ಹುಬ್ಬಳ್ಳಿ-ಧಾರವಾಡ ಸುದ್ದಿ

ಇಸ್ರೇಲ್‌, ಹಮಾಸ್‌ ಭಾರತಕ್ಕೊಂದು ಪಾಠ

ಇಸ್ರೇಲ್‌ ಮೇಲೆ ಪ್ಯಾಲೇಸ್ಟೇನಿನಿ ಹಮಾಸ್‌ ಉಗ್ರರು ದಾಳಿನಡೆಸಿ 24 ಗಂಟೆಗಳು ಕಳೆದಿವೆ,ನೂರಾರು ಜನರು ಎರಡೂ ಕಡೆ ಸಾವನ್ನಪ್ಪಿದ್ದಾರೆ. ನೂರಾರು ಅಮಾಯಕ ಜನರನ್ನು ಉಗ್ರರು ತಮ್ಮ ವಶದಲ್ಲಿ ಇಟ್ಟುಕೊಂಡಿದ್ದಾರೆ.ಸೆರೆ ಸಿಕ್ಕ ಸೈನಿಕರನ್ನು ಕೊಂದು ಅವರ ದೇಹದ ನಗ್ನ ಮೆರವಣಿಗೆ ನಡೆಸಿ ವಿಕೃತಿ ಮೆರೆದಿದ್ದಾರೆ.


ಹಾಗಾದರೆ ಯುದ್ದ ತಂತ್ರಜ್ಞಾನದಲ್ಲಿ ಮುಂದುವರೆದಿದ್ದ ಇಸ್ರೇಲ್‌ ಎಡವಿದೆಲ್ಲಿ,ಒಂದು ಉಗ್ರ ಸಂಘಟನೆಯ ಕೈಗೆ ಇಷ್ಟೊಂದು ಪ್ರಮಾಣದ ಆಯುಧಗಳು ಸಿಕ್ಕಿದ್ದೆಲ್ಲಿಂದ, ಇದರಲ್ಲಿ ಭಾರತಕ್ಕೇನು ಪಾಠ. ಇಸ್ರೇಲ್‌ ಸುತ್ತಲೂ ವೈರಿಗಳಿಂದ ಕೂಡಿರುವ ದೇಶ, ಹತ್ತು ಹಲವು ಯುದ್ದ ಕಂಡಿರುವ ಇಸ್ರೇಲ್‌ ಯಾವಾಗಲೂ ಮುನ್ನೆಚ್ಚರಿಕೆಯಿಂದಿ ಇರುತ್ತಿತ್ತು ಆದರೆ ನೆನ್ನೆ ಮಧ್ಯಾಹ್ನ ಇಸ್ರೇಲಿನಲ್ಲಿ ಸಾಮಾದ ದಿನವಾಗಿರಲಿಲ್ಲ. ಹಮಾಸ್‌ ಉಗ್ರರು ಹಾರಿಸಿದ 5000ಕ್ಕೂ ಹೆಚ್ಚು ರಾಕೇಟ್‌ಗಳು ಇಸ್ರೇಲ್‌ ಮೇಲೆ ಅಪ್ಪಳಿಸಲು ಪ್ರಾರಂಭಿಸಿದವು ಪ್ರಪಂಚದಲ್ಲೆ ಅಭೇದ್ಯ ಎಂದು ಪರಿಗಣಿಸಿರು ಇಸ್ರೇಲ್‌ ವಾಯು ರಕ್ಷಣಾ ವ್ಯವಸ್ಥೆ “ಐರನ್‌ ಡ್ರೋಮ್” ಈ ಪರಿ ಹೊಡೆತ ತಡೆಯದೇ ಕೈಚಲ್ಲಿ ಎಚ್ಚರಿಕೆ ಘಂಟೆ ಮೊಳಗಿಸಿ ಸುಮ್ಮನಾಯಿತು.


ಏನಿದು “ ಐರನ್‌ ಡೋಮ್‌”
“ಐರನ್ ಡೋಮ್” ಇದು ಒಂದು ಅಲ್ಪಶ್ರೇಣಿ ವಾಯು ರಕ್ಷಣಾ ವ್ಯವಸ್ಥೆಯಾಗಿದ್ದು ರಾಕೆಟ್ ದಾಳಿ, ಫಿರಂಗಿ ಶೆಲ್‌ಗಳ ದಾಳಿ ಮತ್ತು ಮಾನವರಹಿತ ವೈಮಾನಿಕ ವಾಹನಗಳನ್ನು (ಯುಎವಿ) ಅಲ್ಪಾವಧಿಯಲ್ಲಿ ಎದುರಿಸಲು ದೇಶದ ಹಲವಾರು ಭಾಗಗಳಲ್ಲಿಗಳಲ್ಲಿ ಇದರ ನಿಯೋಜನೆ ಇದೆ.
ಈ ವಾಯು ರಕ್ಷಣಾ ವ್ಯವಸ್ಥೆ ಸುಮಾರು 70 ಕಿ.ಮೀ ವ್ಯಾಪ್ತಿಯನ್ನು ಹೊಂದಿದ್ದು ಮೂರು ಪ್ರತ್ಯೇಕ ತಂತ್ರಜ್ಞಾನದ ಸಂಯೋಜನೆಯಾಗಿದೆ ಅವುಗಳೆಂದರೆ; ರಾಡಾರ್, ಯುದ್ಧ ನಿರ್ವಹಣೆ ಮತ್ತು ಶಸ್ತ್ರಾಸ್ತ್ರ ನಿಯಂತ್ರಣ ಮತ್ತು 20 ತಾಮಿರ್ ಕ್ಷಿಪಣಿಗಳನ್ನು ಹೊಂದಿದ್ದು ಅಭೇದ್ಯ ಎಂದು ಪರಿಗಣಿಸಲಾಗುತ್ತದೆ.
ಈ ವ್ಯವಸ್ಥೆಯು 2011 ರಿಂದ ಇಸ್ರೇಲ್ ಅನ್ನು ರಕ್ಷಿಸುತ್ತಿದ್ದು. 2006 ರ ಲೆಬನಾನ್ ಸಂಘರ್ಷದ ಸಮಯದಲ್ಲಿ, ಹಿಜ್ಬುಲ್ಲಾ ಉಗ್ರರು ಹಾರಿಸಿದ ಸಾವಿರಾರು ರಾಕೆಟ್‌ಗಳು ಹೈಫಾ ಸೇರಿದಂತೆ ಹಲವಾರು ಇಸ್ರೇಲ್‌ನ ಉತ್ತರ ಪ್ರದೇಶಗಳನನ್ನು ಜಖಂಗೊಳಿದ ನಂತರ ತನ್ನದೇ ಆದ ಸ್ವಂತ ತಂತ್ರಜ್ಞಾನದಲ್ಲಿ ಈ ವಾಯು ರಕ್ಷಣಾ ವ್ಯವಸ್ಥೆಯನ್ನು ಇಸ್ರೇಲ್‌ ಅಭಿವೃದ್ಧಿಪಡಿಸಿತು.

ಐರನ್‌ ಡೋಮ್‌ ತಪ್ಪಿದ್ದೆಲ್ಲಿ
ಹಮಾಸ್ ಈ ವ್ಯವಸ್ಥಯ ದೌರ್ಬಲ್ಯ ಕಂಡು ಹಿಡಿಯಲು ಶತಾಯಗತಾಯ ಯತ್ನಿಸುತ್ತಿತ್ತು, ಸಾಲ್ವೊ ರಾಕೆಟ್ ದಾಳಿಯಿಂದ (ಅಲ್ಪಾವಧಿಯಲ್ಲಿ ಅನೇಕ ರಾಕೆಟ್ ಗಳನ್ನು ಉಡಾಯಿಸಲಾಯಿತು) ಈ ಬಾರಿ ಃಮಾಸ್‌ ಯಶಸ್ವಿಯಾಗಿದ್ದಾರೆ. ಈ ಬಾರಿ ಕೇವಲ 20 ನಿಮಿಷಗಳಲ್ಲಿ 5,000 ಕ್ಕೂ ಹೆಚ್ಚು ರಾಕೆಟ್ ಗಳನ್ನು ಉಡಾವಣೆ ಮಾಡಲಾಗಿದೆ.
ಹಮಾಸ್‌ ಉಗ್ರರಿಗೆ ಈ ಪ್ರಮಾಣದ ಶಸ್ತ್ರಗಳು ದೋರಕಿದ್ದಾದರು ಎಲ್ಲಿಂದ.


ಇರಾನ್‌ ಸಿರಿಯಾಗಳು ಹಮಾಸ್‌ ಉಗ್ರರಿಗೆ ರಹಸ್ಯ ಮಾರ್ಗಗಳ ಮೂಲಕ ಶಸ್ತ್ರಗಳ ಪೂರೈಕೆದಾರರು,ಹಡಗಿನಿಂದ ಇರಾನ್‌ ಸಿರಿಯಾ ಮುಖಾಂತರ ಮುಚ್ಚಿದ ಕ್ಯಾಪ್ಸಲ್‌ಗಳಲ್ಲಿ ಈ ಶಸ್ತ್ರಾಸ್ತ್ರಗಳು ಪ್ಯಾಲೆಸ್ಟೇನ್‌ ತಲುಪುತ್ತವೆ.ಇದಲ್ಲದೇ ಇಸ್ರೇಲ್ನ ಪ್ರಬಲ ರಾಡಾರ್‌ಗಳ ಕೆಳಗಿನ ಸುರಂಗದಲ್ಲೂ ಪೂರೈಕೆ ನಡೆಯುತ್ತದೆ.ಈ ಸುರಂಗಳು ಈಜಿಪ್ಟ್‌ವರೆಗೂ ಹಬ್ಬಿದೆ.
ಹಮಾಸ್ ನ ಶಸ್ತ್ರಾಗಾರದಲ್ಲಿ ಫಜ್ರ್-3, ಫಜ್ರ್-5 ಮತ್ತು ಎಂ302 ರಾಕೆಟ್‌ಗಳು ಸೇರಿದಂತೆ ಹಲವಾರು ಇರಾನ್ ಮತ್ತು ಸಿರಿಯಾದ ಶಸ್ತ್ರಾಸ್ತ್ರಗಳಿವೆ.ಅದರಲ್ಲು ಈ ಬಾರಿ ಪ್ಯಾರಾಗ್ಲೈಡಿಂಗ್‌ ಡ್ರೋಣ್‌ ಬಳಸಿ ದಾಳಿ ನಡೆದಿದೆ.

ಈ ರಾಕೆಟ್ ಶಸ್ತ್ರಾಸ್ತ್ರಗಳು ಅತ್ಯಂತ ಪ್ರಮುಖ ಆಯುಧವಾಗಿದ್ದು ಉಗ್ರರಿಗೆ ಬಹಳ ಸಹಕಾರಿಯಾಗಿದೆ. ಈ ರಾಕೆಟ್ ಗಳು ಆರ್ಥಿಕ ಮತ್ತು ತಯಾರಿಸಲು ಸಂಕೀರ್ಣವಲ್ಲದವು, ದೂರದ ಇಸ್ರೇಲಿ ಸ್ಥಳಗಳ ಮೇಲೆ ದಾಳಿ ಮಾಡಲು ಹೆಚ್ಚು ಶಕ್ತಿ ನೀಡುತ್ತವೆ. 2014ರ ಗಾಝಾ ಯುದ್ಧವೊಂದರಲ್ಲೇ ಹಮಾಸ್ ಇಸ್ರೇಲ್ ಮೇಲೆ 4,500ಕ್ಕೂ ಹೆಚ್ಚು ರಾಕೆಟ್ ಗಳನ್ನು ಹಾರಿಸಿತ್ತು. ಆಗ ಐರನ್‌ ಡ್ರೋಮ್‌ ಹೆಚ್ಚು ಹಾನಿಯಾಗದಂತೆ ತಡೆದಿತ್ತು.

ಭಾರತಕ್ಕೇನು ಪಾಠ
ಇಸ್ರೇಲ್‌ನಷ್ಟು ತಂತ್ರರಜ್ಞಾನ ಹಾಗುಆಯುಧಗಳು ಭಾರತದಲ್ಲಿ ಇಲ್ಲ, ನಾವು ಸ್ವಂತಕ್ಕೆ ದೊಡ್ಡ ವಾಯು ರಕ್ಷಣಾ ವ್ಯವಸ್ಥೆಯನ್ನೇನು ಹೊಂದಿಲ್ಲ(ರಷ್ಯಾ ನಿರ್ಮಿತ ಎಸ್‌400 ಚೀನಾ ಗಡಿಯಲ್ಲಿ ನಿಯೋಜಿಸಲಾಗಿದೆ) ಒಂದು ವೇಳೆ ಭಾರತದ ಮೇಲೇನಾದರೂ ಈ ರೀತಿ ದಾಳಿ ನಡೆದರೆ ದೊಡ್ಡ ಅನಾಹುತ ತಪ್ಪಿದ್ದಲ್ಲ.
ಈಗಾಗಲೇ ಭಾರತದ ವಿರುದ್ದ ಪಾಕಿಸ್ಥಾನ ಅಪರೇಷನ್‌ ಗಿಬ್ಯಾಲ್ಟರ್‌ ಇದೇ ಮಾದರಿಯಲ್ಲಿತ್ತು.ಭಾರತ ಈ ಸಮಯದಲ್ಲಿ ಗುಪ್ತಚರ ವ್ಯವಸ್ಥ ಬಲಪಡಿಸುವುದೊಂದೆ ಇದಕ್ಕಿರುವ ಪರಿಹಾರ.

ವಿನಯ್‌ ಹೆಬ್ಬೂರು

administrator

Related Articles

Leave a Reply

Your email address will not be published. Required fields are marked *