ಧಾರವಾಡ: ನಗರದ ಹಾಗೂ ಹಾವೇರಿ ಜಿಲ್ಲೆ ರಾಣೇಬೆನ್ನೂರಿನ ಪ್ರಸಿದ್ಧ ರೆಡಿಮೇಡ್ ಬಟ್ಟೆ ಅಂಗಡಿಯಾಗಿರುವ ವೀರೇಂದ್ರ ಡ್ರೆಸ್ ಲ್ಯಾಂಡ್‌ನ ೩ನೇ ಶಾಖೆ ಇದೀಗ ಸಾಗರದಲ್ಲಿ ಆರಂಭವಾಗುತ್ತಿದ್ದು, ಅ.20ರಂದು ಬೆಳಿಗ್ಗೆ 10.15ಕ್ಕೆ ಸಾಗರದ ಬಿ.ಎಚ್. ರಸ್ತೆ, ಕೋರ್ಟ್ ಪಕ್ಕ, ಹಳೆಯ ಪ್ರೈವೇಟ್ ಬಸ್‌ಸ್ಟ್ಯಾಂಡ್ ಹತ್ತಿರ ಉದ್ಘಾಟನೆಗೊಳ್ಳಲಿದೆ.
ಮಳಿಗೆ ಆರಂಭದ ಅಂಗವಾಗಿ ಶ್ರೀ ಮಹಾಲಕ್ಷ್ಮೀ ಶ್ರೀ ಮಹಾಸರಸ್ವತಿ ಹಾಗೂ ಶ್ರೀ ಮಹಾಗಣಪತಿ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮೂಲೆಗದ್ದೆಯ ಸದಾನಂದ ಶಿವಯೋಗಾಶ್ರಮದ ಅಭಿನವ ಚನ್ನಬಸವ ಮಹಾಸ್ವಾಮೀಜಿ ಉದ್ಘಾಟಿಸುವರು.
ಮುಖ್ಯ ಅತಿಥಿಗಳಾಗಿ ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಆಗಮಿಸುವರು. ಅತಿಥಿಗಳಾಗಿ ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರ, ಉಪವಿಭಾಗಾಧಿಕಾರಿ ಪಲ್ಲವಿ ಸಾತೇನಹಳ್ಳಿ ಆಗಮಿಸಲಿದ್ದಾರೆಂದು ಸಂಸ್ಥಾಪಕ ಪ್ರಕಾಶ ಹಾವಣಗಿ ತಿಳಿಸಿದ್ದಾರೆ.