ಮು0ಡಗೋಡ: ಅಕ್ರಮವಾಗಿ ಸಾಗವಾನಿ ನಾಟಾ ಸಾಗಿಸುತ್ತಿದ್ದಾಗ ಅರಣ್ಯ ಇಲಾಖೆಯು ದಾಳಿ ನಡೆಸಿ ಆರೋಪಿ ಸಮೇತ ಸಾಗವಾನಿ ಕಟ್ಟಿಗೆಯನ್ನು ವಶಪಡಿಸಿಕೊಂಡ ಘಟನೆ ರಾಮಾಪೂರ ಅರಣ್ಯ ಪ್ರದೇಶದಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದೆ.
ಶೆಟ್ಟೆಪ್ಪ ಭೊವಿವಡ್ಡರ ಬಂಧಿತ ಆರೋಪಿಯಾಗಿದ್ದಾನೆ. ಕೃತ್ಯದಲ್ಲಿ ಭಾಗ ವಹಿಸಿದ ಇತರೆ ಆರೋಪಿಗಳು ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ ಎನ್ನಲಾಗಿದ್ದು, ಶುಕ್ರವಾರ ರಾತ್ರಿ ಪಾಳಾ ಶಾಖೆಯ ಹುಡೇಲಕೊಪ್ಪ ಗಸ್ತಿನ ಅರಣ್ಯಪ್ರದೇಶಕ್ಕೆ ಅಕ್ರಮವಾಗಿ ಕಾಡಿಗೆ ನುಗ್ಗಿ ಮರಗಳನ್ನು ಕತ್ತರಿಸಿ ನಾಟಾ ಮಾಡಿಕೊಂಡು ಓಮಿನಿ ಕಾರಿನಲ್ಲಿ ಸಾಗಿಸುತ್ತಿದ್ದಾಗ ಖಚಿತ ಮಾಹಿತಿ ಪಡೆದ ವಲಯ ಅರಣ್ಯಾಧಿಕಾರಿ ಹಾಗೂ ಸಿಬ್ಬಂದಿ ದಾಳಿ ನಡೆಸಿದ್ದಾರೆ.
ದಾಳಿ ವೇಳೆ ಒಬ್ಬ ಆರೋಪಿಯನ್ನು ಬಂಧಿಸಿ ಸುಮಾರು ೭೦ ಸಾವಿರ ರೂ ಬೆಲೆ ಬಾಳುವ ನಾಟಾಗಳನ್ನು ಹಾಗೂ ಕುಕೃತ್ಯಕ್ಕೆ ಬಳಸಿದ ಮಾರುತಿ ಒಮಿನಿ ಕಾರನ್ನು ವಶಪಡಿಸಿಕೊಂಡು ಕಾನೂನು ಕ್ರಮ ಕೈಗೊಂಡಿದ್ದಾರೆ.
ಯಲ್ಲಾಪುರ ಉಪಅರಣ್ಯ ಸಂರಕ್ಷಣಾಧಿಕಾರಿ ಗೋಪಾಲಕೃಷ್ಣ, ಮುಂಡಗೋಡ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಶೈಲ್ ವಾಲಿ ಮಾರ್ಗದರ್ಶನ ಹಾಗೂ ಕಾತೂರ ವಲಯ ಅರಣ್ಯಾಧಿಕಾರಿ ಅಜಯ ನಾಯ್ಕ್ ನೇತೃತ್ವದಲ್ಲಿ ನಡೆದ ಉಪವಲಯ ಅರಣ್ಯಾಧಿಕಾರಿಗಳಾದ ಚಂದ್ರಕಾAತ ಮುಕ್ರಿ, ಅರುಣಕುಮಾರ ನಡುವಿನಹಳ್ಳಿ, ಸಿಬ್ಬಂದಿಗಳಾದ ಕಿರಣ ಹಂಚಿನಮನಿ, ಮುಂಜುನಾಥ ದೊಡ್ಡಣ್ಣವರ, ಮುತ್ತುರಾಜ ಹಳ್ಳಿ, ನಾರಾಯಣ ಓಣಿಕೇರಿ, ಪ್ರಕಾಶ ಬಳ್ಳಾರಿ, ಬಸವರಾಜ ವಾಲ್ಮೀಕಿ, ಚಾಲಕರಾದ ಶಿವಾನಂದ ಮಾಯಣ್ಣವರ, ಕೃಷ್ಣ ಹೊಸಳ್ಳಿ ಭಾಗವಹಿಸಿದ್ದರು.