ಹುಬ್ಬಳ್ಳಿ-ಧಾರವಾಡ ಸುದ್ದಿ
ಯುವ ಶಿಕ್ಷಕರಿಗೆ ಲಸಿಕೆ: ಸ್ವಾಗತ

ಯುವ ಶಿಕ್ಷಕರಿಗೆ ಲಸಿಕೆ: ಸ್ವಾಗತ

ಹುಬ್ಬಳ್ಳಿ: 18+ ವರ್ಗದಡಿ ಯುವ ಶಿಕ್ಷಕರಿಗೂ ಸಹ ಆದ್ಯತೆ ಮೇರೆಗೆ ಕೋವಿಡ್ ಲಸಿಕೆ ನೀಡಬೇಕೆಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ ಎಸ್.ಸುರೇಶಕುಮಾರ ರವರು ಮಾಡಿದ ಮನವಿಗೆ ತಾತ್ವಿಕ ಒಪ್ಪಿಗೆ ದೊಕಿರುವುದನ್ನು ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ಸ್ವಾಗತಿಸಿದೆ.
18+ ವರ್ಗದಡಿ ಯುವ ಶಿಕ್ಷಕರಿಗೆ ಕೋವಿಡ್ ಲಸಿಕೆ ನೀಡುವ ಶಿಬಿರಗಳನ್ನು ರಾಜ್ಯಾದ್ಯಂತ ನಡೆಸಲು ಮಾಧ್ಯಮಿಕ ಶಿಕ್ಷಕ ಸಂಘ ಎಲ್ಲಾ ರೀತಿಯಿಂದಲೂ ವ್ಯವಸ್ಥೆ ಮಾಡಿಕೊಂಡಿದ್ದು, ಸರಕಾರ ಒಪ್ಪಿಗೆ ನೀಡಿದ ತಕ್ಷಣ ಪ್ರಾರಂಭಿಸಲು ಸಿದ್ದವಾಗಿರುವುದಾಗಿ ರಾಜ್ಯ ಅಧ್ಯಕ್ಷರಾದ ಸಂದೀಪ ಬೂದಿಹಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

administrator

Related Articles

Leave a Reply

Your email address will not be published. Required fields are marked *