ಹುಬ್ಬಳ್ಳಿ-ಧಾರವಾಡ ಸುದ್ದಿ
ಕಲಘಟಗಿ : ಹೆಚ್ಚುತ್ತಿರುವ ನಕಲಿ ವೈದ್ಯರ ಹಾವಳಿ

ಕಲಘಟಗಿ : ಹೆಚ್ಚುತ್ತಿರುವ ನಕಲಿ ವೈದ್ಯರ ಹಾವಳಿ

ಕಲಘಟಗಿ: ತಾಲೂಕಿನಲ್ಲಿ ಹಲವು ಸರ್ಕಾರಿ ವೈದ್ಯರುಗಳು ಯಾವುದೇ ಅಳಕು ಅಂಜಿಕೆ ಇಲ್ಲದೆ ತಮ್ಮದೇ ಆದ ಖಾಸಗಿ ಕ್ಲಿನಿಕ್‌ಗಳನ್ನು ಸ್ಥಾಪಿಸಿಕೊಂಡು ಆರೋಗ್ಯ ಸೇವೆಯನ್ನು ದುಡ್ಡು ಮಾಡುವ ವ್ಯಾಪಾರ ಎಂದು ತಿಳಿದುಕೊಂಡ ಪರಿಣಾಮ ತಾಲೂಕ ಸರ್ಕಾರಿ ಆಸ್ಪತ್ರೆ ಹಾಗೂ ಗ್ರಾಮೀಣ ಪ್ರದೇಶದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಬಡ ಮತ್ತು ಮಧ್ಯಮ ವರ್ಗದವರಿಗೆ ಆರೋಗ್ಯ ಸೇವೆಯನ್ನು ಮಾಡುವವರೇ ಸಿಗದಂತಾಗಿದ್ದು ಅದಕ್ಕಾಗಿ ಅನಿವಾರ್ಯವಾಗಿ ನಕಲಿ ವೈದ್ಯರುಗಳ ಬಾಗಿಲು ತಟ್ಟುವಂತಾಗಿದೆ.


ಕಲಘಟಗಿ ತಾಲೂಕಿನಲ್ಲಿನ ಸುಮಾರು ೮೫ ಗ್ರಾಮಗಳಲ್ಲಿ300ಕ್ಕೂ ಹೆಚ್ಚು ನಕಲಿ ವೈದ್ಯರ ಜಾಲವು ವಿಸ್ತರಣೆಯಾಗುತ್ತ ಹೊರಟಿದ್ದು ಇದನ್ನು ಕಂಡು ಕಾಣದಂತೆ ಸಂಬಂಧಿಸಿದ ಇಲಾಖೆಯ ಅಧಿಕಾರಿ ವರ್ಗದವರು ಮೌನವಾಗಿರುವುದು ಹಲವು ಸಂಶಯಗಳನ್ನು ಹುಟ್ಟು ಹಾಕಿದೆ.


ಈ ಮೊದಲು ವೈದ್ಯಕೀಯ ಪ್ರಮಾಣ ಪತ್ರಗಳನ್ನು ಹೊರರಾಜ್ಯಗಳಿಂದ ತರಿಸಿಕೊಳ್ಳುತ್ತಿದ್ದ ಈ ನಕಲಿ ವೈದ್ಯರು ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲೇ ಅಕ್ರಮ ಹಣವನ್ನು ನೀಡಿ ನಕಲಿ ವೈದ್ಯಕೀಯ ಸೇವೆಯನ್ನು ಆರಂಭಿಸಿ ನಿಜವಾದ ಸೇವೆಯನ್ನು ಮಾಡುವವರ ಹೆಸರನ್ನು ಹಾಳು ಮಾಡುತ್ತಿದ್ದಾರೆ. ತಾಲೂಕಿನಲ್ಲಿ ಬಡ ರೋಗಿಗಳನ್ನು ವಂಚಿಸುವ ನಕಲಿ ವೈದ್ಯರ ಜಾಲವು ವಿಸ್ತರಣೆ ಮಾತ್ರ ಅಲ್ಲ ಸುಮಾರು 20ಕ್ಕೂ ಹೆಚ್ಚು ನಕಲಿ ವೈದ್ಯರುಗಳು ಮೀಟರ್ ಬಡ್ಡಿ ದಂಧೆಯಲ್ಲಿಯೂ ತೊಡಗಿದ್ದಾರೆ ಎಂದು ಕೆಲವರು ದೂರುತ್ತಾರೆ.ಇನ್ನಾದರೂ ತಾಲೂಕಿನಲ್ಲಿ ನಕಲಿ ವೈದ್ಯರುಗಳ ಹಾವಳಿಗೆ ಕಡಿವಾಣ ಹಾಕಲು ಸಂಬಂಧಿಸಿದ ಆರೋಗ್ಯ ಇಲಾಖೆಯವರು ಮುಂದಾಗಲಿ ಎಂಬುದು ಜನತೆಯ ಆಗ್ರಹವಾಗಿದೆ.

 

administrator

Related Articles

Leave a Reply

Your email address will not be published. Required fields are marked *