ಹುಬ್ಬಳ್ಳಿ: ಬಿಜೆಪಿ ವ್ಯವಸ್ಥಿತವಾಗಿ ದೇಶದಲ್ಲಿ ತುರ್ತು ಪರಿಸ್ಥಿತಿ ನಿರ್ಮಾಣ ಮಾಡುತ್ತಿದ್ದು, ಈ ವೇಳೆ ಮತ್ತೊಮ್ಮೆ ಎಲ್ಲ ವಿರೋಧ ಪಕ್ಷಗಳು ತಾತ್ವಿಕ ಸಿದ್ದಾಂತಗಳ ಆಧಾರದ ಮೇಲೆ ಒಂದಾಗುವ ಸ್ಥಿತಿ ನಿರ್ಮಾಣವಾಗಿದೆ ಎಂದು ಜೆಡಿಎಸ್ ಪ್ರಚಾರ ಸಮಿತಿ ಅಧ್ಯಕ್ಷ ವೈ.ಎಸ್.ದತ್ತಾ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಏರ್ಪಡಿಸಿ ಮಾತನಾಡಿದ ಅವರು, ೧೯೭೦ ರ ದಶಕದಲ್ಲಿ ದೇಶದಲ್ಲಿ ಕಾಂಗ್ರೆಸ್ ನೇರವಾಗಿ ತುರ್ತುಪರಿಸ್ಥಿತಿಗೆ ಕಾರಣ ವಾಗಿತ್ತು. ಆಗ ಲೋಕನಾಯಕ ಜಯಪ್ರಕಾಶ್ ನಾರಾಯಣ್ ಅವರ ನೇತೃತ್ವದಲ್ಲಿ ಜನತಾ ಪರಿವಾರದಲ್ಲಿ ಎಲ್ಲ ನಾಯಕರು ಒಂದಾಗಿ ಹೊಸ ಯುಗಾಂತ್ಯಾಕ್ಕೆ ಕಾರಣರಾದರು. ಅದರಂತೆ ಇದೀಗ ಬಿಜೆಪಿ ವಿರುದ್ಧ ಎಲ್ಲ ವಿರೋಧ ಪಕ್ಷಗಳು ಧ್ರುವಿಕರಣ ಅನಿವಾರ್ಯ ಆಗಿದೆ ಎಂದರು.
ಪೆಗಾಸಿಸ್ ಪ್ರಕರಣಕ್ಕೆ ಸಂಬAಧಿಸಿದAತೆ ಕಂಪನಿಯೇ ಭಾರತ ಸರ್ಕಾರ ತಮ್ಮ ತಂತ್ರಾAಶ ಖರೀದಿ ಮಾಡಿದೆ ಎಂದು ಹೇಳಿದೆ. ಈ ಹಿನ್ನೆಲೆಯಲ್ಲಿ ದೇಶದ ೫೦ ಕ್ಕೂ ಹೆಚ್ಚು ಪ್ರಮುಖ ವ್ಯಕ್ತಿಗಳ ಫೋನ್ ಕದ್ದಾಲಿಕೆ ನಡೆದಿರುವಕ್ಕೆ ಕಾರಣವಾಗಿದೆ. ಇನ್ನೂ ಒಂದು ತಂತ್ರಾ0ಶಕ್ಕೆ ೭೦೦ ಕೋಟಿ ಖರ್ಚಾಗಲಿದ್ದು ಅದರಂತೆ ೫೦ ಅಂದರೆ ೨೫೦೦ ಕೋಟಿ ಜನರ ತೆರಿಗೆ ಹಣವನ್ನು ಸರ್ಕಾರ ದುರುಪಯೋಗ ಪಡಿಸಿ ಕೊಂಡಿದೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಪಕ್ಷ ಸಂಘಟನೆಗೆ ಒತ್ತು ನೀಡುವುದಾಗಿ ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಗುರುರಾಜ ಹುಣಸೀಮರದ, ವೀಕ್ಷಕಿ ರಾಜೇಶ್ವರಿ ಹೆಗಡೆ, ರಾಜು ಅಂಬೋರೆ, ಸಾಧಿಕ್ ಹಕಿಂ, ಗಜಾನನ ಅಣವೇಕರ ಸೇರಿದಂತೆ ಮುಂತಾದವರು ಇದ್ದರು.
ಸಿಎಂ ಮುಂದೆ ಸಾಲು ಸಾಲು ಸವಾಲು
ಬೊಮ್ಮಾಯಿ ಅವರು ರಾಜ್ಯದ ನೂತನ ಸಿಎಂ ಆಗಿದ್ದಾರೆ. ಅವರು ಮೂಲತಃ ಅವರು ಜನತಾ ಪರಿವಾರದವರು. ಅವರಿಗೆ ಪಕ್ಷದ ವತಿಯಿಂದ ಅಭಿನಂದನೆ ಸಲ್ಲಿಸಿದರು. ಬಸವರಾಜ ಬೊಮ್ಮಾಯಿ ಮೃದು ಸ್ವಭಾವ ವ್ಯಕ್ತಿಯಾಗಿದ್ದಾರೆ. ಇದೀಗ ರಾಜ್ಯದಲ್ಲಿ ಯುದ್ಧದ ಪರಿಸ್ಥಿತಿ ಇದೆ. ಹಾಗಾಗಿ ಅವರ ಮುಂದೆ ಸಾಲು ಸಾಲು ಸವಾಲುಗಳಿಗೆ ಇವುಗಳನ್ನು ಅವರು ಯಾವ ರೀತಿ ಎದುರಿಸಿ ಕೆಲಸ ಮಾಡುತ್ತಾರೆ ಎಂಬುದನ್ನು ಕಾದು ನೋಡೋಣಾ ಎಂದು ವೈ.ಎಸ್.ದತ್ತಾ ಹೇಳಿದರು.