸಾರ್ವಜನಿಕರ ಉಪಯೋಗಕ್ಕೆ ಬಳಸಬಹುದು ಎಂದಿದೆಯಲ್ಲದೇ ಈದ್ಗಾ ಮೈದಾನದಲ್ಲಿ ರಮಜಾನ ಹಬ್ಬದ ಸಂದರ್ಭದಲ್ಲಿ ಮುಸ್ಲಿಂರಿಗೆ ನಮಾಜ್ ಮಾಡಲು ಅವಕಾಶ ನೀಡಲಾಗುತ್ತಿದೆ. ಗಣೇಶ ಚತುರ್ಥಿ ಹಬ್ಬದ ಅಂಗವಾಗಿ ಮೂರ್ತಿ ಪ್ರತಿಷ್ಠಾಪನೆಗಾಗಿ ಅನುಮತಿ ನೀಡದೇ ಹಠ ಸಾಧಿಸಲಾಗುತ್ತಿದೆ. ಮೂರ್ತಿ ಪ್ರತಿಷ್ಠಾಪಿಸಲು ಅನುಮತಿ ನೀಡದಿದ್ದಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ವ್ಯಾಪ್ತಿಯಲ್ಲಿ ಅಶಾಂತಿ ಉಂಟಾದರೆ ಸರ್ಕಾರವೇ ಹೊಣೆ ಹೊರಬೇಕಾಗುತ್ತದೆ ಎಂದೂ ಪತ್ರದಲ್ಲಿ ಹೇಳಿದ್ದು ಹಿಂದೂ ಧಾರ್ಮಿಕ ಭಾವನೆಗಳ ಜೊತೆಗೆ ಚೆಲ್ಲಾಟವಾಡದೆ ಭಾವೈಕ್ಯತೆಯ ಪ್ರತೀಕವಾದ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ನೀಡಲು ಒತ್ತಾಯಿಸಿದರು.
ಚೆನ್ನಮ್ಮ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಅನುಮತಿಗೆ ತಡ ಮಾಡಬೇಡಿ ಎಂದು ಹೇಳಿದ ಅವರು, ನೀವು ಅನುಮತಿ ಕೊಟ್ರು, ಕೊಡದೆ ಇದ್ದರೂ ಪ್ರತಿಷ್ಠಾಪನೆ ಮಾಡೋದು ಖಚಿತ ಅನುಮತಿ ನೀಡದೆ ಗಣಪತಿ ಹಾಗೂ ಭಕ್ತರ ಸಿಟ್ಟಿಗೆ ಕಾರಣ ಆಗಬೇಡಿ ಒಂದು ತಿಂಗಳ ಹಿಂದೆ ಡಿಸಿ ಪತ್ರ ಬರೆದಿದ್ದಾರೆ. ಆದರೆ ಇದುವರೆಗೂ ಕೊಟ್ಟಿಲ್ಲ ಇದು ಪಾಲಿಕೆ ಸ್ಥಳ, ಸರ್ಕಾರದ ಹಸ್ತಕ್ಷೇಪ ಇರೋದಿಲ್ಲ ಎಂದರು.
ಸರ್ಕಾರ ನಡೆಸಿದಂತೆ ಅಧಿಕಾರಿಗಳು ನಡೆದುಕೊಳ್ಳುತ್ತಾರೆ. ನಾವು ಜನಪ್ರತಿನಿದಿನಗಳು ಜನರ ಭಾವನೆ ಸರ್ಕಾರಕ್ಕೆ ಮುಟ್ಟಿಸುವುದು ನಮ್ಮ ಕೆಲಸ ಅಲ್ಪಸಂಖ್ಯಾತರನ್ನು ಓಲೈಸುವ ಸಲುವಾಗಿ ಸರ್ಕಾರ ಹೀಗೆ ಮಾಡ್ತಾ ಇದೆ ದೇಶ ವಿರೋಧಿ ಸಂಘಟನೆಗಳಿಗೆ ಕಾಂಗ್ರೆಸ್ ಸರ್ಕಾರ ಬಂದ ನಂತರ ಕೊಂಬು ಬಂದಿದೆ ಎಂದರು.
ಗೋಷ್ಠಿಯಲ್ಲಿ ಶಾಸಕ ಎಂ.ಆರ್.ಪಾಟೀಲ, ಪಾಲಿಕೆ ಸಭಾ ನಾಯಕ ಶಿವು ಹಿರೇಮಠ, ಮಹಾನಗರ ಅಧ್ಯಕ್ಷ ಸಂಜಯ ಕಪಟಕರ, ಸೆಂಟ್ರಲ್ ಅಧ್ಯಕ್ಷ ಸಂತೋಷ ಚವ್ಹಾಣ, ಪೂರ್ವ ಅಧ್ಯಕ್ಷ ಪ್ರಭು ನವಲಗುಂದಮಠ, ದತ್ತಮೂರ್ತಿ ಕುಲಕರ್ಣಿ ಇದ್ದರು.
ಮುನೇನಕೊಪ್ಪ-ಜೋಶಿಯವರದ್ದು ಹಳೆಯ ಬಾಂಧವ್ಯ
ಹುಬ್ಬಳ್ಳಿ : ಹಿಂದೆ ಬಿಜೆಪಿ ಸರ್ಕಾರದಲ್ಲಿ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗ ನಿಗಮ ಮಂಡಳಿಯ ಸುಮಾರು ೭೮ ಸ್ಥಾನಗಳು ಒಂದೇ ಕ್ಷೇತ್ರಕ್ಕೆ ಹೋದ ವಿಚಾರದ ಬಗ್ಗೆ ಕೇಳಿದಾಗ ಮುಖ್ಯಮಂತ್ರಿ ಇದ್ದ ಕ್ಷೇತ್ರದಲ್ಲೇ ಹೆಚ್ಚಿನ ಒತ್ತು ಕೊಡೋದು ಸಾಮಾನ್ಯ ಎಂದು ಬೆಲ್ಲದ ಹೇಳಿದರು.
ಮಾಜಿ ಸಚಿವ ಮುನೇನಕೊಪ್ಪ ಅವರು ಕೇಂದ್ರ ಸಚಿವ ಜೋಶಿಯವರ ಮೇಲೆ ಅಸಮಾಧಾನಗೊಂಡಿರುವ ವಿಚಾರ ಕೇಳಿದಾಗ ಅವರಿಬ್ಬರದ್ದೂ ಹಳೆಯ ಬಾಂಧವ್ಯ. ಹಾಗಾಗಿ ಸ್ವಲ್ಪ ಅಸಮಾಧಾನ ಅನಿಸಿರಬಹುದು ಅಷ್ಟೆ ಎಂದರಲ್ಲದೇ ಜಗದೀಶ್ ಶೆಟ್ಟರ್ ಅವರದ್ದು ಬೇರೆ ವಿಷಯ ಟಿಕೆಟ್ ಸಿಗದಿದ್ದಕ್ಕೆ ಅಸಮಾಧಾನ ಆಗಿ ಹೋದವರು. ಯುವಕರಿಗೆ ಕೊಡುವ ನಿಟ್ಟಿನಲ್ಲಿ ಮಹೇಶ್ ಟೆಂಗಿನಕಾಯಿ ಅವರಿಗೆ ಟಿಕೆಟ್ ನೀಡಲಾಯಿತು ಎಂದರು.
ವಿಪಕ್ಷ ನಾಯಕನ ಆಯ್ಕೆ ಮಾಡದಿರುವ ಬಗ್ಗೆ ಅಧಿವೇಶನದಲ್ಲಿ ನಾವು ಸಮರ್ಪಕವಾಗಿ ಸಾಮೂಹಿಕ ನಾಯಕತ್ವದಲ್ಲಿ ಪ್ರಶ್ನೆ ಮಾಡಿದ್ವಿ ನೇಮಕ ಮಾಡುವುದು ಪಕ್ಷ ನಿರ್ಧಾರಕ್ಕೆ ಬಿಟ್ಟಿದ್ದು ಎಂದರು.
ಸಿಎಂ ಮೇಲೆ ಬಿ ಕೆ ಹರಿಪ್ರಸಾದ್ ಅಸಮಾಧಾನ ವಿಚಾರ ಕೇಳಿದಾಗ ಬೇರೆ ಕಡೆಯಿಂದ ಬಂದು ಮುಖ್ಯಮಂತ್ರಿಯಾದ ಸಿದ್ದರಾಮಯ್ಯ, ಮೂಲ ಕಾಂಗ್ರೆಸಿಗರಿಗೆ ಅಸಮಾಧಾನ ಇದೆ ಎಂದರು. ಗ್ಯಾರಂಟಿ ಬಗ್ಗೆ ಕೇಳಿದಾಗ ಕಾಂಗ್ರೆಸ್ ಅವರು ಲೋಕಸಭಾ ಚುನಾವಣೆವರೆಗೆ ಮೂಗಿಗೆ ಬೆಣ್ಣೆ ಹಚ್ಚುವ ಕೆಲಸ ಮಾಡುತ್ತಿದೆ ಎಂದರು.