ಧಾರವಾಡ: ಸಪ್ತಾಪುರ ಹತ್ತಿರದ ಖಾಸಗಿ ಕಾಲೇಜಿನ ಹಾಸ್ಟೆಲ್ ವಾರ್ಡನಗಳಿಂದ ವಿದ್ಯಾರ್ಥಿಯೊಬ್ಬನ ಮೇಲೆ ಮಾರಣಾಂತಿಕ ಹಲ್ಯೆ ನಡೆಸಿದ್ದು, ತೀವ್ರವಾಗಿ ಗಾಯಗೊಂಡಿರುವ ಬಾಲಕನನ್ನು ಧಾರವಾಡದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ವಿದ್ಯಾರ್ಥಿಯ ಸ್ವಂತ ಊರಾದ ಲಕ್ಷ್ಮೇಶ್ವರನ ಬಾಲಾಜಿ ಆಸ್ಪತ್ರೆಗೆ ದಾಖಲು ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಪ್ರತಿಷ್ಟಿತ ಸಂಸ್ಥೆಯ ಕಾಲೇಜಿನ ಬಾಲಕರ ವಸತಿ ನಿಲಯದಲ್ಲಿ ವಾರದ ಹಿಂದೆ 18 ವಯಸ್ಸಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಖಾದರ್ ಭಾಷಾ ಮೇಲೆ ಮೂರು ಜನ ವಾರ್ಡನಗಳು ರಾತ್ರಿ ಹೊತ್ತಿನಲ್ಲಿ ಕುಡಿದ ಅಮಲಿನಲ್ಲಿ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆನ್ನಲಾಗಿದ್ದು, ಸಪ್ತಾಪುರ ಬಾವಿ ಹತ್ತಿರವಿರುವ ಕಾಲೇಜಿನ ವಸತಿ ನಿಲಯದಲ್ಲಿ ಮೂವರು ವಾರ್ಡನಗಳು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಹಲ್ಲೆಯಿಂದ ವಿದ್ಯಾರ್ಥಿಗೆ ಬಲವಾದ ಪೆಟ್ಟು ತಗುಲಿದ್ದು, ಕೂಡಲೇ ಧಾರವಾಡದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯದು ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು ಆದರೆ, ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಲು ತಿಳಿಸಿದ್ದರಿಂದ ವಿದ್ಯಾರ್ಥಿ ತಂದೆ ಇಸಾಕ್ ಭಾಷಾ ಹರಪನಹಳ್ಳಿ ತಮ್ಮ ಸ್ವಂತ ಊರು ಲಕ್ಷ್ಮೇಶ್ವರ ಕರೆದೊಯ್ದು ಬಾಲಾಜಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕೆತ್ಸೆ ನೀಡಲಾಗಿದೆ ಎಂದು ತಿಳಿದು ಬಂದಿದೆ.
ಈ ಕುರಿತು ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ವರದಿಯ ದೂರು ಬಂದರೂ ಉಪನಗರ ಪೊಲೀಸ ಠಾಣೆ ಸಿಬ್ಬಂದಿ ಮಾತ್ರ ಕಾಲೇಜಿನ ಸಿಬ್ಬಂದಿಯನ್ನು ಹಾಗೂ ಹಲ್ಲೆಗೊಳಗಾದ ವಿದ್ಯಾರ್ಥಿಯ ಪಾಲಕರನ್ನು ವಿಚಾರಿಸಿಲ್ಲ. ಅಲ್ಲದೇ ಕಾಲೇಜಿನ ಆಡಳಿತ ಮಂಡಳಿ ಜಾಣ ಕುರುಡರಂತೆ ವರ್ತಿಸುತ್ತಿದೆ ಎಂದು ಬಾಲಕನ ತಂದೆ ಆರೋಪಿಸಿದ್ದಾರೆ.