ಹುಬ್ಬಳ್ಳಿ-ಧಾರವಾಡ ಸುದ್ದಿ
ಹುಬ್ಬಳ್ಳಿಯಲ್ಲಿ ಐಪಿಎಲ್ ಕ್ರಿಕೆಟ್ ಹಬ್ಬ;  9, 10 ರಂದು ’ಬಿಡಿಕೆ ಮೈದಾನದಲ್ಲಿ ’ಫ್ಯಾನ್ ಪಾರ್ಕ್’ ಸಂಭ್ರಮ!

ಹುಬ್ಬಳ್ಳಿಯಲ್ಲಿ ಐಪಿಎಲ್ ಕ್ರಿಕೆಟ್ ಹಬ್ಬ; 9, 10 ರಂದು ’ಬಿಡಿಕೆ ಮೈದಾನದಲ್ಲಿ ’ಫ್ಯಾನ್ ಪಾರ್ಕ್’ ಸಂಭ್ರಮ!

ಹುಬ್ಬಳ್ಳಿ: ಸ್ಟೇಡಿಯಂಗೆ ಹೋಗಿ ಪಂದ್ಯ ವೀಕ್ಷಿಸಲು ಸಾಧ್ಯವಾಗದ ಕ್ರಿಕೆಟ್ ಅಭಿಮಾನಿಗಳಿಗಾಗಿ ಬಿಸಿಸಿಐ  ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಸುವರ್ಣಾವಕಾಶವೊಂದನ್ನು ಕಲ್ಪಿಸಿದೆ. ನಗರದ ಗೋಪನಕೊಪ್ಪದ ಸಂತೋಷ್ ನಗರದಲ್ಲಿರುವ ಬಿಡಿಕೆ  ಮೈದಾನದಲ್ಲಿ ಮೇ 9 ಮತ್ತು10 ರಂದು ’ಟಾಟಾ ಐಪಿಎಲ್ ಫ್ಯಾನ್ ಪಾರ್ಕ್’ ಆಯೋಜಿಸಲಾಗಿದೆ ಎಂದು ಬಿಸಿಸಿಐ ಹಿರಿಯ ವ್ಯವಸ್ಥಾಪಕ ಸುಮೀತ ಮಲ್ಲಾಪುರ ಹಾಗೂ ಕೆಎಸ್‌ಸಿಎ ಧಾರವಾಡ ವಲಯದ ಅಧ್ಯಕ್ಷ ಅಲ್ತಾಫ್ ಕಿತ್ತೂರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಏನಿದು ಫ್ಯಾನ್ ಪಾರ್ಕ್?:
ಕ್ರಿಕೆಟ್ ಜ್ವರವನ್ನು ದೇಶದ ಮೂಲೆ ಮೂಲೆಗೂ ತಲುಪಿಸುವ ಉದ್ದೇಶದಿಂದ ಈ ಯೋಜನೆ ಜಾರಿಗೆ ತರಲಾಗಿದೆ. ಇಲ್ಲಿ ಬೃಹತ್ ಎಲ್‌ಇಡಿ ಪರದೆಗಳ ಮೂಲಕ ಪಂದ್ಯದ ನೇರ ಪ್ರಸಾರ ಮಾಡಲಾಗುತ್ತದೆ. ಕ್ರೀಡಾಂಗಣದಲ್ಲಿರುವಂತೆ ಧ್ವನಿವರ್ಧಕಗಳು ಮತ್ತು ಸಾವಿರಾರು ಅಭಿಮಾನಿಗಳ ಹರ್ಷೋದ್ಗಾರದ ನಡುವೆ ಪಂದ್ಯವನ್ನು ವೀಕ್ಷಿಸುವುದು ಇಲ್ಲಿನ ವಿಶೇಷತೆಯಾಗಿದ್ದು, ಇದು ಸಾಕ್ಷಾತ್ ಸ್ಟೇಡಿಯಂನಲ್ಲಿ ಕುಳಿತು ಪಂದ್ಯ ನೋಡುವ ಅನುಭವವನ್ನೇ ನೀಡುತ್ತದೆ.

ಮನರಂಜನೆಯ ಮಹಾಪೂರ:
ಸಾರ್ವಜನಿಕರಿಗೆ ಪ್ರವೇಶ ಸಂಪೂರ್ಣ ಉಚಿತವಾಗಿದೆ. ಕೇವಲ ಕ್ರಿಕೆಟ್ ಮಾತ್ರವಲ್ಲದೆ, ಇಲ್ಲಿ ಲೈವ್ ಮ್ಯೂಸಿಕ್, ವೈವಿಧ್ಯಮಯ ಆಹಾರ ಮಳಿಗೆಗಳು, ಮಕ್ಕಳಿಗಾಗಿ ಪ್ರತ್ಯೇಕ ಆಟದ ವಲಯಗಳು, ಫೇಸ್ ಪೇಂಟಿಂಗ್ ಮತ್ತು ವರ್ಚುವಲ್ ಬ್ಯಾಟಿಂಗ್‌ನಂತಹ ಮೋಜಿನ ಚಟುವಟಿಕೆಗಳನ್ನು ಆಯೋಜಿಸಲಾಗಿದೆ. ಲಕ್ಕಿ ಡ್ರಾ ಮೂಲಕ ಅಭಿಮಾನಿಗಳಿಗೆ ಆಕರ್ಷಕ ಬಹುಮಾನಗಳನ್ನು ಗೆಲ್ಲುವ ಅವಕಾಶವೂ ಇದೆ.

ಪಂದ್ಯಗಳ ವಿವರ:
ಅಭಿಮಾನಿಗಳು ಈ ವೇದಿಕೆಯಲ್ಲಿ ೯ ರಂದು ರಾಜಸ್ಥಾನ್ ರಾಯಲ್ಸ್ ಮತ್ತು ಗುಜರಾತ್ ಟೈಟಾನ್ಸ್ ತಂಡಗಳ ನಡುವಿನ ರೋಚಕ ಹಣಾಹಣಿಯನ್ನು ಒಟ್ಟಾಗಿ ವೀಕ್ಷಿಸಬಹುದಾಗಿದೆ. 10 ರಂದು ಮಧ್ಯಾಹ್ನ 1.30ಕ್ಕೆ ಚೆನ್ನೈ ಸೂಪರ್ ಕಿಂಗ್ ಮತ್ತು ಸಂಜೆ ಆರ್‌ಸಿಬಿ ಮತ್ತು ಮುಂಬೈ ಪಂದ್ಯ ನಡೆಯಲಿದೆ. ೪:೦೦ ಗಂಟೆಗೆ ಗೇಟ್‌ಗಳು ತೆರೆಯುತ್ತವೆ. ’ಮೊದಲು ಬಂದವರಿಗೆ ಆದ್ಯತೆ’ ಆಧಾರದ ಮೇಲೆ ಆಸನಗಳು ಲಭ್ಯವಿರುವುದರಿಂದ ಅಭಿಮಾನಿಗಳು ಮುಂಚಿತವಾಗಿಯೇ ಆಗಮಿಸಲು ಕೋರಲಾಗಿದೆ.

ಹೆಚ್ಚುತ್ತಿರುವ ಐಪಿಎಲ್ ಕ್ರೇಜ್
ಕರ್ನಾಟಕದ ಪ್ರಮುಖ ನಗರಗಳಾದ ಹುಬ್ಬಳ್ಳಿ, ಮೈಸೂರು ಮತ್ತು ಮಂಗಳೂರಿನಲ್ಲಿ ಪ್ರತಿ ವರ್ಷವೂ ಈ ಸಡಗರ ಇರುತ್ತದೆ. ಈ ಬಾರಿ ಬೆಳಗಾವಿ ಮತ್ತು ಶಿವಮೊಗ್ಗದಲ್ಲೂ ಫ್ಯಾನ್ ಪಾರ್ಕ್ ಆಯೋಜನೆಯಾಗಿದ್ದು, ಹುಬ್ಬಳ್ಳಿಯ ಸುಮಾರು ೧೦ ಲಕ್ಷಕ್ಕೂ ಹೆಚ್ಚು ಕ್ರಿಕೆಟ್ ಪ್ರೇಮಿಗಳು ಈ ಸೌಲಭ್ಯದ ಲಾಭ ಪಡೆಯುವ ನಿರೀಕ್ಷೆಯಿದೆ ಎಂದು ತಿಳಿಸಿದರು.

administrator

Related Articles

Leave a Reply

Your email address will not be published. Required fields are marked *