ಹುಬ್ಬಳ್ಳಿ : ದಿನಕ್ಕೊಂದು ಆವಾಂತರ ಸೃಷ್ಟಿಸುತ್ತಲೇ ಸಾಗಿರುವ ಸ್ಮಾರ್ಟ್ ಸಿಟಿ ಯೋಜನೆಯ ಮಲ್ಟಿ ಕಾರ್ ಪಾರ್ಕಿಂಗ್ ಕಾಮಗಾರಿ ವೇಳೆ ಇಂದು ಕುಸಿತವಾಗಿದೆ.
ಹುಬ್ಬಳ್ಳಿಯ ಹಳೇ ಕೋರ್ಟ್ ಸರ್ಕಲ್ ಬಳಿ ನಿರ್ಮಾಣ ಹಂತದಲ್ಲಿರುವ ಕಟ್ಟಡ ಇಂದು ಕುಸಿತಗೊಂಡಿದ್ದು ಯಾರೂ ಇಲ್ಲದ್ದರಿಂದ ಭಾರಿ ಅನಾಹುತ ತಪ್ಪಿದೆ.
ರಾತ್ರಿ ವೇಳೆಯಲ್ಲಿ ಈ ಘಟನೆ ನಡೆದಿದ್ದರಿಂದ ಯಾವುದೇ ಅನಾಹುತ ತಪ್ಪಿದೆ.
ಒಟ್ಟು ೮ ಅಂತಸ್ತಿನ ಬಹುಮಹಡಿ ಮಲ್ಟಿ ಕಾರ್ ಪಾರ್ಕಿಂಗ್ ಕಟ್ಟಡ ಇದಾಗಿದ್ದು ಎರಡನೆ ಅಂತಸ್ತಿನ ಸ್ಲ್ಯಾಬ್ ಹಾಕುವಾಗ ಕುಸಿದಿದೆ.
ಮಣ್ಣು ಕುಸಿತದಿಂದ ಇಡೀ ಕಟ್ಟಡವೇ ನೆಲಸಮವಾಗಿದೆ.