ಹುಬ್ಬಳ್ಳಿ: ಅವಳಿನಗರ ಮಹಾನಗರಪಾಲಿಕೆ ಸಹಿತ ವಿವಿಧ ಅವಧಿ ಮುಗಿದ ಸ್ಥಳೀಯ ಸಂಸ್ಥೆಗಳ ಚುನಾವಣಾ ಭವಿಷ್ಯ ಎರಡು ದಿನದಲ್ಲಿ ನಿರ್ಧಾರವಾಗಲಿದೆ.
ಈಗಾಗಲೇ ದಿ. 4ರಂದು ಹೈಕೋರ್ಟ ಚುನಾವಣಾ ಆಯೋಗಕ್ಕೆ ಸ್ಪಷ್ಟ ನಿರ್ಧಾರಕ್ಕೆ ಸೂಚನೆ ನೀಡಿ ವಿಚಾರಣೆಯನ್ನು ಆ.13ಕ್ಕೆ ಮುಂದೂಡಿದ್ದು, ಚುನಾವಣಾ ವೇಳಾಪಟ್ಟಿಯ ವಿವರದೊಂದಿಗೆ ಕೋರ್ಟಗೆ ಮಾಹಿತಿ ನೀಡಬೇಕಾದ ಅನಿವಾರ್ಯತೆ ಇದೆ.
ಚುನಾವಣಾ ವೇಳಾಪಟ್ಟಿಯ ವಿವರ ಮುಚ್ಚಿದ ಲಕೋಟೆಯಲ್ಲಿ ನೀಡಿ ಚುನಾವಣಾ ದಿನಾಂಕ ಪ್ರಕಟಿಸುವುದೋ ಅಥವಾ ದಿನಾಂಕ ಪ್ರಕಟಿಸಿ ಹೀಗೆ ಮಾಡಲಾಗಿದೆ ಎಂಬ ವಿವರ ನೀಡುವುದೋ ಎಂಬುದು ಕುತೂಹಲ ಕೆರಳಿಸಿದೆ.
ಅವಧಿ ಸಂಸ್ಥೆಗಳ ಪೂರ್ಣಗೊಂಡಿರುವ ರಾಜ್ಯದ ಕೆಲ ನಗರ ಸ್ಥಳೀಯ “ಚುನಾವಣೆಗೆ ಸಂಸ್ಥೆಗಳಿಗೆ ನಿಗದಿತ ಕಾಲಮಿತಿಯೊಳಗೆ ಚುನಾವಣೆ ಸಂಬಂಧಿಸಿದ ನಡೆಸಲು ಸರ್ಕಾರ, ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಲು ದಾಖಲಿಸಿಕೊಂಡಿರುವ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಿಜೆ ಎ.ಎನ್. ಓಕ್ ನೇತೃತ್ವದ ವಿಭಾಗಿಯ ಪೀಠವೇ ನಿರ್ದೇಶನ ನೀಡಿರುವುದರಿಂದ ಮುಂದೂಡುವ ಸಾಧ್ಯತೆಗಳಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.
ಕೋವಿಡ್ ಮೂರನೇ ಅಲೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಮತ್ತೆ ಪ್ರಮಾಣ ಪತ್ರ ಸಲ್ಲಿಸಲಿದ್ದು, ಡಿಸೆಂಬರ್‌ವರೆಗೆ ಮುಂದೂಡುವ ಸಾಧ್ಯತೆಗಳು ಇವೆ ಎಂಬ ಮಾತೂ ಸಹ ಕೇಳಿ ಬರುತ್ತಿದ್ದರೂ ಆ ಸಾಧ್ಯತೆ ಕಡಿಮೆ ಎನ್ನಲಾಗಿದೆ.
ಈಗಾಗಲೇ ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆ ಪಾಲಿಕೆ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದ ಮತಗಟ್ಟೆಗಳಿಗೆ ವಿವಿಧ ಮತದಾನ ಸಾಮಗ್ರಿಗಳ ಪೂರೈಕೆಗೆ ಇ-ಟೆಂಡರ್ ಕರೆದು ದಿ. 13ರೊಳಗೆ ಇ-ಪ್ರೊಕ್ಯೂರ್‌ಮೆಂಟ್ ಮೂಲಕ ಸಲ್ಲಿಸಲು ಹೇಳಿರುವದು ಶೀಘ್ರ ಚುನಾವಣೆ ನಡೆವ ಮುನ್ಸೂಚನೆ ಆಗಿದೆ ಎನ್ನಲಾಗಿದೆ.
ಆಡಳಿತಾರೂಢ ಬಿಜೆಪಿಯ ಆಂತರಿಕ ಮೂಲಗಳನ್ವಯ ಹುಬ್ಬಳ್ಳಿ ಧಾರವಾಡ ಚುನಾವಣೆ ನಿಶ್ಚಿತ ಎನ್ನಲಾಗುತ್ತಿದೆ.
ತನ್ಮಧ್ಯೆ ವಾರ್ಡ ಮೀಸಲು, ಎಸ್‌ಸಿಗೆ ಅನ್ಯಾಯ ಕುರಿತ ಅರ್ಜಿಗಳ ವಿಚಾರಣೆ ಧಾರವಾಡ ಹೈಕೋರ್ಟ ಪೀಠದಲ್ಲಿ ಇಂದು ಮಧ್ಯಾಹ್ನ ವಿಚಾರಣೆಗೆ ಬರುತ್ತಿದೆ.