ಹುಬ್ಬಳ್ಳಿ: ಬಿಜೆಪಿಯ ಜನಾಶ್ರೀರ್ವಾದ ಯಾತ್ರೆಗೆ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರು ಇಂದು ಚಾಲನೆ ನೀಡಿದರು.
ಇಲ್ಲಿನ ಕ್ಯೂಬಿಕ್ಸ್ ಹೊಟೇಲ್ ಐವರು ಕೋವಿಡ್ ವಾರಿಯರ್ಸ್ಗೆ ಸನ್ಮಾನಿಸುವ ಮೂಲಕ ಯಾತ್ರೆ ಉದ್ಘಾಟಿಸಿದ ಚಂದ್ರಶೇಖರ
ನಿನ್ನೆ ಸ್ವಾತಂತ್ರ್ಯೋತ್ಸವದಂದು ಪ್ರಧಾನಿ ನರೇಂದ್ರ ಮೋದಿಯವರು ಹೇಳಿದ್ದಾರೆ ಯಹೀ ಸಮಯ ಹೇ ಯಹೀ ಸಮಯ ಹೇ ಎಂದು ಅಂದರೆ ಇದರ ಅರ್ಥ ಭಾರತ ಬೆಳವಣಿಗೆ ಹೊಂದಲು ಸರಿಯಾದ ಸಮಯ ಬಂದಿದೆ. ಭಾರತ ದೇಶ ಅಭಿವೃದ್ಧಿಯತ್ತ ಸಾಗುತ್ತಿದೆ. ಪ್ರಪಂಚ ನಮ್ಮ ದೇಶದತ್ತ ತಿರುಗಿ ನೋಡುತ್ತಿದೆ ಎಂದರು.
ಮುAದಿನ 25 ವರ್ಷ ದಲ್ಲಿ ಯುವ ಪೀಳಿಗೆಗೂ ಅಭಿವೃದ್ಧಿ ಯೋಜನೆಗಳು ಬಳಸಿಕೊಳ್ಳುವ ಮೂಲ ಉದ್ದೇಶ ಮೋದಿ ಸರ್ಕಾರದ್ದಾಗಿದೆ.
ಸ್ವಾತಂತ್ರ÷್ಯ ಸಿಕ್ಕ ನಂತರ ಕಾಂಗ್ರೆಸ್ 60 ವರ್ಷ ಕೇವಲ ಕುಟುಂಬ ರಾಜಕಾರಣ ಮಾಡಿದೆ. ಭ್ರಷ್ಟಾಚಾರ ಆಡಳಿತ ನಡೆಸಿ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ. ಆದರೆ ಬಿಜೆಪಿ ಸಾಮಾಜಿಕ ನೆಲೆಗಟ್ಟಿನಲ್ಲಿ ಎಲ್ಲರಿಗೂ ಸಮನಾಗಿ ನೋಡಿ ಅಭಿವೃದ್ಧಿ ಪಥÀದತ್ತ ಸಾಗುತ್ತಿದೆ ಎಂದು ಹೇಳಿದರು.
ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ ಕಟೀಲು ಮಾತನಾಡಿ, ಚುನಾವಣೆ ಬಂದಾಗ ಜನಾರ್ಶಿರ್ವಾದ ಮಾಡುವುದು, ಜೈಲಿನಿಂದ ಹೋಗುವಾಗ ಜೈಲಿನಿಂದ ಬರುವಾಗ ಯಾತ್ರೆ ಮಾಡುವ ಸರ್ಕಾರ ನಮ್ಮದಲ್ಲ. ಜನಸಾಮಾನ್ಯರ ಹತ್ತಿರ ಅವರ ಕಷ್ಟ ತಿಳಿದುಕೊಂಡು ಜಾರಿಗೆ ತಂದಿರುವ ಯೋಜನೆಗಳನ್ನು ಜನರಿಗೆ ಅರ್ಥಮಾಡಿಸಲು ಈಗ ಜನಾಶೀರ್ವಾದ ಯಾತ್ರೆ ಹಮ್ಮಿಕೊಂಡಿದೆ ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಮಾತನಾಡಿ, ಜನಸಂಘದಿ0ದಲೂ ಬಿಜೆಪಿಗೆ ಹುಬ್ಬಳಿ-ಧಾರವಾಡ ಶಕ್ತಿಕೇಂದ್ರವಾಗಿದೆ. 1967ರಲ್ಲಿಯೇ ಹುಬ್ಬಳ್ಳಿ ಸೇರಿದಂತೆ ಉತ್ತರದಿಂದ ನಾಲ್ವರು ಜನಸಂಘದ ಶಾಸಕರು ಶಾಸಕರು ಆಯ್ಕೆಯಾಗಿದ್ದರು. 1976 ರಲ್ಲಿ ಜನಸಂಘದವರು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮಹಾಪೌರರಾಗಿದ್ದರು. ಇದೀಗ ಪಾಲಿಕೆ ಚುನಾವಣೆ ಯಲ್ಲಿ ಮತ್ತೆ ಅಧಿಕಾರ ಹಿಡಿಯುವುದು ಶತಸಿದ್ದ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಮಾತನಾಡಿ, ಪ್ರಧಾನಿ ಮೋದಿ ಸರಕಾರ ಜನರ ಸರಕಾರವಾಗಿದೆ. ಕಳಸಾ-ಬಂಡೂರಿ ಯೋಜನೆ ಜಾರಿಗೊಳಿಸುತ್ತೇವೆ ಎಂದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಮಾತನಾಡಿ ಜನರೊಂದಿಗೆ ಬೆರತು ಜನರ ಸಮಸ್ಯೆ ಅರಿತುಕೊಂಡು ಅವರಿಗೆ ಹತ್ತಿರವಾಗುವಂತಹ ಕಾರ್ಯ ದೇಶದ ಪ್ರಧಾನಿ ನರೇಂದ್ರ ಮೋದಿಯ ಆಡಳಿತ ಮಾಡುತ್ತಿದೆ. ಕೋವಿಡ್ ಎಂಬ ಬಿಕ್ಕಟ್ಟಿನಲ್ಲಿ ಭಾರತ ದೇಶ ಈಡೀ ಜಗತ್ತಿಗೆ ಜಗನಮಾತೆಯಾಗಿದೆ ಎಂದರು.
ಶಾಸಕರಾದ ಅಮೃತ ದೇಸಾಯಿ, ಅರವಿಂದ ಬೆಲ್ಲದ, ಮುಖಂಡರಾದ ಕೇಶವ ಪ್ರಸಾದ, ಜಯಾ ರುದ್ರೇಶ,ಲಿಂಗರಾಜ ಪಾಟೀಲ ಇನ್ನಿತರರು ಇದ್ದರು.
ಇದೇ ಸಂದರ್ಭದಲ್ಲಿ ಕೇಂದ್ರ ಸಚಿವ ರಾಜೀವ ಚಂದ್ರಶೇಖರ ಅವರಿಗೆ ಬಸವೇಶ್ವರರ ಪುತ್ಥಳಿ ನೀಡಿ ಸನ್ಮಾನಿಸಲಾಯಿತು.