ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯ ೮೨ ವಾರ್ಡುಗಳ ವಾರ್ಡ್ವಾರು ಅಂತಿಮ ಮತದಾರರ ಪಟ್ಟಿ ಪ್ರಕಟಗೊಂಡ ನಂತರ ಚುನಾವಣೆಗೆ ದಿನಗಣನೆ ಆರಂಭಗೊ0ಡಿದೆ.
ಇAದು ಚುನಾವಣಾ ಆಯೋಗ ಹುಬ್ಬಳ್ಳಿ ಧಾರವಾಡ, ಬೆಳಗಾವಿ, ಕಲಬುರಗಿ ಮಹಾನಗರಪಾಲಿಕೆ ಚುನಾವಣೆಗಳ ದಿನಾಂಕ ಪ್ರಕಟಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದ್ದರೂ ಇಂದು ಅಂತಹ ಪ್ರಕ್ರಿಯೆ ನಡೆದಿಲ್ಲ.
ಮುಂದಿನ ವಾರ ಸಂಬ0ಧಿಸಿದ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜತೆ ಆಯೋಗ ಸಭೆ ನಡೆಸಿ ಅದಾದ ಎರಡು ದಿನಗಳಲ್ಲಿ ಪಾಲಿಕೆ ಚುನಾವಣೆ ಘೋಷಣೆ ಪ್ರಕಟಿಸಲಿದೆ ಎಂದು ತಿಳಿದುಬಂದಿದೆ.
ತನ್ಮಧ್ಯೆ ಕಾಂಗ್ರೆಸ್ನ ಅಲ್ತಾಫ್ ಹಳ್ಳೂರ ವಾರ್ಡ ಮೀಸಲಾತಿ ವಿರುದ್ದ ಹೈಕೋರ್ಟನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದು, ಅದೂ ಸಹ ಅಂಗೀಕಾರವಾಗಿದೆ.ಈಗಾಗಲೇ ಬಿಜೆಪಿ ಹಾಗೂ ಕಾಂಗ್ರೆಸ್ ಪಾಳೆಯದಲ್ಲಿ ಚಟುವಟಿಕೆಗಳು ಗರಿಗೆದರಿದ್ದು, ಅನೇಕ ವಾರ್ಡಗಳಲ್ಲಿ ಅರ್ಧ ಡಜನ್ಗೂ ಹೆಚ್ಚು ಆಕಾಂಕ್ಷಿಗಳಿದ್ದಾರೆ.
ಮೀಸಲಾತಿಯ ಸಮಸ್ಯೆಯಿದ್ದವರು ತಮ್ಮ ಪತ್ನಿ, ತಾಯಂದಿರನ್ನು ಅಖಾಡಾಕ್ಕಿಳಿಸಲು ಸಜ್ಜಾಗಿದ್ದು,ಕೆಲವರು ಪಕ್ಕದ ವಾರ್ಡಗಳತ್ತ ಲಕ್ಷö್ಯ ಹರಿಸಿದ್ದು, ಸದ್ದಿಲ್ಲದೇ ಕಾರ್ಯ ನಡೆಸುತ್ತಿದ್ದಾರೆ.