ಹುಬ್ಬಳ್ಳಿ-ಧಾರವಾಡ ಸುದ್ದಿ

ಆರ್ಥಿಕ ನೆರವಿನ ಸದುಪಯೋಗಕ್ಕೆ ಗೋಡ್ಸೆ ಕರೆ; ಕ್ಷತ್ರಿಯ ಮರಾಠಾ ಪರಿಷತ್‌ನಿಂದ ಚೆಕ್ ವಿತರಣೆ

ಧಾರವಾಡ: ಕರ್ನಾಟಕ ಕ್ಷತ್ರೀಯ ಮರಾಠಾ ಪರಿಷತ್ ಕೊಡಮಾಡುವ ಆರ್ಥಿಕ ನೆರವನ್ನು ಸಮಾಜದ ವಿದ್ಯಾರ್ಥಿಗಳು ಸದುಪಯೋಗ ಮಾಡಿಕೊಳ್ಳಬೇಕು ಎಂದು ಕರ್ನಾಟಕ ಕ್ಷತ್ರೀಯ ಮರಾಠಾ ಪರಿಷತ್ ಸಲಹೆಗಾರ ಸಂಭಾಜಿ ಗೋಡ್ಸೆ ಹೇಳಿದರು.
ಸೋಮವಾರ ನಗರದ ಗೋಡ್ಸೆ ಪ್ಲಾಟ್‌ನಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಎಂಜನೀಯರಿಂಗ್ ಓದುತ್ತಿರುವ ಸಮಾಜದ ಪ್ರತಿಭಾವಂತ ವಿದ್ಯಾರ್ಥಿ ಮನೋಜ ಬಾಗೇವಾಡಿಗೆ ಕರ್ನಾಟಕ ಕ್ಷತ್ರೀಯ ಮರಾಠಾ ಪರಿಷತ್ ಕೊಡಮಾಡಿದ ಚೆಕ್‌ನ್ನು ವಿತರಿಸಿ ಅವರು ಮಾತನಾಡಿದರು.


ಸಮಜಮುಖಿ ಚಿಂತನೆಯ ಹಿನ್ನೆಲೆಯಲ್ಲಿ ಕರ್ನಾಟಕ ಕ್ಷತ್ರೀಯ ಮರಾಠಾ ಪರಿಷತ್ ಕಾರ್ಯೋನ್ಮುಖವಾಗಿದ್ದು, ಸಮಾಜದ ಜನರ ಅದರಲ್ಲಿಯೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸೂಕ್ತ ನೆರವು ನೀಡುತ್ತಿದೆ. ಆದ್ದರಿಂದ ಅರ್ಹರು ಈ ನೆರವಿನ ಸದುಪಯೋಗ ಮಾಡಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಹೇಳಿದರು.
ಸಭೆಯಲ್ಲಿ ಸಮಾಜದ ಪ್ರಮುಖರಾದ ಅರ್ಜುನ ಕದಂ, ದತ್ತಾ ಮೋಟೆ, ಮಲ್ಲೇಶಿ ಶಿಂಧೆ,ಸುನೀಲ ಮೋರೆ, ಗಂಗಾಧರ ಡಾಂಗೆ, ರವಿ ಚವ್ಹಾಣ, ರಾಜು ಕಾಳೆ, ವಿಠ್ಠಲ ಚವ್ಹಾಣ, ಸುರೇಶ ಸವ್ವಾಸಿ, ನಾಗರಾಜ ಆರೇರ ಇನ್ನಿತರರು ಇದ್ದರು.

 

administrator

Related Articles

Leave a Reply

Your email address will not be published. Required fields are marked *