ಹುಬ್ಬಳ್ಳಿ-ಧಾರವಾಡ ಸುದ್ದಿ

ಶುಲ್ಕ ವಿಚಾರದಲ್ಲಿ ಮಾರ್ಗಸೂಚಿ ರೂಪಿಸಲಿ; ಬೆಳಗಾವಿಯಲ್ಲಿ ಅಧಿವೇಶನ ಪರ ಹೊರಟ್ಟಿ ಬ್ಯಾಟಿಂಗ್

ಶುಲ್ಕ ವಿಚಾರದಲ್ಲಿ ಮಾರ್ಗಸೂಚಿ ರೂಪಿಸಲಿ
ಬೆಳಗಾವಿಯಲ್ಲಿ ಅಧಿವೇಶನ ಪರ ಹೊರಟ್ಟಿ ಬ್ಯಾಟಿಂಗ್
ಹುಬ್ಬಳ್ಳಿ: ಶಿಕ್ಷಣ ಸಂಸ್ಥೆಗಳ ಶುಲ್ಕ ವಿಚಾರವಾಗಿ ಸರ್ಕಾರ ಹಾಗೂ ಶಿಕ್ಷಣ ಸಚಿವರು ಸೂಕ್ತ ಮಾರ್ಗಸೂಚಿ ರೂಪಿಸಬೇಕೆಂದು ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ಕಾರ್ಮಿಕ ಇಲಾಖೆ ಪೂರೈಸಿರುವ ಆಹಾರ ಕಿಟ್‌ಗಳನ್ನು ಲ್ಯಾಮಿಂಗ್ಟನ್ ಶಾಲೆ ಆವರಣದಲ್ಲಿಂದು ಫಲಾನುಭವಿಗಳಿಗೆ ವಿತರಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಶುಲ್ಕ ವಿಚಾರವಾಗಿ ನಾನು ಸರ್ಕಾರಕ್ಕೆ ಸಲಹೆ ನೀಡಿದ್ದೇನೆ.ಎಬಿಸಿಡಿ ಆಧಾರದ ಮೇಲೆ ಬೆಂಗಳೂರು, ಜಿಲ್ಲಾ ಕೇಂದ್ರ, ತಾಲೂಕು ಹಾಗು ಹಳ್ಳಿಗಳಲ್ಲಿನ ಶಿಕ್ಷಣ ಸಂಸ್ಥೆಗಳ ವಿಚಾರವಾಗಿ ಸಲಹೆ ನೀಡಿರುವೆ. ಆದ್ಯತೆ ಮೇರೆಗೆ ಅಧಿಕಾರಿಗಳು ಫೀ ಡೋನೇಷನ್ ಮಾರ್ಗಸೂಚಿ ರಚಿಸಬೇಕು ಎಂದರು.
ಹಳ್ಳಿಗಳಲ್ಲಿನ ಪೋಷಕರಿಗೆ ಶುಲ್ಕ ಕಟ್ಟಲು ಆಗುವುದಿಲ್ಲ. ಫೀ ಕೊಡಲು ಆಗದಿದ್ದರೇ ಮಕ್ಕಳಿಗೆ ಆನಲೈನ್ ಶಿಕ್ಷಣ ದೊರೆಯುವುದಿಲ್ಲ. ಶಿಕ್ಷಣ ಇಲಾಖೆ ಯಲ್ಲಿನ ಇರುವಂತಹ ಬೇಜವಾಬ್ದಾರಿ ಅಧಿಕಾರಿಗಳು ಬೇರೆ ಯಾವ ಇಲಾಖೆಯಲ್ಲೂ ಇಲ್ಲ ಎಂದರು.
ಸಭಾಪತಿ ಆಗಿರುವುದರಿಂದ ನನ್ನ ಬಾಯಿ ಬಂದ್ ಆಗಿದೆ. ರಾಜ್ಯದಲ್ಲಿ ಶೇ ೮೫ ರಷ್ಟು ಶಿಕ್ಷಣ ಸಂಸ್ಥೆಗಳು ರಾಜಕಾರಣಿ ಹಾಗೂ ಅಧಿಕಾರಿಗಳದ್ದೆ ಇವೆ.
ಸರ್ಕಾರ ಖಾಸಗಿ ಲಾಬಿಗೆ ಮಣಿಯಬಾರದು ಎಂದು ಕಿವಿಮಾತು ಹೇಳಿದರು.
ಅಧಿವೇಶನ ನಡೆಯಲಿ: ಸರ್ಕಾರ ಈ ಭಾರಿ ಬೆಳಗಾವಿಯಲ್ಲಿ ಅಧಿವೇಶನ ನಡೆಸಬೇಕು.ಅಲ್ಲಿ ಅಧಿವೇಶನ ನಡೆಯದೇ ೨ ವರ್ಷ ಆಯ್ತು. ಜುಲೈ ತಿಂಗಳಿನಲ್ಲಾದ್ರೂ ಅಧಿವೇಶನ ನಡೆಯಲಿ. ಸಂಪುಟದಲ್ಲಿ ಈ ವಿಚಾರ ಚರ್ಚೆಗೆ ಬಂದಿಲ್ಲ.ಸಭಾಧ್ಯಕ್ಷರು ಹಾಗೂ ಸಭಾಪತಿ ಆಗಿರುವ ನನ್ನದೂ ಬೆಳಗಾವಿಯಲ್ಲಿ ಅಧಿವೇಶನ ಆಗಬೇಕು ಅನ್ನೋ ಆಶಯವಿದೆ ಎಂದರು.
ಕಾರ್ಮಿಕ ಇಲಾಖೆ ಅಧಿಕಾರಿಗಳಾದ ಮಾರಿಕಾಂಬಾ ಹುಲಕೋಟಿ, ಮಲ್ಲಿಕಾರ್ಜುನ ಜಗೋರ ಇನ್ನಿತರರಿದ್ದರು.

 

 

 

 

administrator

Related Articles

Leave a Reply

Your email address will not be published. Required fields are marked *