14 ವರ್ಷದೊಳಗಿನ ಕೆಎಸ್ಸಿಎ ಧಾರವಾಡ ವಲಯದ ಇಂಟರ್ ಕ್ಲಬ್ ಪಂದ್ಯಾವಳಿ
ರಿಹಾನ್ ತಮಾಟಗಾರ ಮಾರಕ ಬೌಲಿಂಗ್ , 8 ವಿಕೆಟ್ ಕಬಳಿಸಿದ ಹರ್ಷಿತಗೌಡ ತೊಟದ
ಹುಬ್ಬಳ್ಳಿ: ರಿಹಾನ್ ತಮಟಗಾರ 8-5-15-5, ಸಾಗರ ಕಮ್ಮಾರ 7.1-2-11-2 ಅವರ ಮಾರಕ ಬೌಲಿಂಗ್ನಿAದ ಗದಗ ಸ್ಪೋಟ್ಸ್ ಅಕಾಡೆಮಿ ವಿರುದ್ಧ ಧಾರವಾಡದ ವಿಲಾಸ ಬೇಂದ್ರೆ ಕ್ರಿಕೆಟ್ ಅಕಾಡೆಮಿ 79 ರನ್ಗಳಿಂದ ಜಯಗಳಿಸಿತು.
ಇಲ್ಲಿಯ ರಾಜನಗರದ ಕೆಎಸ್ಸಿಎ ಮೈದಾನದಲ್ಲಿ ನಡೆದ ಈ ಸಾಲಿನ 14 ವರ್ಷದೊಳಗಿನ ಕೆಎಸ್ಸಿಎ ಧಾರವಾಡ ವಲಯದ ಇಂಟರ್ ಕ್ಲಬ್ ಪಂದ್ಯಾವಳಿಯಲ್ಲಿ ಟಾಸ್ ಗೆದ್ದು ಮೊದಲ ಬ್ಯಾಟಿಂಗ್ ಮಾಡಿದ ವಿಲಾಸ ಬೇಂದ್ರ ಕ್ರಿಕೆಟ್ ಅಕಾಡೆಮಿ ತಂಡ 38ಓವರನಲ್ಲಿ 9ವಿಕೆಟ್ ಕಳೆದುಕೊಂಡು 159ರನ್ ಗಳಿಸಿತು. ತಂಡದ ಪರ ಸಾಗರ ಕಮ್ಮಾರ 34(59ಎ, 3×4), ಜೀವನ ಹಾವರಗಿ, 37(57ಎ, 1×4), ಶಿವಪುತ್ರ ವಾಲಿ 21(47ಎ, 2 x4), ಡಿ.ಮಹಾದೇವಗೌಡ 18 (45ಎ, 1×4) ರನ್ ಗಳಿಸಿದರು.
ಜಾಹಿದ ಬಳ್ಳಾರಿ, ಅಬ್ಬಾಸಅಹ್ಮದ ಮುಲ್ಲಾ, ಸುಚೇತನ, ಯಶ್ ಜೈನ್, ಶಾದ ಬಿಕ್ಕಣ್ಣನವರ ತಲಾ ಒಂದು ವಿಕೆಟ್ ಪಡೆದುಕೊಂಡರು.
159ರನ್ ಗುರಿ ಬೆನ್ನು ಹತ್ತಿದ ಗದಗ ಸ್ಪೋಟ್ಸ್ ಅಕಾಡೆಮಿ 31.1ಓವರನಲ್ಲಿ 80ರನ್ ಗೆ ತನ್ನ ಎಲ್ಲ ವಿಕೆಟ್ ಕಳೆದುಕೊಂಡು ಸೋಲು ಅನುಭವಿಸಿತು. ತಂಡದ ಪರ ಸುಚೇತನ ಹಾರಮರ್ 32(66ಎ, 4×4) ಗಳಿಸಿದರು. ರಿಹಾನ್ ತಮಾಟಗಾರ 8-5-15-5, ಸಾಗರ ಕಮ್ಮಾರ 7.1-2-11-2 ವಿಕೆಟ್ ಪಡೆದರು.
8 ವಿಕೆಟ್ ಕಬಳಿಸಿದ ಹರ್ಷಿತಗೌಡ ತೊಟದ
ಹುಬ್ಬಳ್ಳಿ: ಹರ್ಷಿತಗೌಡ ತೊಟದ 5-1-8-8, ಭುವನ್ ಜೋಶಿ 4-0-4-2 ಅವರ ಮಾರಕ ಬೌಲಿಂಗ್ನಿAದ ತಾನಾಜಿ ಸ್ಪೋಟ್ಸ್ ಕ್ಲಬ್ ವಿರುದ್ಧ ತೇಜಲ ಶಿರಗುಪ್ಪಿ ಕ್ರಿಕೆಟ್ ಅಕಾಡೆಮಿ 9ವಿಕೆಟ್ ಗಳಿಂದ ಜಯಗಳಿಸಿತು.
ಇಲ್ಲಿಯ ರಾಜನಗರದ ಕೆಎಸ್ಸಿಎ ಮೈದಾನದಲ್ಲಿ ನಡೆದ ಈ ಸಾಲಿನ 14 ವರ್ಷದೊಳಗಿನ ಕೆಎಸ್ಸಿಎ ಧಾರವಾಡ ವಲಯದ ಇಂಟರ್ ಕ್ಲಬ್ ಪಂದ್ಯಾವಳಿಯಲ್ಲಿ ಮೊದಲ ಬ್ಯಾಟಿಂಗ್ ಮಾಡಿದ ತಾನಾಜಿ ಸ್ಪೋಟ್ಸ್ ಕ್ಲಬ್ 9ಓವರನಲ್ಲಿ 12ರನ್ಗಳಿಗೆ ತನ್ನ ಎಲ್ಲ ವಿಕೆಟ್ ಕಳೆದುಕೊಂಡಿತು. ಹರ್ಷಿತಗೌಡ ತೊಟದ 5-1-8-8, ಭುವನ್ ಜೋಶಿ 4-0-4-2 ವಿಕೆಟ್ ಪಡೆದರು.
ಈ ಅಲ್ಪ ಮೊತ್ತ ಬೆನ್ನು ಹತ್ತಿದ ತೇಜಲ ಶಿರಗುಪ್ಪಿ ಕ್ರಿಕೆಟ್ ಅಕಾಡೆಮಿ ತಂಡ 2.1 ಓವರನಲ್ಲಿ 1ವಿಕೆಟ್ ಕಳೆದುಕೊಂಡು 13ರನ್ ಗಳಿಸಿ ಜಯ ತಮ್ಮದಾಗಿಸಿಕೊಂಡರು. ತಂಡದ ಪರ ರುಹಾನ್ ಶೇಖ್ 7(7ಎ, 1 x4) ಗಳಿಸಿದರು.