ಹುಬ್ಬಳ್ಳಿ-ಧಾರವಾಡ ಸುದ್ದಿ

ಮತ ಹಾಕಲು ಅಮೆರಿಕದಿಂದ ಬಂದ ರುಚಿತಾ

ಉತ್ಸಾಹದಿಂದ ತಮ್ಮ ಪ್ರಥಮ ಮತಹಕ್ಕು ಚಲಾಯಿಸಿದ ಯುವಕ-ಯುವತಿಯರು

ಹುಬ್ಬಳ್ಳಿ: ಲೋಕಸಭೆ ಚುನಾವಣೆಯಲ್ಲಿ ಮತ ಹಾಕಲು ಸರಕಾರಿ ಆಡಳಿತ ತಿಂಗಳುಗಟ್ಟಲೇ ಮತದಾನ ಜಾಗೃತಿ ಮೂಡಿಸುತ್ತಿದ್ದರೂ, ಹಲವಾರು ಸ್ಥಳೀಯ ಮತದಾರರೇ ಮತಗಟ್ಟೆಗೆ ಬಾರದೇ ಮತದಾನ ಮಾಡಲು ನಿರ್ಲಕ್ಷ ತೋರುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ.


ಆದರೆ, ಎಲ್ಲರೂ ಹೀಗೆ ಇರುವುದಿಲ್ಲ. ಪ್ರಜಾಪ್ರಭುತ್ವದಲ್ಲಿ ತಮ್ಮ ಮತ ಎಷ್ಟು ಮುಖ್ಯ ಎಂದು ಅರಿತಿರುವ, ಇದೇ ಮೊದಲ ಸಲ ಮತದಾನ ಮಾಡುತ್ತಿರುವ ಕೆಲವು ಯುವಕ-ಯುವತಿಯರು ಮತದಾನಕ್ಕೆ ಉತ್ಸಾಹ ತೋರಿ ಎಲ್ಲರಿಗೂ ಆದರ್ಶವಾಗಿದ್ದಾರೆ. ವಿಶೇಷವಾಗಿ ಇದೇ ಸಲ ಮತದಾನ ಹಕ್ಕು ಪಡೆದ ಹುಬ್ಬಳ್ಳಿಯ ವಿಜಯನಗರ ಮೂಲದ ಯುವತಿ ರುಚಿತಾ ಆಲೂರ ತಮ್ಮ ಮೊದಲ ಮತನೀಡಲು ಅಮೆರಿಕದಿಂದ ಆಗಮಿಸಿ ನಗರದ ಲೈನ್ಸ್ ಶಾಲೆಯ ಬೂತ್ ಸಂಖ್ಯೆ 75ರಲ್ಲಿ ತಮ್ಮ ಹಕ್ಕು ಚಲಾಯಿಸಿದ್ದಾರೆ.
ರುಚಿತಾ ಅವರ ತಂದೆ ಬಸವರಾಜ ಅವರು ಆಸಕ್ತಿ ವಹಿಸಿ 14095 ಕಿ.ಮೀ. ದೂರದಿಂದ ಮಗಳನ್ನು ಕರೆಸಿಕೊಂಡು ಮತವನ್ನ ಹಾಕಿಸಿ, ಮಗಳಿಗೆ ಅದರ ಮಹತ್ವ ಏನು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.


ಇದೇ ರೀತಿ ಸಾಮಾಜಿಕ ಕಾರ್ಯಕರ್ತ ಎಂ.ಎಫ್.ಹಿರೇಮಠ ಅವರ ಮೊಮ್ಮಗಳಾದ ಎಂಜಿನಿಯರಿಂಗ್ ವಿದ್ಯಾರ್ಥಿನಿ ಜ್ಞಾನಸಿಂಚನಾ ಹಿರೇಮಠ ಮಂಗಳವಾರ ಬೆಳ್ಳಂಬೆಳಗ್ಗೆಯೇ ಧಾರವಾಡದ ಪವನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮೊದಲ ಬಾರಿ ಮತ ಚಲಾಯಿಸಿ, ಪ್ರಜಾಪ್ರಭುತ್ವ ದೇಶದ ಅಭಿವೃದ್ಧಿಯಲ್ಲಿ ಪ್ರಜೆಗಳ ಮತದಾನ ಎಷ್ಟು ಮುಖ್ಯ ಎಂದು ಹೆಮ್ಮೆ ವ್ಯಕ್ತಪಡಿಸಿದ್ದಾರೆ.


ಹುಬ್ಬಳ್ಳಿಯ ಮತದಾನ ಕೇಂದ್ರವೊಂದರಲ್ಲಿ ಬೆಳ್ಳಂಬೆಳಗ್ಗೆಯೇ ಆಗಮಿಸಿದ ಯುವತಿ ಶಿವಾನಿ ಹೆಗಡೆ ತಮ್ಮ ಮೊದಲ ಮತ ಹಕ್ಕು ಚಲಾಯಿಸಿದ್ದಾರೆ. ಧಾರವಾಡದ ಉದ್ಯಮಿ ಪ್ರಕಾಶ ಹಾವಣಗಿ ಅವರ ಮೊಮ್ಮಗ ಅಲೋಕ ಕಿಶೋರ ಹಾವಣಗಿ ಸಾಗರದಲ್ಲಿ ಉತ್ಸಾಹದಿಂದ ಮತ ಚಲಾಯಿಸಿದ್ದಾರೆ. ಧಾರವಾಡದ ಮರಾಠಾ ಕಾಲನಿಯಲ್ಲಿನ ಬುದ್ಧರಕ್ಕಿಥ ವಸತಿ ಶಾಲೆಯ ಮತಗಟ್ಟೆಯಲ್ಲಿ ನಾಗವೇಣಿ ಪಾಟೀಲ ತಮ್ಮ ಮೊದಲ ಮತಹಕ್ಕು ಚಲಾಯಿಸಿದ್ದಾರೆ.

administrator

Related Articles

Leave a Reply

Your email address will not be published. Required fields are marked *