ಹುಬ್ಬಳ್ಳಿ-ಧಾರವಾಡ ಸುದ್ದಿ

ಉದ್ಯಮಿ ಗಣೇಶ್ ಶೇಟ್‌ಗೆ ಐಟಿ ಶಾಕ್

ರಾಯಲ್ ರಿಟ್ಜ್ ಹೊಟೆಲ್, ಕೆಜಿಪಿ ಜ್ಯುವೆಲರಿ, ಮಹಾದೇವಿ ಸಿಲ್ಕ್‌ಗಳ ಮೇಲೆ ದಾಳಿ

50ಕ್ಕೂ ಅಧಿಕಾರಿಗಳಿಂದ ಏಕಕಾಲಕ್ಕೆ ದಾಳಿ

ಹುಬ್ಬಳ್ಳಿ: ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದಡಿ ಹುಬ್ಬಳ್ಳಿ ಉದ್ಯಮಿಯೊಬ್ಬರ ಮನೆ, ಕಚೇರಿಯ ಮೇಲೆ ದಾಳಿ ಮಾಡಿರುವ ಆದಾಯ ಕರ ಇಲಾಖೆ ( ಐಟಿ) ಅಧಿಕಾರಿಗಳು ಮಂಗಳವಾರದಿಂದ ತಪಾಸಣೆ ನಡೆಸುತ್ತಿದ್ದು ಇಂದೂ ಕೂಡ ಮುಂದುವರಿದಿದೆ.

ಆಭರಣ ಮಳಿಗೆ, ಹೊಟೆಲ್ ಅಲ್ಲದೇ ಜವಳೀ ಅಂಗಡಿ ಹೊಂದಿರುವ ಗಣೇಶ ಶೇಟ್ ಅವರಿಗೆ ಸೇರಿದ ಅಶೋಕ ನಗರದ ನಿವಾಸ, ಸ್ಟೇಶನ್ ರಸ್ತೆಯಲ್ಲಿರುವ ಕೆಜಿಪಿ ಜ್ಯುವೆಲರಿ, ಮಹಾದೇವಿ ಸಿಲ್ಕ್ ಜವಳಿ ಅಂಗಡಿ ಹಾಗೂ ಅಮರಗೋಳದಲ್ಲಿರುವ ಪ್ರತಿಷ್ಠಿತ ರಾಯಲ್ ರಿಟ್ಜ್ ಹೋಟೆಲ್ ಮೇಲೆ 50ಕ್ಕೂ ಹೆಚ್ಚು ಐಟಿ ಅಧಿಕಾರಿಗಳ ತಂಡ ಏಕಕಾಲಕ್ಕೆ ದಾಳಿ ನಡೆಸಿದೆ.


ಹುಬ್ಬಳ್ಳಿಯ ಆಶೋಕ ನಗರದಲ್ಲಿರುವ ಗಣೇಶ ಸೇಟ್ ನಿವಾಸದಲ್ಲಿ ಸತತ 10 ಗಂಟೆಗಳಿಂದ ಶೋಧ ಕಾರ್ಯ ಮುಂದುವರೆದಿದ್ದು ಅನೇಕ ಮಹತ್ವದ ದಾಖಲೆಗಳು ದೊರೆತಿವೆ ಎನ್ನಲಾಗಿದೆ. ಸ್ಟೇಶನ್ ರಸ್ತೆಯಲ್ಲಿರುವ ಕೆಜಿಪಿ ಜ್ಯುವಲರ್ಸ್‌ನಲ್ಲಿ ಉದ್ಯಮಿ ಗಣೇಶ ಶೇಟ್ ಪುತ್ರ ಶ್ರೀಗಂಧ ಶೇಟ್‌ನನ್ನು ಕರೆಸಿ ವಿಚಾರಣೆ ನಡೆಸುತ್ತಿದ್ದಾರೆ. ಮತ್ತೊಂದೆಡೆ ಗಣೇಶ ಏಟ್ ಒಡೆತನದಲ್ಲಿರುವ ಹೊಸಪೇಟೆಯಲ್ಲಿರುವ ತಾರಾ ಪ್ಯಾಲೇಸ್ ಮೇಲೂ ದಾಳಿ ನಡೆದಿದೆಯೆಂದು ತಿಳಿದುಬಂದಿದೆ.

ಇವರ ಜ್ಯುವೆಲರಿ ಹಾಗೂ ಹೊಟೆಲ್‌ಗಳಲ್ಲಿ ಬಿಜೆಪಿಯ ಮಾಜಿ ಸಚಿವರೊಬ್ಬರ ಪಾಲುದಾರಿಕೆಯಿದೆ ಎನ್ನಲಾಗಿದೆ.

 

administrator

Related Articles

Leave a Reply

Your email address will not be published. Required fields are marked *