ಹುಬ್ಬಳ್ಳಿ-ಧಾರವಾಡ ಸುದ್ದಿ
ತುಳಸಿ ಆಯುರ್ವೇದ ಅಂಗಡಿ ಮೇಲೆ ದಾಳಿ: ಮೂವರ ವಿರುದ್ಧ ಕ್ರಮ

ತುಳಸಿ ಆಯುರ್ವೇದ ಅಂಗಡಿ ಮೇಲೆ ದಾಳಿ: ಮೂವರ ವಿರುದ್ಧ ಕ್ರಮ

ಧಾರವಾಡ : ಇಲ್ಲಿನ ಸಿಬಿಟಿ ಬಳಿಯ ತುಳಸಿ ಆಯುರ್ವೇದ ಅಂಗಡಿ ಮೇಲೆ ಸಿಸಿಬಿ ಪೊಲೀಸರು ಹಠಾತ್ ದಾಳಿ ನಡೆಸಿದ್ದಾರೆ. ಶಹರ ಠಾಣಾ ವ್ಯಾಪ್ತಿಯಲ್ಲಿನಎಚ್‌ಡಿಎಂಸಿ ಕಾಂಪ್ಲೆಕ್ಸ್‌ನ ನಂ. ಎ-9ರಲ್ಲಿರುವ ಆಯುರ್ವೇದ ಔಷಧಿ ಅಂಗಡಿ ಮೇಲೆ ದಾಳಿ ನಡೆಸಿದ ಪೊಲೀಸರು ಹಲವಾರು ಕಂಪನಿಗಳ ನಕಲಿ ಔಷಧಿಗಳನ್ನು ವಶಪಡಿಸಿಕೊಂಡು ಅಂಗಡಿ ಮಾಲೀಕರ ವಿರುದ್ಧ ಕ್ರಮ ಕೈಗೊಂಡಿದ್ದಾರೆ.

ಕರ್ನಾಟಕ ವೈದ್ಯಕೀಯ ಮಂಡಳಿಯಿಂದ ಯಾವುದೇ ಪರವಾನಗಿ ಪಡೆಯದೇ ನಗರದಲ್ಲಿ ಮಹಾರಾಷ್ಟ್ರದ ಸಾಂಗ್ಲಿ ಮೂಲದ ದುರ್ಗರಾಜ ತಂದೆ ಮುತ್ತಪ್ಪ ವೈದ್ಯ, ನವಲೂರ ವಿನಾಯಕ ನಗರದ ನಿವಾಸಿ ವಿಜಯ ತಂದೆ ಮೋಹನ ನಲವಡಿ ಹಾಗೂ ಧಾರವಾಡ ಜನ್ನತ ನಗರದ ಬಸೀರಾ ಯಾಸೀನ ಬಳಬಟ್ಟಿ ಎಂಬವರು ಯಾವುದೇ ಆಯುರ್ವೇದ ಔಷಧಿಗಳನ್ನು ಮಾರಾಟ ಮಾಡುತ್ತ ಜನರಿಗೆ ವಂಚಿಸುತ್ತಿದ್ದರು.

ಕುರಿತು ಜಿಲ್ಲಾ ಆಯುಷ್ ಅಧಿಕಾರಿ ಡಾ. ಗಣೇಶ ಕಬಾಡೆ ಅವರು ಶಹರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು.ಈ ಹಿನ್ನೆಲೆಯಲ್ಲಿ ಮಂಗಳವಾರ ಪೊಲೀಸ್ ಅಧಿಕಾರಿಗಳು ಹಠಾತ್ ದಾಳಿ ನಡೆಸಿ ನಕಲಿ ಔಷಧಗಳು ಹಾಗೂ ಅವುಗಳಿಗೆ ಸಂಬಂಧಿಸಿದ ಹಲವು ಬಾಟಲ್‌ಗಳು, ಪ್ಯಾಕೇಟ್‌ಗಳು ಸೇರಿದಂತೆ ಸಾಮಗ್ರಿಗಳನ್ನು ವಶಪಡಿಸಿಕೊಂಡಿರುವರು.
ಈ ಕುರಿತು ಶಹರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಂಡಿದ್ದಾರೆ.

ಸಿಸಿಬಿ ಇನ್ಸ್ಪೆಕ್ಟರ್ ಗಳಾದ ಪ್ರಭು ಗಂಗನಹಳ್ಳಿ, ಮಾರುತಿ ಗುಳ್ಳಾರಿ, ಶಹರ ಠಾಣೆಯ ಪಿಐ ಎನ್.ಸಿ.ಕಾಡದೇವರಮಠ, ಸಿಸಿಬಿ ಎಎಸ್ ಐ ಗೋಲಂದಾಜ, ಸಿಬ್ಬಂದಿ ಗಳಾದ ಎಸ್.ಬಿ.ಪಾಟೀಲ,
ಅನಿಲಕುಮಾರ ಹುಗ್ಗಿ, ಫಕ್ಕೀರಪ್ಪ‌ ಕುರಿ, ಐ.ಕೆ.ಧಾರವಾಡ, ದಯಾನಂದ ಗುಂಡಗೋವಿ, ಎನ್.ಓ.ಜಾಧವ ದಾಳಿ‌ ನಡೆಸಿದ್ದರು.

administrator

Related Articles

Leave a Reply

Your email address will not be published. Required fields are marked *