ಸಿಲಿಂಡರ್ ಸ್ಪೋಟ : ಮೃತರ ಸಂಖ್ಯೆ ಆರಕ್ಕೇರಿಕೆ
ಚಿಕಿತ್ಸೆ ಫಲಿಸದೆ ಮತ್ತಿಬ್ಬರು ಮಾಲಾಧಾರಿಗಳು ಸಾವು
ಹಂದಿ ಸಾಕಾಣಿಕೆದಾರನ ಮರ್ಡರ್: ನಾಲ್ವರ ಸೆರೆ
ಇಸ್ಪೀಟು ಜೂಜಾಟ : 19 ಜನರ ಬಂಧನ
ಹುಬ್ಬಳ್ಳಿ: ನಗರದ ಕಾರವಾರ ರಸ್ತೆಯಲ್ಲಿರುವ ಹಳೆ ಸಿಎಆರ್ ಮೈದಾನದಲ್ಲಿ ಮಾದಕ ವಸ್ತು ಪೆಡ್ಲರ್ಸ್ ಪರೇಡ್ ನಡೆಸಲಾಯಿತು. ಹು-ಧಾ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ನೇತೃತ್ವದಲ್ಲಿ ನಡೆದ ಪರೇಡ್ನಲ್ಲಿ ಖಡಕ್ ವಾರ್ನಿಂಗ್ ನೀಡಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿ ಆಯುಕ್ತ ಎನ್ ಶಶಿಕುಮಾರ್ಹೊಸ ವರ್ಷ ನಿಮಿತ್ತ ಎಲ್ಲಾ ಚಟುವಟಿಕೆಗಳು ಹೆಚ್ಚಾಗಿರುತ್ತವೆ.
ಬೇರೆ ಬೇರೆ ಊರುಗಳಿಂದ ಹುಬ್ಬಳ್ಳಿಗೆ ಬರುವವರ ಸಂಖ್ಯೆ ಕೂಡ ಹೆಚ್ಚಾಗಿರುತ್ತೆ ಅಪರಾಧ ಕೃತ್ಯಗಳು ಸಹ ಹೆಚ್ಚಾಗುವ ಸಾಧ್ಯತೆ ಇರಲಿದೆ.
ಹಳೆ ದ್ವೇಷದ ಮೇಲೆ ಅಪರಾಧ ಕೃತ್ಯಗಳು ನಡೆಯುವ ಸಾಧ್ಯತೆ ಹೆಚ್ಚಿರುವ ಹಿನ್ನೆಲೆಯಲ್ಲಿ ಇಂದು ಹುಬ್ಬಳ್ಳಿಯಲ್ಲಿ ಪೆಡ್ಲರ್ಸ್ ಪರೇಡ್ ಮಾಡಿ, 50 ಪೆಡ್ಲರ್ಸ್ ಮೇಲೆ ದೂರು ದಾಖಲಿಸಿಕೊಳ್ಳಲಾಗಿದೆಯಲ್ಲದೇ 200ಕ್ಕೂ ಹೆಚ್ಚು ಪೆಡ್ಲರ್ಸ್ಗಳನ್ನ ವಶಕ್ಕೆ ಪಡೆದು ಎನ್ಡಿಪಿಎಸ್ ಕಾಯ್ದೆ ಅಡಿ ಕ್ರಮ ಕೈಗೊಳ್ಳಲಾಗಿದೆ ಎಂದರು.
ಕಳೆದ 4-5 ತಿಂಗಳಿಂದ ವ್ಯಸನಿಗಳನ್ನು ಪರೀಕ್ಷೆಗೆ ಒಳಪಡಿಸಿದಾಗ ಸಾವಿರಕ್ಕೂ ಹೆಚ್ಚು ಪಾಸಿಟಿವ್ ವರದಿ ಬಂದಿದ್ದು, ಕಳೆದ 10 ವರ್ಷದಲ್ಲಿ ದಾಖಲಾದ ಪ್ರಕರಣಗಳ ಆಧಾರದ ಮೇಲೆ 440 ಪೆಡ್ಲರ್ಸ್ ಗುರುತಿಸಲಾಗಿದೆ. 210 ಪೆಡ್ಲರ್ಸ್ ಗಳನ್ನ ನಮ್ಮ ಅಧಿಕಾರಿಗಳು ಮನೆಗೆ ಹೋಗಿ ಕರೆದುಕೊಂಡು ಬಂದಿದ್ದಾರೆ. ಅವರೆಲ್ಲರ ಮೇಲೆ ಡೊಸಿಯಸ್ ಮಾಡಿದ್ದೇವೆ. ಇನ್ನು 230 ಕ್ಕೂ ಹೆಚ್ಚು ಜನ ಬಂದಿಲ್ಲ, ಅದರಲ್ಲಿ 50ಕ್ಕೂ ಹೆಚ್ಚು ಜನ ಹೊರ ರಾಜ್ಯದವರಿದ್ದಾರೆ.೩೦ಕ್ಕೂ ಹೆಚ್ಚು ಜನ ನ್ಯಾಯಾಂಗ ವಶದಲ್ಲಿದ್ದಾರೆ. 8-10 ಜನ ಮೃತ ಪಟ್ಟರೆ, 110 ಜನ ಸಿಕ್ಕಿಲ್ಲ ಎಂದರು.
ಹೊಸ ವರ್ಷಾಚರಣೆ ಪ್ರಯುಕ್ತ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಹಲವು ಅಪರಾಧ ಕೃತ್ಯಗಳಲ್ಲಿ ಭಾಗಿಯಾದವರ ಮೇಲೆ ಕಣ್ಗಾವಲು ಇಡಲಾಗಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಹೆಚ್ಚಿನ ಭದ್ರತೆ, ಸಿಸಿ ಕ್ಯಾಮೆರಾಗಳನ್ನು ಅಳವಡಿಸಲು ಸೂಚನೆ ನೀಡಲಾಗಿದೆ. ಇತರೆ ಇಲಾಖೆಗಳೊಂದಿಗೆ ಸಭೆ ಇಟ್ಟುಕೊಳ್ಳಲು ನಾಳೆ ಮನವಿ ಮಾಡಿಕೊಳ್ಳಲಾಗಿದೆ. ಲೌಡ್ ಸ್ಪೀಕರ್ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಇರಲಿದ್ದು, 10 ಗಂಟೆ ಮೇಲೆ ಯಾವುದೇ ಲೌಡ್ ಸ್ಪೀಕರ್ ಹಚ್ಚಿದೆ ಪಾಲನೆ ಮಾಡಬೇಕು. ಖಾಸಗಿ ಜಾಗಗಳಲ್ಲಿ ಪಾರ್ಟಿ ಮಾಡಿಕೊಳ್ಳಲು ಯಾವುದೇ ನಿರ್ಬಂಧನೆ ಇಲ್ಲ ಡ್ರಿಂಕ್ ಅಂಡ್ ಡ್ರೈವ್ ಕೂಡ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಹಂದಿ ಸಾಕಾಣಿಕೆದಾರನ ಮರ್ಡರ್: ನಾಲ್ವರ ಸೆರೆ
ಹುಬ್ಬಳ್ಳಿ: ನಗರದ ಹೊರ ವಲಯದ ಗದಗ ರಸ್ತೆಯಲ್ಲಿ ಹಂದಿ ಸಾಕಾಣಿಕೆದಾರ ಸ್ಯಾಮ್ಯುಯಲ್ ಮಬ್ಬು( 38) ನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಿದ ಘಟನೆಗೆ ಸಂಬಂಧಿಸಿದಂತೆ ಬೆಂಡಿಗೇರಿ ಪೊಲೀಸ್ ಠಾಣಾ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.
ಗುರುವಾರ ರಾತ್ರಿ ನಡೆದ ಸ್ಯಾಮ್ಯುಯಲ್ನ ಕಣ್ಣಿಗೆ ಖಾರದ ಪುಡಿಯನ್ನು ಎರಚಿ ಮಾರಕಾಸ್ತ್ರಗಳಿಂದ ಕೊಲೆ ಮಾಡಿ ಹಂತಕರು ಪರಾರಿಯಾಗಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಎನ್ .ಶಶಿಕುಮಾರ ಇಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಆರೋಪಿಗಳಾದ ಸುಲೇಮಾನ ನಜೀರಹ್ಮದ ಬಳ್ಳಾರಿ, ಟೈಟಾಸಬಾಬು ಆಂತೋನಿ ವೆನ್ನಮ್ಮ, ಮಹ್ಮದಶಾ ಕಪೀಲ್ಅಹ್ಮದ ಫಿರೋಜಬಾದ ಹಾಗೂ ಮೌಲಾಸಾಬಾ ಅಲಿಸಾಬ ರಮಾಜಾನರ ಎಂಬುವರನ್ನು ಬಂಧಿಸಿ ಅವರಿಂದ ಕೊಲೆಗೆ ಉಪಯೋಗಿಸಿದ ಕಬ್ಬಿಣದ ಪೈಪ್ ಹಾಗೂ ಒಂದು ಚಾಖುವನ್ನು ವಶಕ್ಕೆ ಪಡೆಯಲಾಗಿದೆ ಎಂದು ಆಯುಕ್ತರು ತಿಳಿಸಿದರು.
ಪ್ರಕರಣದಲ್ಲಿ ಮೃತ ಮಂಟೂರ್ ರೋಡ್ ನಿವಾಸಿ ಸಾಮ್ಯುವಲ್ ತನ್ನ ಸ್ನೇಹಿತರಾದ ಸುಲೇಮಾನ, ಮಹ್ಮದಶಾ ಹಾಗೂ ಮೌಲಾಸಾಬ ಅವರಿಗೆ ಹಣಕಾಸಿನ ವ್ಯವಹಾರದಲ್ಲಿ ಮೋಸ ಮಾಡಿದ್ದ. ಕೊಲೆಗೆ ಹಣಕಾಸಿನ ವ್ಯವಹಾರ ಮತ್ತು ಕೌಟುಂಬಿಕ ಕಲಹ ಕಾರಣವಾಗಿದ್ದು ಪ್ರಕರಣ ದಾಖಲಾದ 48 ಗಂಟೆಯೊಳಗೆ ಆರೋಪಿಗಳನ್ನು ಬಂಧಿಸಲಾಗಿದೆಯೆಂದರು.
ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಬೆಂಡಿಗೇರಿ ಠಾಣಾಧಿಕಾರಿ ಎಸ್.ಆರ್. ನಾಯಕ, ಪಿಎಸ್ಐಗಳಾದ ಅಶೋಕ ಬಿ.ಎಸ್.ಬಿ., ರವಿ ವಡ್ಡರ, ಸಿಬ್ಬಂದಿಗಳಾದ ಸಿ.ಎಫ್. ಅಂಬಿಗೇರ, ಎನ್.ಐ. ನೀಲಗಾರ, ಹನಮಂತ ಕರಗಾಂವಿ, ಆರ್.ಎಸ್. ಹರಕಿ, ಬಿ.ಎಸ್.ಗಳಗಿ, ಆರ್.ಎಚ್. ಹಿತ್ತಲಮನಿ, ಎಸ್.ಎಸ್. ಮೇಟಿ, ಬಿ.ಎಸ್. ಗೌಡರ, ಕೆ.ಜಿ. ಬಗಾಡೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಬೆಂಡಿಗೇರಿ ಪೊಲೀಸರ ಕಾರ್ಯಾಚರಣೆಯನ್ನು ಪೊಲೀಸ್ ಆಯುಕ್ತರು ಶ್ಲ್ಯಾಘಿಸಿದರು.
ಸಿಲಿಂಡರ್ ಸ್ಪೋಟ : ಮೃತರ ಸಂಖ್ಯೆ ಆರಕ್ಕೇರಿಕೆ
ಚಿಕಿತ್ಸೆ ಫಲಿಸದೆ ಮತ್ತಿಬ್ಬರು ಮಾಲಾಧಾರಿಗಳು ಸಾವು
ಹುಬ್ಬಳ್ಳಿ: ದಿ. 22ರಂದು ಸಂಭವಿಸಿದ್ದ ಸಿಲಿಂಡರ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಿಬ್ಬರು ಮಾಲಾಧಾರಿಗಳು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಸಾವಿನ ಸಂಖ್ಯೆ ಆರಕ್ಕೆ ಏರಿಕೆಯಾಗಿದೆ.
ಶಂಕರ ಚವ್ಹಾಣ್ (30) ಬೆಳಗಿನ ಜಾವ 1.30ರ ಸುಮಾರಿಗೆ ಸಾವನ್ನಪ್ಪಿದರೆ, ಮತ್ತು ಮಂಜುನಾಥ ವಾಘ್ಮೋಡೆ ಬೆಳಿಗ್ಗೆ ೧೦-೧೫ಕ್ಕೆ ಕೊನೆಯುಸಿರೆಳೆದಿದ್ದಾನೆ.
ಶಂಕರ ಕೆಎಂಸಿ ಆಸ್ಪತ್ರೆಯಲ್ಲೇ ಗುತ್ತಿಗೆ ಆಧಾರದಲ್ಲಿ ವಾರ್ಡಬಾಯ್ ಆಗಿ ಕೆಲಸ ಮಾಡುತ್ತಿದ್ದ. ಸಾಯಿನಗರದ ಅಚ್ಚವ್ವಳ ಕಾಲೋನಿಯ ಈಶ್ವರ ದೇವಸ್ಥಾನದಲ್ಲಿ ಕಳೆದ ರವಿವಾರ ದಿ. 22ರಂದು ಸಂಜೆ ಸಿಲಿಂಡರ್ ಸ್ಫೋಟ ಸಂಭವಿಸಿ, 9 ಮಂದಿ ಅಯ್ಯಪ್ಪ ಮಾಲಾಧಾರಿಗಳು ಗಂಭೀರವಾಗಿ ಗಾಯಗೊಂಡಿದ್ದರು. ಈ ಪೈಕಿ ನಿಜಲಿಂಗಪ್ಪ ಬೇಪುರಿ (58), ಸಂಜಯ್ ಸವದತ್ತಿ (20), ರಾಜು ಮೂಗೇರಿ (21), ಲಿಂಗಾರಾಜು ಬೀರನೂರ (24) ಈಗಾಗಲೇ ಮೃತಪಟ್ಟಿದ್ದರು.
ಘಟನಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಪ್ರಕಾಶ್ ಬಾರಕೇರ್, ವಿನಾಯಕ ಬಾರಕೇರ್, ತೇಜಸ್ವರ್ ಸಾತರೆಯನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ಕೊಡಲಾಗುತ್ತಿದ್ದು, ಒಬ್ಬನನ್ನು ಹೊರತುಪಡಿಸಿದರೆ ಉಳಿದಿಬ್ಬರ ಸ್ಥಿತಿಯು ಚಿಂತಾಜನಕವಾಗಿದೆ.
ಇಸ್ಪೀಟು ಜೂಜಾಟ : 19 ಜನರ ಬಂಧನ
ಧಾರವಾಡ: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಇಸ್ಪೀಟು ಜೂಜಾದಲ್ಲಿ ತೊಡಗಿದ್ದ ಸಂದರ್ಭದಲ್ಲಿ ದಾಳಿ ನಡೆಸಿದ ಗ್ರಾಮೀಣ ಠಾಣೆಯ ಪೊಲೀಸರು ಪೊಲೀಸರು 19 ಜನರನ್ನು ನಿನ್ನೆ ಬಂಧಿಸಿದ್ದಾರೆ.
ಶುಕ್ರವಾರ ರಾತ್ರಿ ಖಚಿತ ಮಾಹಿತಿ ಮೇರೆಗೆ ಸಿಪಿಐ ಶಿವಾನಂದ ಕಮತಗಿ ಅವರ ನೇತೃತ್ವದ ಸಿಬ್ಬಂದಿ ತಾಲೂಕಿನ ಕಣವಿ ಹೊನ್ನಾಪೂರ-ಇಟಿಗಟ್ಟಿ ರಸ್ತೆ ಬದಿಯಲ್ಲಿ ಇಸ್ಪೀಟು ಜೂಜಾಟದಲ್ಲಿ ತೊಡಗಿದ್ದ ಧಾರವಾಡದ ದಾದಾಪೀರ ರಸೂಲಸಾಬ ಸವಣೂರ, ಪರಶುರಾಮ ತಾರಾನಾಥ ಮೂಗೆ, ಮುಜಾಫರ ಬಾಬುಸಾಬ ಮಾಕಾಂದರ, ಇಮಾಮಸಾಬ ರಸೂಲಸಾಬ ಸವಣೂರ, ವಿನಾಯಕ ರಮೇಶ ಬ್ಯಾಳಿ, ಸಲೀಂ ಅಬ್ದುಲಸತ್ತಾರ ಬೆಟಗೇರಿ, ಮಹೇಸ ಗದಿಗೆಪ್ಪ ಮಡ್ಡೆನ್ನವರ, ಅನೀಲ ಈರಪ್ಪ ಉದ್ದನ್ನವರ, ಹುಬ್ಬಳ್ಳಿಯ ಸಂತೋಷ ಮಳೆರಾಜ ವೀರಾಪೂರ, ನರೇಂದ್ರ ಗ್ರಾಮದ ದಾದಾಪೀರ ಇಮಾಮಸಾಬ ಮುಲ್ಲಾ ಮತ್ತು ಮೊರಬ ಗ್ರಾಮದ ಮಂಜುನಾಥ ಫಕ್ಕೀರಪ್ಪ ಹಟ್ಟಿಮನಿ, ಬಂಧಿತರಾಗಿದ್ದು, ಧಾರವಾಡದ ಅಸೀಫ್ ಹುಕ್ಕೇರಿ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ. ಬಂಧಿತರಿಂದ ೨೯೩೦೦ ರೂ.ನಗದು ಹಾಗೂ ಜೂಜಾಟ ಸಾಮಗ್ರ್ರಿಗಳನ್ನು ವಶಪಡಿಸಿಕೊಂಡಿದ್ದಾರೆ.
ತಾಲೂಕಿನ ಮಲ್ಲೂರ ಗ್ರಾಮದ ಆಲದಕಟ್ಟಿ ಕಟ್ಟಿ ಹತ್ತಿರ ಸಾರ್ವಜನಿಕ ಜಾಗೆಯಲ್ಲಿ ಇಸ್ಪೀಟು ಜೂಜಾಟದಲ್ಲಿ ತೊಡಗಿದ್ದ ಧಾರವಾಡದ ಶಬ್ಬೀರ ಹುಸೇನಸಾಬ ಧಾರವಾಡ, ಪಾಪಾಸಾಬ ಅಲಿಸಾಬ ಕಾಕರ, ನೂರಹ್ಮದ ಅಲ್ಲಾಭಕ್ಷ ಸೈಯ್ಯದ, ಅಬ್ದುಲರಸೂಲ್ ಗಾಜುಸಾಬ ಬಳಭಟ್ಟಿ, ಮೈನುದ್ದೀನ್ ನಜೀರಅಹ್ಮದ ಇನಾಮದಾರ, ಮನಸೂರಅಹ್ಮದ ಮಹ್ಮದಸಾಬ ಜಮಾದಾರ, ಫರೀದಸಾಬ ಇಮಾಮಹುಸೇನ ಅತ್ತಾರ ಮತ್ತು ಜವೀದ ಬಾಬುಲಾಲ ಬಿಜಾಪೂರ ಎಂಬುವರನ್ನು ಬಂಧಿಸಿದ್ದಾರೆ.
ಬಂಧಿತರಿಂದ ೧೪೦೭೦ ರೂ.ನಗದು ಹಾಗೂ ಜೂಜಾಟ ಸಾಮಗ್ರ್ರಿಗಳನ್ನು ವಶಪಡಿಸಿಕೊಂಡಿದ್ದಾರೆ. ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಸಿಪಿಐ ಶಿವಾನಂದ ಕಮತಗಿ ಮತ್ತು ಬಸನಗೌಡ ಬಿಎಂ. ಅವರ ನೇತೃತ್ವದಲ್ಲಿ ಸಿಬ್ಬಂದಿ ದಾಳಿ ನಡೆಸಿದ್ದರು. ಈ ಕುರಿತು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.