ಹುಬ್ಬಳ್ಳಿ: ಬೊಮ್ಮಾಯಿಯವರ ಸಂಪುಟದಲ್ಲಿ ಸಚಿವರಾಗಿರುವ ಶಂಕರಪಾಟೀಲ ಮುನೇನಕೊಪ್ಪ ಅವರು ನಾಳೆ ಪ್ರಥಮ ಬಾರಿಗೆ ತವರಿಗೆ ಆಗಮಿಸಲಿದ್ದಾರೆ.
ಶನಿವಾರ ಬೆಳಿಗ್ಗೆ 8 ಗಂಟೆಗೆ ಹುಬ್ಬಳ್ಳಿಗೆ ಆಗಮಿಸಿ ನೇರವಾಗಿ ಗೋಕುಲ ರಸ್ತೆಯಲ್ಲಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶಕ್ತಿ ಕೇಂದ್ರ ‘ಕೇಶವ ಕುಂಜ’ಕ್ಕೆ ಭೇಟಿ ನೀಡಲಿದ್ದಾರೆ. ನಂತರ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರ ನಿವಾಸಕ್ಕೆ ತೆರಳುವರಲ್ಲದೇ ಕುಸುಗಲ್ಲ ರಸ್ತೆಯಲ್ಲಿರುವ ತಮ್ಮ ನಿವಾಸಕ್ಕೆ ತೆರಳಿ, ಅಲ್ಲಿಂದ ಧಾರವಾಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ಏರ್ಪಡಿಸಿರುವ ಸಭೆಯಲ್ಲಿ ಪಾಲ್ಗೊಳ್ಳುವರು.
ಇತ್ತೀಚಿನ ಮಳೆಗೆ ಮನೆ ಕುಸಿದ ಸಂತ್ರಸ್ತರಿಗೆ ಪರಿಹಾರ ವಿತರಣೆ ಹಾಗೂ ಕೋವಿಡ್ ನಿಯಂತ್ರಣ ಕುರಿತು ಜಿಲ್ಲಾಧಿಕಾರಿ ಹಾಗೂ ಇತರ ಅಧಿಕಾರಿಗ ಳೊಂದಿಗೆ ಚರ್ಚಿಸುವರು.
ತದನಂತರ ನವಲಗುಂದಕ್ಕೆ ತೆರಳಿ ರೈತ ಹುತಾತ್ಮ ವೀರಗಲ್ಲಿಗೆ ಮಾಲಾರ್ಪಣೆ ಮಾಡಲಿದ್ದಾರಲ್ಲದೇ ಅಮರಗೋಳ ಗ್ರಾಮದಲ್ಲಿರುವ ಸಚಿವರ ತಂದೆ, ತಾಯಿ ಹಾಗೂ ಸಹೋದರನ ಸಮಾಧಿಗೆ ಪೂಜೆ ಸಲ್ಲಿಸುವರು.
ಮರಳಿ ನವಲಗುಂದಕ್ಕೆ ತೆರಳಿ ಗವಿಮಠ ಹಾಗೂ ಇತರ ಸ್ಥಳಗಳಿಗೆ ಭೇಟಿ ನೀಡಿ ಹುಬ್ಬಳ್ಳಿಗೆ ಆಗಮಿಸಿ ವಾಸ್ತವ್ಯ ಹೂಡುವರು.
ನಿವಾಸಕ್ಕೆ ಬಿಗಿ ಭದ್ರತೆ: ಕುಸುಗಲ್ಲ ರಸ್ತೆಯ ಶ್ರೀ ಲಕ್ಷ್ಮೀ ಸಾಯಿ ಲೇಔಟ್ನಲ್ಲಿರುವ ಸಚಿವ ಸ್ಥಾನ ಅಲಂಕರಿಸಿರುವ ನವಲಗುಂದ ಶಾಸಕ ಶಂಕರಪಾಟೀಲ ಮುನೇನಕೊಪ್ಪ ಅವರ ನಿವಾಸದ ಸುತ್ತ ಭದ್ರತೆ ಹಾಕಲಾಗಿದ್ದು, ಅಲ್ಲದೇ ಸುತ್ತ ಮುತ್ತ ಪ್ರದೇಶ ಗುರುವಾರವೇ ಸ್ವಚ್ಛಗೊಳಿಸಲಾಗಿದೆ.