ಸಿಲಿಂಡರ್ ಸ್ಫೋಟ; ಮತ್ತೋರ್ವ ಸಾವು
ತೀವ್ರ ಗಾಯಗೊಂಡಿದ್ದ ಎಂಟೂ ಜನರ ಮೃತ್ಯು
ಹುಬ್ಬಳ್ಳಿ: ಇಲ್ಲಿನ ಹಳೇ ಹುಬ್ಬಳ್ಳಿ ಘೋಡಕೆ ಪ್ಲಾಟ್‌ನಲ್ಲಿ ಇಬ್ಬರಿಗೆ ಮಾರಕಾಸ್ತ್ರದಿಂದ ಇರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಪಾದಿತನನ್ನು ಹಿಡಿಯಲು ಹೋದಾಗ ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ ಓರ್ವನ ಕಾಲಿಗೆ ಗುಂಡು ಹೊಡೆದು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಕಮೀಷನರ್ ಎನ್. ಶಶಿಕುಮಾರ್ ತಿಳಿಸಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಳೇ ಹುಬ್ಬಳ್ಳಿ ಘೋಡಕೆ ಪ್ಲಾಟ್ ನ ಮಜಬುಲ್ ಎಂಬಾತನೇ ಪೊಲೀಸರಿಂದ ಗುಂಡು ಹೊಡೆಸಿಕೊಂಡಾತ. ಈತ ಕ್ಷುಲ್ಲಕ ಕಾರಣಕ್ಕಾಗಿ ಸೋಮವಾರ ರಾತ್ರಿ ಹಳೇ ಹುಬ್ಬಳ್ಳಿ ಆನಂದನಗರ ರಸ್ತೆ ಘೋಡಕೆ ಪ್ಲಾಟ್ ನ ತಬ್ಲಿಕ್ ಮಸೀದಿ ಬಳಿ ಅದೇ ಪ್ರದೇಶದ ಸಮೀರ ಶೇಖ್ (೧೮) ಹಾಗೂ ಸಮೀರ್ ಚಿಕ್ಕಪ್ಪ ಜಾವೀದ್ ಶೇಖ್ (32) ಎಂಬುವರಿಗೆ ಮಾರಕಾಸ್ತ್ರದಿಂದ ಇರಿದು ಸಹಚರರೊಂದಿಗೆ ಮುಜಾಮಿಲ್ ಆರೋಪಿ ಪರಾರಿಯಾಗಿದ್ದ, ಗಾಯಾಳುಗಳು ಕೆಎಂಸಿಆರ್ ಐ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಹಲ್ಲೆಗೆ ಒಳಗಾದ ಕುಟುಂಬಸ್ಥರಿಗೆ ನನ್ನ ಮೇಲೆ ದೂರು ನೀಡತ್ತೀರಾ ಎಂದು ಆರೋಪಿ ಬೆದರಿಕೆ ಹಾಕಿದ್ದಾನೆ. ಹಣ್ಣು ಮಕ್ಕಳಿಗೂ ಬೆದರಿಕೆ ಹಾಕಿದ್ದಾನೆ. ಹೆಣ್ಣು ಮಕ್ಕಳನ್ನು ಬಿಡೋಲ್ಲ, ಅಲ್ಲದೇ ಗಾಯಗೊಂಡ ಕುಟುಂಬದವರಿಗೆ ಕರೆ ಮಾಡಿ ದೂರು ನೀಡಿದರೆ ಜೀವಂತ ಬಿಡೋದಿಲ್ಲ ಎಂದು ಬೆದರಿಕೆ ಹಾಕಿ ಆರೋಪಿ ಪರಾರಿಯಾಗಿದ್ದಾನೆ.
ಆರೋಪಿ ಮುಜಾಮಿಲ್ ಹಣದ ಬೇಡಿಕೆ ಇಟ್ಟಿದ್ದಾನೆ. ನಂತರ ಹೊರವಲಯದಲ್ಲಿ ವಾಹನ ಮೇಲೆ ಬರುತ್ತಿದ್ದ ವ್ಯಕ್ತಿಗೆ ಆರೋಪಿ ಹಾಗೂ ಆತನ ಸಹಚರರು ಹಲ್ಲೆ ಮಾಡಿ ಹಣ ಕಿತ್ತುಕೊಂಡಿದ್ದಾರೆ ಎಂದರು.
ಇಂದು ಬೆಳಿಗ್ಗೆ ಆರೋಪಿಯನ್ನು ಬಂಧನ ಮಾಡಲಾಗಿತ್ತು. ಇತರೆ ಆರೋಪಿಗಳನ್ನು ತೋರಿಸುತ್ತೇನೆಂದು ಹೋದ ಸಂದರ್ಭದಲ್ಲಿ ಇನ್ಸ್ಪೆಕ್ಟರ್ ಹಾಗೂ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾನೆ. ಪೊಲೀಸ್ ಸಿಬ್ಬಂದಿ ಮೇಲೆ ಏಕಾಏಕಿ ಹಲ್ಲೆ ಮಾಡಿ ಓಡಿ ಹೋಗುವ ಸಂದರ್ ಎರಡು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ತಪ್ಪಿಸಿಕೊಂಡು ಓಡುವ ಸಂದರ್ಭದಲ್ಲಿ ಆತನ ಮೇಲೆ ಗುಂಡು ಹಾರಿಸಿ ವಶಕ್ಕೆ ಪಡೆದಿದ್ದಾರೆಂದರು.
ಆರೋಪಿ ಕಾಲಿಗೆ ಗುಂಡು ತಗುಲಿದ್ದು, ಗಾಯಗೊಂಡ ಆರೋಪಿಯನ್ನು ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದರು.
ಸಿಲಿಂಡರ್ ಸ್ಫೋಟ ; ಮತ್ತೋರ್ವ ಸಾವು
ತೀವ್ರ ಗಾಯಗೊಂಡಿದ್ದ ಎಂಟೂ ಜನರ ಮೃತ್ಯು
ಹುಬ್ಬಳ್ಳಿ: ನಗರದ ಅಚ್ಚವ್ವನ ಕಾಲೋನಿಯಲ್ಲಿ ದಿ. 22ರಂದು ಸಂಭವಿಸಿದ ಸಿಲಿಂಡರ್‌ಸ್ಪೋಟದಲ್ಲಿ ಗಾಯಗೊಂಡಿದ್ದ ಇನ್ನೋರ್ವ ಗಾಯಾಳು ಮೃತಪಟ್ಟಿದ್ದು ಇದರೊಂದಿಗೆ ತೀವ್ರ ಸ್ವರೂಪದಲ್ಲಿ ಸುಟ್ಟಿದ್ದ ಎಲ್ಲಾ ಎಂಟು ಗಾಯಾಳುಗಳು ಕೊನೆಯುಸಿರೆಳೆದಂತಾಗಿದೆ.
ಇಸ್ಕಾನ್ ಮಂದಿರದಲ್ಲಿ ಕೆಲಸ ಮಾಡಿಕೊಂಡಿದ್ದ ಸಾಯಿನಗರ ಅಚ್ಚವ್ವನ ಕಾಲೋನಿ ಬಾರಕೇರ ಚಾಳನ ಪ್ರಕಾಶ ನಿಂಗಪ್ಪ ಬಾರಕೇರ (36) ಇಂದು ಬೆಳಗ್ಗೆ 6.30 ರ ಸುಮಾರಿಗೆ ಮೃತಪಟ್ಟಿದ್ದಾರೆ.ನಿನ್ನೆ ಸಂಜೆ ತೇಜಸ್ ಸುತಾರೆ ಮೃತಪಟ್ಟಿದ್ದ. ಘಟನೆಯಲ್ಲಿ ಒಂಭತ್ತು ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ಸುಟ್ಟು ಗಾಯಗೊಂಡಿದ್ದರು. ಅವರಲ್ಲಿ ಬಾಲಕ ವಿನಾಯಕ ಬಾರಕೇರ(12) ಮಾತ್ರ ಚೇತರಿಸಿಕೊಳ್ಳುತ್ತಿದ್ದು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆಂದು ಕೆಎಂಸಿ ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಗಾಯಾಳುಗಳ ರಕ್ಷಣೆಗಾಗಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಸೂಕ್ತ ಚಿಕಿತ್ಸೆ ನೀಡಲೆಂದು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಿಂದಲೂ ತಜ್ಞ ವೈದ್ಯರನ್ನು ಕರೆಯಿಸಿದ್ದರು.ರಾಜ್ಯ ಸರ್ಕಾರ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಮೃತರ ಕುಟುಂಬಕ್ಕೆ ತಲಾ 5ಲಕ್ಷ ರೂ. ಪರಿಹಾರ ಘೋಷಿಸಿದೆ.
ಎಷ್ಟೇ ಪ್ರಯತ್ನ ಪಟ್ಟರೂ ಗಾಯಾಳುಗಳನ್ನು ಉಳಿಸಿಕೊಳ್ಳಲಾಗಲಿಲ್ಲ ಎಂಬ ಕೊರಗು ಬಾಧಿಸುತ್ತಿದೆ ಎಂದಿರುವ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ ಮೃತರ ಆತ್ಮಕ್ಕೆ ಸಂತಾಪ ಸೂಚಿಸಿದ್ದಾರೆ.