ಹುಬ್ಬಳ್ಳಿ-ಧಾರವಾಡ ಸುದ್ದಿ

ಧಾರವಾಡ ಜಿಮಖಾನಾ ಆಡಳಿತ ಮಂಡಳಿಗೆ ನಾಳೆ ಚುನಾವಣೆ

14 ಜನ ಘಟಾನುಘಟಿಗಳು ಕಣದಲ್ಲಿ

ಧಾರವಾಡ :125 ವರ್ಷಗಳ ಸುಧೀರ್ಘ ಇತಿಹಾಸ ಹೊಂದಿರುವ ಇಲ್ಲಿನ ಪ್ರತಿಷ್ಠಿತ ಧಾರವಾಡ ಜಿಮಖಾನಾ ಕ್ಲಬ್ ನೂತನ ಆಡಳಿತ ಮಂಡಳಿ ಆಯ್ಕೆಗೆ ನಾಳೆ ಚುನಾವಣೆ ಜರುಗಲಿದೆ.


ಆಡಳಿತ ಮಂಡಳಿಯ ಎರಡು ವರ್ಷಗಳ ಅವಧಿಗೆ ಐದು ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, ಮಾಜಿ ಮೇಯರ ಈರೇಶ ಅಂಚಟಗೇರಿ, ಉದ್ಯಮಿ ಸುನೀಲ ಸರೂರ, ಚಂದ್ರಶೇಖರ್, ಜಯದೇವ ಜಿ.ಕೆ., ಡಾ.ಮಹೇಶ ಪಾಟೀಲ, ಜೆ.ಎಲ್.ಜಾಧವ, ಎನ್.ಎಸ್.ಬಿರಾದಾರ, ಪ್ರಮೋದ ದೇಸಾಯಿ, ಎಂ.ಜಿ.ಕಟ್ಟಿ, ಮಹೇಶ ಹಿರೇಮಠ, ಲಕ್ಷ್ಮೀಕಾಂತ ನಾಯ್ಕ, ವೀರಣ್ಣ ಯಳಲ್ಲಿ, ಸುಭಾಸ ಪಾಟೀಲ ಸೇರಿದಂತೆ ಒಟ್ಟು 14 ಜನರು ಚುನಾವಣಾ ಕಣದಲ್ಲಿದ್ದಾರೆ.


ನಗರದ ಹೃದಯ ಭಾಗದಲ್ಲಿರುವ ಕಿತ್ತೂರ ಚೆನ್ನಮ್ಮ ಪಾರ್ಕ್ ಪಕ್ಕದಲ್ಲಿರುವ ಧಾರವಾಡ ಜಿಮಖಾನ ಕ್ಲಬ್ ಒಂದು ಕಾಲದಲ್ಲಿ ದೇಶದ ಕೆಲವೇ ಕೆಲವು ಪ್ರತಿಷ್ಠಿತ ಜಿಮಖಾನ ಗಳಲ್ಲಿ ಒಂದಾಗಿತ್ತು. ಹಿರಿಯ ಅಧಿಕಾರಿಗಳು, ವೈದ್ಯರು, ಸಮಾಜದಲ್ಲಿ ಗಣ್ಯರಾದ ಕೆಲವೇ ಕೆಲವು ಸದಸ್ಯರನ್ನು ಹೊಂದಿರುವ ಕ್ಲಬ್ ಗೆ ಜಿಲ್ಲಾಧಿಕಾರಿಗಳು ಖಾಯಂ ಅಧ್ಯಕ್ಷರಾಗಿರುತ್ತಾರೆ. ಅಪರ ಜಿಲ್ಲಾಧಿಕಾರಿಗಳು ಕೋಶಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಢಾಧಿಕಾರಿಗಳು,ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸೇರಿದಂತೆ ಹಿರಿಯ ಅಧಿಕಾರಿಗಳು ಪದಾಧಿಕಾರಿಗಳಾಗಿರುತ್ತಾರೆ.


ಉತ್ತಮ ಪರಿಸರದಲ್ಲಿ ವಿಶಾಲ ಆವರಣದಲ್ಲಿ ಕಟ್ಟಡ ಹೊಂದಿರುವ ಕ್ಲಬ್ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಕಂಡಿಲ್ಲ. ಅಲ್ಲದೇ ಹೊಸದಾಗಿ ಸದಸ್ಯರ ನೋಂದಣಿ ಕೂಡ ಆಗಿಲ್ಲ. ಹೀಗಾಗಿ ಅನೇಕರು ಸದಸ್ಯತ್ವ ಬಯಸಿದ್ದರೂ ನೋಂದಣಿ ಪ್ರಕ್ರಿಯೆ ಆಗುತ್ತಿಲ್ಲ ಎಂದು ಹೇಳಲಾಗುತ್ತಿದೆ.
ಸಧ್ಯ ಜಿಮಖಾನ ಕ್ಲಬ್ ನಲ್ಲಿ ೨೩೩ ಸದಸ್ಯರಿದ್ದಾರೆ. ನಾಳೆ ಬೆಳಗ್ಗೆ9 ರಿಂದ ಸಂಜೆ 4 ವರೆಗೆ ಮತದಾನ ನಡೆಯಲಿದ್ದು, ಮತದಾನ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಎಣಿಕೆ ಕಾರ್ಯ ನಡೆಯಲಿದೆ ಎಂದು ಚುನಾವಣಾಧಿಕಾರಿಯಾಗಿರುವ ತಹಶಿಲ್ದಾರ ಡಾ.ದೊಡ್ಡಪ್ಪ ಹೂಗಾರ ತಿಳಿಸಿದ್ದಾರೆ.

administrator

Related Articles

Leave a Reply

Your email address will not be published. Required fields are marked *