ಧಾರವಾಡ: ಶಾಸಕ ಅಮೃತ್ ದೇಸಾಯಿ ಅವರು ಕೋವಿಡ್ ಮಹಾಮಾರಿ ಯನ್ನು ಕಟ್ಟಿಹಾಕಲು ಶ್ರಮಿಸಿದ ಕೊರೊನಾ ವಾರಿಯರ್ಸ್‌ಗಳ ಕಾರ್ಯಕ್ಕೆ ಮೆಚ್ಚಿಗೆ ವ್ಯಕ್ತಪಡಿಸಿ ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿನ ಸುಮಾರು ೧೫೦ ಬಡ ಕಾರ್ಮಿಕರಿಗೆ ರಾಜ್ಯ ಸರ್ಕಾರದ ಆಹಾರದ ಕಿಟ್‌ಗಳನ್ನು ವಿತರಿಸಿದರು.
ಇದೇ ಸಂಧರ್ಭದಲ್ಲಿ ಅಮೃತ ದೇಸಾಯಿ ಗೆಳೆಯರ ಬಳಗದ ಸದಸ್ಯರು ಕಾರ್ಮಿಕರ ಜೀವನೋಪಾಯಕ್ಕೆ ಧನ ಸಹಾಯ ಮಾಡಿದರು.
ನಂತರ ಮಾತನಾಡಿದ ಶಾಸಕ ಅಮೃತ ದೇಸಾಯಿ, ಕೊರೊನಾ ಕಾರಣ ದಿಂದ ಕಾರ್ಖಾನೆಗಳೆಲ್ಲ ಸ್ಥಗಿತಗೊಂಡ ಕಾರಣ ಬಡ ಕಾರ್ಮಿಕರಿಗೆ ಯಡಿಯೂರಪ್ಪನವರ ನೇತೃತ್ವದ ಸರ್ಕಾರ ಕಾರ್ಮಿಕರ ಕಷ್ಟಗಳಿಗೆ ಸ್ಪಂದಿಸಿದೆ ಹಾಗೂ ಗೆಳೆಯರ ಬಳಗದವರು ಕೊರೊನಾ ವಾರಿಯರ್ಸ್ ಹಾಗು ಕಾರ್ಮಿಕರಿಗೆ ಧನ ಸಹಾಯದ ಮೂಲಕ ಅವರಿಗೆ ಅಭಿನಂದನೆ ವ್ಯಕ್ತಪಡಿಸುವ ಒಳ್ಳೆಯ ಕೆಲಸ ಮಾಡುತ್ತಿರುವುದು ಒಳ್ಳೆಯ ವಿಚಾರ ಎಂದರು.
ಬಿಜೆಪಿ ಮಂಡಳ ಅಧ್ಯಕ್ಷ ರುದ್ರಪ್ಪ ಅರಿವಾಳ, ತಾಪಂ ಸದಸ್ಯ ಮಹಾದೇವ ದಂಡಿನ, ಕೆಡಿಪಿ ಸದಸ್ಯ ನಾಗನಗೌಡ ಪಾಟೀಲ, ಮುಖಂಡರಾದ ಸಂಭಾಜಿ ಜಾಧವ, ಪ್ರಕಾಶ ಮನಿಗೇನಿ, ಪ್ರವೀಣ ಕಮ್ಮಾರ, ಗುರುಪಾದಪ್ಪ ಅಪ್ಪಣ್ಣವರ ಹಾಗೂ ಅಮೃತ್ ದೇಸಾಯಿ ಗೆಳೆಯರ ಬಳಗದ ಸದಸ್ಯರು ಉಪಸ್ಥಿತರಿದ್ದರು.